ಮುಂದಗೋಡ

ಪಾಠೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ಪಲ್ಲವಿ ಪ್ರಥಮ

ಪಾಠೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ಪಲ್ಲವಿ ಪ್ರಥಮ

ಲೋಕದರ್ಶನ ವರದಿ 

ಮುಂಡಗೋಡ:ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರ ವತಿಯಿಂದ ಧಾರವಾಡದಲ್ಲಿ ಆಯೋಜಿಸಿದ್ದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತಾಲೂಕಿನ ಮಳಗಿ ಕೆ.ಪಿ.ಎಸ್‌.ಪ್ರೌಢಶಾಲೆಯ ಸಹಶಿಕ್ಷಕಿ ಪಲ್ಲವಿ ಕಾನಡೆ ಸ್ಥಳದಲ್ಲಿಯೇ ಪಾಠೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.  

ಪ್ರಭಾರ ಬಿಇಒ ಅಕ್ಕಮಹಾದೇವಿ ಗಾಣಿಗೇರ, ಶಿಕ್ಷಕರು ಮತ್ತು ಸಿಬ್ಬಂದಿ ಪಲ್ಲವಿ ಕಾನಡೆ ಅವರಿಗೆ ಅಭಿನಂದಿಸಿದ್ದಾರೆ. 


ಸುದ್ದಿ ಓದಿ