ಪಕ್ಕಿರೇಶ ಕೊಂಡಾಯಿಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 03: ತಾಲೂಕಿನ ಹುಲಸೋಗಿ ಗ್ರಾಮದ 2020-2021ನೇ ಸಾಲಿನ ರಾಜೋತ್ಸವ ಪ್ರಶಸ್ತಿ ವಿಜೇತ ಪಕ್ಕಿರೇಶ ಕೊಂಡಾಯಿ ಅವರನ್ನು ಕರ್ನಾಟಕ ರೈತಸೇನಾ ಜಿಲ್ಲಾಧ್ಯಕ್ಷ ವರುಣಗೌಡ್ರ ಎಂ.ಪಾಟೀಲ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಶ್ಯಾಡಂಬಿ ಗ್ರಾಮದ ಅವರ ತೋಟದ ಮನೆಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು ರಂಗಭೂಮಿ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಕಳೆದ 36ವರ್ಷಗಳಿಂದ ಸಲ್ಲಿಸುತ್ತಿದ್ದು ಅವರ ಸೇವೆಗೆ ಸಂದ ಗೌರವ ತಾಲೂಕಿನ ಕಲಾಬಳಗ ಹಾಗೂ ಕಲಾವಿದರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಸಲ್ಲಿಸಲು ಸ್ಪೂರ್ತಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ರಾಜೋತ್ಸವ ಪ್ರಶಸ್ತಿ ವಿಜೇತ ಪಕ್ಕಿರೇಶ ಕೊಂಡಾಯಿ ಮಾತನಾಡಿ ಇಂತಹ ಪ್ರಶಸ್ತಿಗಳಿಂದ ಕಲಾವಿದನಿಗೆ ಇನ್ನೂ ಹೆಚ್ಚಿನ ಕೆಲಸ ಮಾಡುವ ಜವ್ದಾಬಾರಿಯನ್ನು ಹೆಚ್ಚಿಸುತ್ತದೆ ಅಲ್ಲದೇ ನನಗೆ ಕರೆದು ಸನ್ಮಾನಿಸಿ ಅಭಿನಂದಿಸಿದ ವರುಣಗೌಡ್ರ ಪಾಟೀಲರಿಗೆ ಕಲಾಬಳಗದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವರದಿಗಾರ ಬಸವರಾಜ ಹಿರೇಮಠ, ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ, ತಾರಕೇಶ ಮಠದ, ಮಹಾಂತೇಶ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಜಾನಪದ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.