ವಿಜಯಪುರ

ಪಾಲಕರ ಸಮಾಲೋಚನಾ ಸಭೆ

ಪಾಲಕರ ಸಮಾಲೋಚನಾ ಸಭೆ

ಪಾಲಕರ ಸಮಾಲೋಚನಾ ಸಭೆ  

ತಾಳಿಕೋಟಿ 18: ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಬುಧವಾರ 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ಪಾಲಕರ ಸಮಾಲೋಚನಾ ಸಭೆ ಕರೆಯಲಾಗಿತ್ತು.  ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಸಚಿನ.ಎಚ್‌.ಪಾಟೀಲ ವಹಿಸಿದ್ದರು. ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ ಪಾಲಕರಿಗೆ ಓದಿನ ಬಗ್ಗೆ ಅನೇಕ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಪಾಲಕರ ಸಭೆಯ ಪಾಲಕರ ಪ್ರತಿನಿಧಿಯಾಗಿ ಹಿರಿಯರಾದ ರೂಪ ಸಿಂಗ ಚವಾಣ (ಕೊಳ್ಯಾಳ), ಸೀತಾಬಾಯಿ ಜಾಧವ (ಗೆದ್ದಲಮರಿ ತಾಂಡಾ) ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಸಭೆಯಲ್ಲಿ ಪ್ರೌಢಶಾಲೆಯ ಬಿ.ಆಯ್‌.ಹಿರೇಹೊಳಿ, ಎಸ್‌.ವಿ.ಜಾಮಗೊಂಡಿ, ಎಸ್‌.ಸಿ.ಗುಡಗುಂಟಿ, ಎಚ್‌.ಬಿ.ಪಾಟೀಲ, ಎಮ್‌.ಎಸ್‌.ರಾಯಗೊಂಡ, ಯು.ಎಚ್‌.ಗಟನೂರ, 9ನೇ ತರಗತಿ ವರ್ಗ ಶಿಕ್ಷಕರು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.ಶಿಕ್ಷಕರಾದ ಎಸ್‌.ವಿ.ಜಾಮಗೊಂಡಿ ಮತ್ತು ಎಸ್‌.ಸಿ.ಗುಡಗುಂಟಿ, ಪಾಲಕರ ಕರ್ತವ್ಯ ಮತ್ತು ಜವಾಬ್ದಾರಿ ತಿಳಿಸಿದರು. ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಿ.ಆಯ್‌.ಹಿರೇಹೊಳಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