ಇತಿಮಿತಿಯೊಳಗಿನ ಗತಿಯು... ಸಹಜ ಜೀವನದ ಉನ್ನತಿಗೆ ಅಧಿಪತಿಯು
ಪ್ರತಿಯೊಬ್ಬರೂ ಜೀವನದಲ್ಲಿ ಉನ್ನತವಾದುದನು ಸಾಧಿಸಬೇಕು. ಸುಖ ಮತ್ತು ನೆಮ್ಮದಿಯ ಬದುಕನ್ನು ಸಾಗಿಸಬೇಕು. ಸಾಧ್ಯವಾದ ಮಟ್ಟಿಗೆ ಈ ಸಮಾಜಕ್ಕೆ ಉತ್ತಮವಾದ ಸೇವೆಯನ್ನು ನೀಡಿ ತನ್ನ ಇರುವಿಕೆಯನ್ನು ಸಾದರಪಡಿಸಬೇಕು ಎನ್ನುವುದೇ ಆಗಿರುತ್ತದೆ.
ಇಂತಹ ಬದುಕಿಗಾಗಿ ಆತನು ಹಗಲಿರುಳು ಎಡಬಿಡದೆ ನಾನಾ ರೀತಿಯ ವೇಷಗಳನ್ನು ಹಾಕಿ ವೈವಿಧ್ಯಮಯ ಪ್ರಯತ್ನಗಳನ್ನು ಮಾಡಿ. ತನ್ನ ಗುರಿ ಸಾಧನೆಗೆ ಶ್ರಮ ಹಾಕುತ್ತಲೇ ಇರುತ್ತಾನೆ. ಈ ರೀತಿಯ ಜೀವನ ಕ್ರಮ ಪ್ರತಿಯೊಬ್ಬರ ಜೀವನದ ಅವಿಭಾಗ್ಯ ಪ್ರಕ್ರಿಯೆಯೂ ಹೌದು.
ಈ ಕಾರ್ಯ ಸಾಧನೆಗಾಗಿಯೇ ಬಲವಾದ ಆಯ್ಕೆ ಮತ್ತು ನಿರ್ಧಾರವನ್ನು ಕೈಗೊಳ್ಳುತ್ತಿರುತ್ತಾನೆ. ಗುರಿಯ ಸ್ಪಷ್ಟತೆ. ನಿಖರತೆ. ಸಾಧನೆಯ ಮಾರ್ಗ. ಸಾಧನಾ ಸಲಕರಣೆಗಳ ಲಭ್ಯತೆಯ ಅರಿವು ಹಾಗೂ ಸಾಮಾಜಿಕ ಸಹಕಾರದ ಕುರಿತು ಅರಿಯಲೆತ್ನಿಸುತ್ತಿರುತ್ತಾನೆ. ಅಂದರೆ ನಾನು ಏನು ಸಾಧಿಸಲು ಹೊರಟಿದ್ದೇವೆ.? ಸಾಧಿಸುವ ಮಾರ್ಗ ಯಾವುದು? ಸಾಧನೆಯ ನಂತರದ ಪರಿಣಾಮಗಳೇನು? ಯಾರಿಗಾಗಿ ಮಾಡುತ್ತಿದ್ದೇವೆ? ಯಾಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಹಾಗೂ ಈ ಸಾಧನೆಗೆ ಬೇಕಾದ ಮೂಲ ವಸ್ತುಗಳ ಪೂರೈಕೆ ಮಾಡಿಕೊಳ್ಳುವುದು ಹೇಗೆ ಹಾಗೂ ಮಾರಾಟ ಮಾಡಿ ಲಾಭ ಗಳಿಸುವ ಪರಿಯನ್ನೂ ಯಾವೆಲ್ಲಾ ಮೂಲಗಳಿಂದ ಸಂಗ್ರಹಿಸಬೇಕು ಎಂಬುದನ್ನು ಮೊದಲೇ ತಿಳಿದಿರಬೇಕಾಗುತ್ತದೆ. ಯೋಚನೆಯಿಂದ ಹಿಡಿದು... ಯೋಜನಾ ಕಾರ್ಯರೂಪ ಮತ್ತು ಪರಿಣಾಮದ ಹಂತದವರೆಗೂ ತಾನು ಕೈಗೊಳ್ಳುವ ಕಾರ್ಯದ ಕುರಿತು ಅಧ್ಯಯನ ಮಾಡಬೇಕಾಗುತ್ತದೆ. ಸ್ಷಷ್ಟತೆ ಇದ್ದರೆ ಮಾತ್ರ ಆತ ಅಥವಾ ಆಕೆ ಜೀವನದಲ್ಲಿ ಯಶ ಕಾಣಲು ಸಾಧ್ಯವಾಗುತ್ತದೆ ಎಂದೇ ಭಾವಿಸಬೇಕು.
