ಮನರಂಜನೆ

ಕೊರೋನಾ : ಪ್ರಖ್ಯಾತ ಪಂಜಾಬಿ ಗಾಯಕ ಸರ್ದುಲ್ ಸಿಕಂದರ್ ನಿಧನ

ಕೊರೋನಾ : ಪ್ರಖ್ಯಾತ ಪಂಜಾಬಿ ಗಾಯಕ ಸರ್ದುಲ್ ಸಿಕಂದರ್ ನಿಧನ

ಚಂಡೀಗಡ, ಫೆ 24 : ಕೋವಿಡ್ ಸೋಂಕಿನಿಂದಾಗಿ ಪ್ರಸಿದ್ಧ ಪಂಜಾಬಿ ಗಾಯಕ ಸರ್ದುಲ್ ಸಿಕಂದರ್ ಬುಧವಾರ ವಿಧಿವಶರಾಗಿದ್ದಾರೆ.  ಬಾಬಾ ಬೋಹರ್ ಎಂದೇ ಪ್ರಸಿದ್ಧರಾಗಿದ್ದ ಪಂಜಾಬಿ ಕಲಾವಿದ ಸಿಕಂದರ್ ಕಳೆದ 4 ದಶಕಗಳಿಂದ ಸಕ್ರಿಯರಾಗಿದ್ದರು. ಅವರು ಕಳೆದ ಒಂದು ತಿಂಗಳಿನಿಂದ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾಬಿನೆಟ್ ಸಚಿವ ಸಾಧು ಸಿಂಗ್ ಧರ್ಮಸೋತ್ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಸರ್ದುಲ್ ಸಿಕಂದರ್ ಅವರ ಸ್ಥಿತಿಗತಿ ವಿಚಾರಿಸಿ, ಅವರ ಪತ್ನಿ ಅಮರ್ ನೂರಿಯವರಿಗೆ ಎಲ್ಲ ಬಗೆಯ ಸಹಾಯದ ಭರವಸೆ ನೀಡಿದ್ದರು. ಸರ್ದುಲ್ ಸಿಕಂದರ್ ಅವರ ಸಾವಿನ ಬಗ್ಗೆ ಪಂಜಾಬ್ ರಾಜ್ಯಾದ್ಯಂತ ಶೋಕದ ಅಲೆ ಹರಡಿದೆ. ಸರ್ದುಲ್ ಐದು ವರ್ಷಗಳ ಹಿಂದೆ ಮೂತ್ರಪಿಂಡ ಕಸಿಗೂ ಒಳಗಾಗಿದ್ದರು. ಅವರ ಪತ್ನಿ ಅಮರ್ ನೂರಿ ಅವರಿಗೆ ಕಿಡ್ನಿ ನೀಡಿದ್ದರು.

  

ಸುದ್ದಿ ಓದಿ