ವಿಜಯಪುರ

ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ ಪಾಲಕರಿಗೆ ಸನ್ಮಾನ

ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ ಪಾಲಕರಿಗೆ ಸನ್ಮಾನ

ದೇವರಹಿಪ್ಪರಗಿ 15 : ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಬಡ ರೈತ ಕುಟುಂಬದ ಪ್ರತಿಭೆ ಗಂಗಾಧರ ಮುತ್ತಗಿ ಕೆ-ಸಿಇಟಿಯಲ್ಲಿ ಐತಿಹಾಸಿಕ ಸಾಧನೆ ಮಾಡಿ ವೆಟರ್ನರಿ ವಿಭಾಗದಲ್ಲಿ ಸ್ಪಾಟ್ ರಾಜ್ಯಕ್ಕೆ 0.5 ರ್ಯಾಂಕ್ ಹಾಗೂ ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ 3.5 ರ್ಯಾಂಕ್ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಹೆಸರನ್ನು ಇಮ್ಮಡಿಗೊಳಿಸಿದ್ದಾನೆ ಎಂದು ಗ್ರಾಮದ ಶಾಲೆಯ ಶಿಕ್ಷಕರು ಎಸ್ಡಿಎಂಸಿ ಪದಾಧಿಕಾರಿಗಳು ವಿದ್ಯಾರ್ಥಿಯ ಪಾಲಕರಿಗೆ ಸನ್ಮಾನಿಸಿ ಗೌರವಿಸಿದರು. ಶಾಲೆಯ ಮುಖ್ಯ ಗುರುಗಳಾದ ಎಸ್‌.ಸಿ.ತಳವಾರ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. 

ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಸಾಧನೆ ಇತರರಿಗೆ ಮಾದರಿ ಎಂದು ಹೇಳಿದರು.ಎಸ್ ಡಿ ಎಂ ಸಿ ಅಧ್ಯಕ್ಷರಾದ ದಶರಥ ಹಡಪದ ಅವರು ಮಾತನಾಡಿ, ಗಂಗಾಧರ ಮುತ್ತಗಿ ವಿದ್ಯಾರ್ಥಿಯ ಸಾಧನೆ ಗ್ರಾಮೀಣ ಸರ್ಕಾರಿ ಶಾಲೆಗಳ ಬಗ್ಗೆ ಇರುವ ನಂಬಿಕೆಯನ್ನು ಹೆಚ್ಚಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶದ ನೀರೀಕ್ಷೆ ನಮ್ಮ ಶಾಲೆಯಲ್ಲಿ ಮೂಡಿಸಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯ ಪಾಲಕರುಗಳಾದ ಹಣಮಂತ ಮುತ್ತಗಿ ಹಾಗೂ ಈರಮ್ಮ ಮುತ್ತಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ಇದೇ ಸಂದರ್ಭದಲ್ಲಿ ಸ.ಉ.ಹಿ.ಪ್ರಾ ಶಾಲೆ ಮುಖ್ಯ ಗುರುಗಳಾದ ಮಹ್ಮದ್ ಇಸ್ಹಕ್  ಬೀಳಗಿ, ಎಸ್‌ಡಿ ಎಮ್‌ಸಿ ಸದಸ್ಯರುಗಳಾದ ಮಹಿಬೂಬ  ನಾಯ್ಕೋಡಿ, ಇಸ್ಮಾಯಿಲ್ ನಾಯ್ಕೋಡಿ, ಶಾಲೆಯ ಶಿಕ್ಷಕರುಗಳಾದ ಕೆ. ಎಮ್‌. ಮೂಲಿಮನಿ, ಎಮ್‌. ಜೆ. ಟಕ್ಕಳಕಿ, ಬಿ.ಎಮ್‌. ದುಬಲಗುಂಡಿ, ವ್ಯಾ. ಪಿ. ಗುಜ್ಜಲಕರ, ಎನ್ ಜಿ. ಪಾಟೀಲ,ಲಲಿತಾ ಪಾಟೀಲ, ಪ್ರಭಾವತಿ ನಾಟಿಕಾರ, ಅಂಗನವಾಡಿ ಕಾರ್ಯಕರ್ತೆಯರಾದ ಕಸ್ತೂರಿ ಹಿಪ್ಪರಗಿ, ಸುರೇಖಾ ಹಿರೇಮಠ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