ಬಳ್ಳಾರಿ

ಕೇಂದ್ರ ಕಾರಾಗೃಹದ ಬಂದಿಗಳಿಗೆ ಪೇಂಟಿಂಗ್ ತರಬೇತಿ ಸಮಾರೋಪ

ಕೇಂದ್ರ ಕಾರಾಗೃಹದ ಬಂದಿಗಳಿಗೆ ಪೇಂಟಿಂಗ್ ತರಬೇತಿ ಸಮಾರೋಪ

ಬಳ್ಳಾರಿ 09: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಕಳೆದ ಒಂದು ವಾರದಿಂದ ಕಾರಾಗೃಹದ ಬಂದಿಗಳಿಗೆ ನಡೆಸಿಕೊಡಲಾಗುತ್ತಿದ್ದ ಪೇಂಟಿಂಗ್ ತರಬೇತಿಯ ಸಮಾರೋಪ ಸಮಾರಂಭವು ಗುರುವಾರ ಜರುಗಿತು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ತರಬೇತಿ ಪಡೆದ 38 ಕೈದಿಗಳಿಗೆ ತರಬೇತಿ ಪ್ರಮಾಣಪತ್ರ ಹಾಗೂ ಕಿಟ್ ನೀಡಿ,ಶುಭಕೋರಿದರು. 

ಈ ಸಂದರ್ಭದಲ್ಲಿ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ಹಾಗೂ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. 


ಸುದ್ದಿ ಓದಿ