ಇದರ ಜೊತೆ ಜೊತೆಗೆ ತನ್ನ ನಮ್ಮ ದೈಹಿಕ. ಭೌದ್ದಿಕ ಹಾಗೂ ಪೋಷಕರ ಸಾಮರ್ಥ್ಯದ ಅರಿವೂ ಇರಬೇಕಾಗುತ್ತದೆ. ಒಂದು ಉದಾರಣೆಯೊಂದಿಗೆ ವಿವರಿಸುವುದಾದರೆ... ನನ್ನ ಅನೇಕ ವಿದ್ಯಾರ್ಥಿಗಳು ಅತ್ಯಂತ ಚಾಣಾಕ್ಷತನ. ವಿದ್ಯೆ ಮತ್ತು ಬುದ್ದಿವಂತರಾಗಿದ್ದರೂ ವಿದ್ಯಾಭ್ಯಾಸದ ಅವಧಿ ಮತ್ತು ಜೀವನ ನಿರ್ವಹಣೆಯ ಸಮಯದಲ್ಲಿ ಅತಿ ಹೀನಾಯ ಬದುಕನ್ನು ಸಾಗಿಸುತ್ತಿದ್ದಾರೆ. ಇಡಿ ಜೀವನವನ್ನೇ ದಾರಿ ತಪ್ಪಿಸಿ ಕವಲೊಡೆದ ಮಾರ್ಗದಲ್ಲಿ ಸಾಗಲಾರಂಭಿಸಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ.ವಿದ್ಯಾವಂತರಾದ ಇವರುಗಳು ತಾವು ಸಾಧಿಸಬೇಕಿರುವ ಸಾಧನೆಯ ಹಾದಿಯನ್ನು ಹುಡುಕಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತಮ್ಮ ದೈಹಿಕ ಮತ್ತು ಬೌದ್ದಿಕ. ಕೌಟುಂಬಿಕ. ಸಾಮಾಜಿಕ ಹಾಗೂ ವಾಸ್ತವದ ಸ್ಥಿತಿಯ ಅನುಕೂಲವನ್ನರಿಯದೆ ತಮ್ಮಲ್ಲಿರುವ ಆತ್ಮವಿಶ್ವಾಸದ ಸಾಮರ್ಥ್ಯವನ್ನರಿಯದೆ ಯಾರದೋ ಮಾತೀನ ಮುಲಾಜಿಗೆ ಪ್ರತಿಷ್ಠೆಯ ಪ್ರಭಾವಕ್ಕೆ ಇಲ್ಲವೇ ನಾವು ಉತ್ತಮವಾದ ಫಲಿತಾಂಶವನ್ನು ತಂದಿದ್ದೇವೆ ಎಂಬ ಅಹಂಮ್ಮಿನ ನಡವಳಿಕೆಯಲ್ಲಿ ತಮ್ಮ ಜೀವನದ ದಾರಿಗೆ ತಾವೇ ಅಡ್ಡಲವಾಗಿ ನಿಂತಿದ್ದಾರೆ. ಸಾಧಿಸುವ ಗುರಿ ಸಾಧನೆಯ ವಿಷಯದ ಆಯ್ಕೆಯಲ್ಲಿ ಅಸಮರ್ಥರಾಗಿದ್ದೀರಿ ಎಂದೇ ಭಾವಿಸಲಾಗುತ್ತದೆ. ಅಂದುಕೊಂಡಂತೆ ಹಿಡಿದ ಕಾರ್ಯ ನಿಭಾಯಿಸಲಾರದೆ ಅರ್ಧಕ್ಕೆ ನಿಲ್ಲಿಸಿ ಸಾಮಾನ್ಯ ಕೂಲಿ ಕಾರ್ಮಿಕನಂತೆ ಬದುಕುತ್ತಿದ್ದಾರೆ.
