ಪಾಕಿಸ್ತಾನದ ಬಾಬರ್ ನಂಬರ್-1 ಬ್ಯಾಟ್ಸಮನ್..!
ಬೆಂಗಳೂರು, ನ 3: ಹೌದು.. ಒಂದು ಕಾಲದಲ್ಲಿ ಐಸಿಸಿ ರಾಂಕಿಂಗ್‌ನಲ್ಲಿ ಭಾರತ ಹಾಗೂ ಟೀಮ್ ಇಂಡಿಯಾ ಆಟಗಾರರು ಅಜರಾಮರರಾಗಿದ್ದರು. ಈಗ ಎಲ್ಲವೂ ಬದಲಾಗಿದೆ. ಐಸಿಸಿಯಿಂದ ರಿಲೀಸ್ ಆಗಿರುವ ನೂತನ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ.
ಇಂಗ್ಲೆಂಡ್ ಬ್ಯಾಟ್ಸಮನ್ ಆಗಿರುವ ಡೇವಿಡ್ ಮಲಾನ್ ಅವರನ್ನು ಹಿಂದಿಕ್ಕಿರುವ ಬಾಬರ್, 834 ಅಂಕ ಪಡೆದು ಅಗ್ರಗಣ್ಯರಾಗಿದ್ದಾರೆ. ಇನ್ನು ಬಾಕಿ ಉಳಿದಂತೆ ವಿರಾಟ್ ಕೊಹ್ಲಿ 5ನೇ ಸ್ಥಾನ ಹಾಗೂ ಕೆ.ಎಲ್.ರಾಹುಲ್ 8ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.
ಒನ್ ಡೇಯಲ್ಲೂ ಪಾಕ್‌ನ ಬಾಬರ್!
ಇನ್ನೂ ಒನ್ ಡೇ ರೇಟಿಂಗ್ ನಲ್ಲಿ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಮೂರು ಪ್ರಕಾರದ ಪಂದ್ಯಗಳಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ, ಟಾಪ್ 5ರಲ್ಲಿ ತಮ್ಮ ಸ್ಥಾನ ಹೊಂದಿದ್ದಾರೆ.
ಹಸರಂಗ್ ನಂಬರ್ ಒನ್ ಬೌಲರ್!
ಶ್ರೀಲಂಕಾ ತಂಡದ ಆಟಗಾರ ಟಿ-20 ವಿಶ್ವಕಪ್ ನ ಭರ್ಜರಿ ಲಾಭ ಪಡೆದುಕೊಂಡಿದ್ದಾರೆ. ಟಿ-20 ಪಾರ್ಮ್ಯಾಟ್ ನಲ್ಲಿ 776 ರೇಟಿಂಗ್‌ಳೊಂದಿಗೆ ವಿಶ್ವದ ನಂಬರ್-1 ಬೌಲರ್ ಎನಿಸಿಕೊಂಡಿದ್ದಾರೆ. ಟಾಪ್-10 ಬೌಲರ್ ಗಳ ಪಟ್ಟಿ ಹಾಗೂ ಆಲ್ ರೌಂಡರ್ ಪಟ್ಟಿಯಲ್ಲಿ ಭಾರತದ ಯಾವೊಬ್ಬ ಆಟಗಾರ ಇಲ್ಲ.