ಹಗರಿಬೊಮ್ಮನಹಳ್ಳಿ

ಪರಮೇಶ್ವರಯ್ಯ ಸೊಪ್ಪಿಮಠಗೆ ರಾಜ್ಯ ಮಟ್ಟದ ಉತ್ತಮ ಕೃತಿ ಪ್ರಶಸ್ತಿ

ಪರಮೇಶ್ವರಯ್ಯ ಸೊಪ್ಪಿಮಠಗೆ ರಾಜ್ಯ ಮಟ್ಟದ ಉತ್ತಮ ಕೃತಿ ಪ್ರಶಸ್ತಿ

ಹಗರಿಬೊಮ್ಮನಹಳ್ಳಿ05 : ಕನ್ನಡ ನಾಡು ನುಡಿಯ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳ ಉತ್ತಮ ಕೃತಿಗಳಿಗೆ ಆಜೂರು ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ನೀಡುವ ರಾಜ್ಯ ಮಟ್ಟದ ಉತ್ತಮ ಸಾಹಿತ್ಯ ಕೃತಿ ಪ್ರಶಸ್ತಿಗೆ 2020-21ನೇ ಸಾಲಿನಲ್ಲಿ ಪರಮೇಶ್ವರಯ್ಯ ಸೊಪ್ಪಿಮಠರವರ "ಕನ್ನಡ ಕಹಳೆ" ಕೃತಿ ಅಯ್ಕೆಯಾಗಿದೆ.

ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಶ್ರೀ ರಾಮಪ್ಪ ಬಸಪ್ಪ ಆಜೂರ ಮತ್ತು  ಗಂಗಮ್ಮ ರಾಮಪ್ಪ ಆಜೂರ ದಂಪತಿಗಳ 30ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಫೆ.08ರಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿಯಲ್ಲಿ ಆಯೋಜಿಸಲಾಗಿದೆ, ಪ್ರಶಸ್ತಿಯು ಐದು ಸಾವಿರ ನಗದು ಬಹುಮಾನ,ಸ್ಮರಣ ಫಲಗ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ.ಈ ಸಮಾರಂಭದಲ್ಲಿ ಮುಗಳಖೋಡ,ಕೂಡಲ ಸಂಗಮ ಸೇರಿದಂತೆ ಹತ್ತಾರು ಪೂಜ್ಯರ ಮತ್ತು ನಾಡಿನ ಪ್ರಸಿದ್ದರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸುದ್ದಿ ಓದಿ