ಉದಾಹರಣೆಗೆ ಬಹುತೇಕ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದೇನೆ ಎಂಬ ಕಾರಣಕ್ಕೆ ಕಠಿಣವಾದ ಮತ್ತು ವೆಚ್ಚದಾಯಕ ವಿಷಯಗಳ ಅಧ್ಯಯನವನ್ನು ಆಯ್ಕೆ ಮಾಡಿಕೊಂಡು ಆ ವಿಷಯಗಳಲ್ಲಿ ಶ್ರಮವಹಿಸಿ ಅಭ್ಯಾಸ ಮಾಡಲಾಗದೆ. ವಿದ್ಯಾಭ್ಯಾಸದ ವಿವಿಧ ಕಾರ್ಯಗಳಾದ ಪುಸ್ತಕ. ಮನೆಪಾಠ. ಹಾಸ್ಟೆಲ್ ಮಾರ್ಗದರ್ಶನ ಹಾಗೂ ಸಾಮರ್ಥ್ಯವನ್ನು ಪಣಕ್ಕಿಟ್ಟು ಸಾಧನೆಯ ಕಡೆಗೆ ಸಾಗುವುದನ್ನು ಸಾಧಿಸಲಾಗದೆ ಅರ್ಧಕ್ಕೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ಹೊಲದಲ್ಲೋ... ಕಾರ್ಖಾನೆಗಳಲ್ಲೊ. ಇಲ್ಲ ಇತರ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ತೊಡಗಿಕೊಂಡು ಸಾಮಾನ್ಯ ಜನರಂತೆ ಬದುಕುತ್ತಿದ್ದಾರೆ. ಅಂದರೆ.... ಉನ್ನತ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳುವಾಗ ಎಡವಿದ್ದಾರೆ ಅನ್ನೋದೇ ಇಲ್ಲಿಯ ಸಂಗತಿಯಾಗಿದೆ.
ದುರ್ಬಲ ಆರ್ಥಿಕ ಸ್ಥಿತಿಯನ್ನು ಹೊಂದಿದ. ಸೂಕ್ತ ಮಾರ್ಗದರ್ಶಕರು ಇಲ್ಲದೆ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ಹಣ ಭರಿಸಲಾಗದೆ.ಒದ್ದಾಣಡುವಂತಾಗಿದೆಕಲಿಯಲು ಅಸಕ್ತರಾದರೂ ಕರ್ತವ್ಯ ಪ್ರಜ್ಞೆಯನ್ನು ಮೆರೆಯುತ್ತಿದ್ದಾರೆ. ಅವಿದ್ಯಾವಂತ ತದೆ ತಾಯಿಯರು. ಗುರು ಹಿರಿಯರ ಒಡನಾಟವಿಲ್ಲದ ಅತಂತ್ರ ಬದುಕಿನಲ್ಲಿ ಮಾಹಿತಿ ಮತ್ತು ಮಾರ್ಗದರ್ಶನವಿಲ್ಲದೆ ಇವರೆಲ್ಲಾ ಜೀವನದಲ್ಲಿ ತ್ರಿಶಂಕು ಸ್ಥಿತಿಯಲ್ಲಿ ನರಳುತ್ತಿದ್ದಾರೆ. ಕೊರಗುತ್ತಿದ್ದಾರೆ. ಬದುಕೀನ ನಿರ್ವಹಣೆಗಾಗಿ ಸಿಕ್ಕ ಯಾವುದೋ ಕೆಲಸದಲ್ಲಿ ಮನಸ್ಸಿಲ್ಲದೆ ದುಡಿದು ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಕನಾಗಬೇಕಾದ ಅರ್ಹತೆಯುಳ್ಳವನು ಪೋಲೀಸ್ ಆಗಿದ್ದಾನೆ. ಡಾಕ್ಟರ್ ಆಗಬೇಕಿದ್ದವನು ವಕೀಲನಾಗಿದ್ದಾನೆ.
ಹೌದು! ಇಂತಹ ದುಸ್ಥಿತಿಗೆ ಆತನೇ ಕಾರಣನಾಗಿದ್ದಾನೆ. ತಾನೇನು? ತನ್ನ ಭೌದ್ದಿಕ ಸಾಮರ್ಥ್ಯವೇನು? ತನ್ನ ಶೈಕ್ಷಣಿಕ ಸಾಧನೆಯ ಗುರಿ ಏನು? ಸಾಧಿಸುವ ಕ್ರಮ ಯಾವುದು.? ನನ್ನ ಓದಿಗೆ ಕುಟುಂಬದಿಂದ ನೈತಿಕ ಬೆಂಬಲ.ಎಷ್ಟರ ಮಟ್ಟಿನದು. ನನ್ನ ಓದಿಗೆ ಧನ ಬೆಂಬಲ ಯಾವ ರೀತಿಯಲ್ಲಿ ಕ್ರೂಡೀಕರಿಸಬಹುದೆ ಅಂತಲೇ ತಿಳಿಯಬೇಕು. ನಾನು ಈ ವಿಷಯವನ್ನು ಇಚ್ಚೆ ಇಟ್ಟು ಛಲದಿಂದ ಓದಿ ಮುಗಿಸಬಲ್ಲೆನೆ! ಎಂಬಿತ್ಯಾದಿ ಅಂಶಗಳನ್ನು ಅರಿತು ಉನ್ನತ ವ್ಯಾಸಂಗಕ್ಕೆ ಮುನ್ನುಗ್ಗಿದಾಗ ಖಂಡಿತ ಕಾರ್ಯದಲ್ಲಿ ಯಶ ಸಿಗುತ್ತದೆ. ಅಂದುಕೊಂಡ ಸಾಧನೆ ಸಾಧಿತವಾಗುತ್ತದೆ.ಆದರೆ ಇಂದಿನ ಬಹುತೇಕ ವಿದ್ಯಾರ್ಥಿಗಳು ಈ ಯಾವ ಅಂಶಗಳನ್ನು ಮನನ ಮಾಡದೆ ಕೇವಲ ಹೆಚ್ಚು ಅಂಕ ಬಂದವು ಎಂಬ ಕಾರಣಕ್ಕೆ. ಹಾಗೂ ಯರೋ ಹೇಳಿದರು ಅಂತಾನೋ ಅಥವಾ ಅದ್ಬತವಾದ ಏನನ್ನೋ ಸಾಧಿಸಿ ಬಿಡಬೇಕು ಎಂಬ ಹುಚ್ಚುತನದ ಸಾಹಸದಿಂದ ಸಾಧಿಸಲಾಗದ ಕೆಲಸಕ್ಕೆ ಕೈ ಹಾಕಿ ಅದನ್ನೂ ಸಾಧಿಸದೆ. ಇದನ್ನು ಮಾಡದೆ ಅತಂತ್ರ ಸ್ಥಿತಿಯಲ್ಲಿ ಸಿಲುಕಿ ಕೊನೆಗೆ ಕಲಿಕೆಯನ್ನೇ ನಿಲ್ಲಿಸಿ ಸಾಮಾನ್ಯರಂತೆ ತಿರುಗುತ್ತಿರುತ್ತಾರೆ. ಇದನ್ನು ಕಂಡ ನಮ್ಮಂಥ ಗುರುಗಳಿಗೆಲ್ಲಾ ಎಂತಹ ಜಾಣ ವಿದ್ಯಾರ್ಥಿ ಜೀವನವನ್ನೇ ಹಾಳು ಮಾಡಿಕೊಂಡನಲ್ಲ ಎಂದು ವ್ಯಥೆ ಉಂಟಾಗುತ್ತದೆ.ಇದರಂತೆ ಸಮಾಜದಲ್ಲಿ ಅದೆಷ್ಟೋ ಜನ ಅನಿವಾರ್ಯ ಕಾರಣದಿಂದ ಮನಸ್ಸಿಲ್ಲದ ಕೆಲಸಗಳಲ್ಲಿ ತೊಡಗಿಕೊಂಡು ಯಾತ್ರಿಕ ಜೀವನ ನಡೆಸುತ್ತಿದ್ದಾರೆ. ಅರ್ಹತೆಗನುಗುಣವಾಗಿ ಕೆಲಸ ಮಾಡದೆ ಇಷ್ಟವಿಲ್ಲದ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.ಸಾಧಿಸಬೇಕಾದುದನ್ನು ಮಣ್ಣುಪಾಲು ಮಾಡಿ ಕೇವಲ ಜೀವನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆಲ್ಲಾ ಮೂಲಕಾರಣವೇ ಮಾನವ ತಾನು ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿಯದೆ ಇದ್ದದ್ದು. ಸಮಯಕ್ಕನುಗುಣವಾಗಿ ಸೂಕ್ತ ಆಯ್ಕೆಗಳನ್ನು ಮಾಡದಿದ್ದುದು. ಹಿರಿಯರ ಮಾರ್ಗದರ್ಶನ ಅನುಸರಿಸದಿದ್ದುದು. ನಿಖರವಾದ ಗುರಿ ಇಟ್ಟುಕೊಳ್ಳದೇ ಇರುವುದು ಕಾರಣವಾಗಿದೆ.ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರಬೇಕು. ಸರಕಾರದ ನೀತಿ ನಿಯಮಗಳು. ಸಮಾಜದ ಆಗುಹೋಗುಗಳ ತಿಳುವಳಿಕೆ ಇರಲೇಬೇಕಾಗುತ್ತದೆ. ಮುಂಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸುಂದರ ಬದುಕನ್ನು ಕಟ್ಟಿಕೊಳ್ಳುವ ಎಲ್ಲರೂ ಇನ್ನು ಮದಾದರೂ ಉನ್ನತ ಹುದ್ದೆ ಅಥವಾ ವ್ಯಾಸಂಗಕ್ಕೆ ಕಾಲಿಡುವ ಮುಂಚೆ ನಿಮ್ಮ ಸರ್ವ ರೀತಿಯ ಸಾಮರ್ಥ್ಯವನ್ನು ಅರಿತುಕೊಳ್ಳಿ.ಸೂಕ್ತವಾದ ಕಲಿಕಾ ಕ್ಷೇತ್ರ. ಛಲ. ಸ್ನೇಹಿತರು. ಸ್ಪಷ್ಟವಾದ ಗುರಿ. ಸಾಧಿಸುವ ಸನ್ಮಾರ್ಗ. ಆಯ್ಕೆಯ ವಿಷಯದಲ್ಲಿ ನಿಪುಣತೆ. ಧನಬಲ. ಭೌದ್ದಿಕ ಮಟ್ಟ. ಕೌಟುಂಬಿಕ ಸಹಕಾರ ಹಾಗೂ ಬೆಂಬಲಿಗರ ಸೂಕ್ತವಾದ ಸಹಾಯ ಇವೆಲ್ಲವು ಸರಿ ಎನೀಸಿದಾಗ ಮುಂದಿನ ವಿದ್ಯಾಭ್ಯಾಸ ಸರಳವಾಗುತ್ತದೆ. ಅಂದುಕೊಂಡ ಗುರಿ ತಲುಪಿದಂತಾಗುತ್ತದೆ. ಅಲ್ಲಿಗೆ ಜೀವನ ಸಾರ್ಥಕತೆ ಪಡೆದು ನಮ್ಮ ಇರುವಿಕೆಯನ್ನು ಖಚಿತಪಡಿಸಿದಂತಾಗುತ್ತದೆ.
- ವೆಂಕಟೇಶ ಈಡಿಗರ
ರಾಣೆಬೆನ್ನೂರು
- * * * -