ಮನರಂಜನೆ

ಚಲನಚಿತ್ರದಲ್ಲಿ ಅರ್ಚಕರ ಅವಹೇಳನ: ಸಚ್ಚಿದಾನಂದ ಮೂರ್ತಿ ಖಂಡನೆ

ಚಲನಚಿತ್ರದಲ್ಲಿ  ಅರ್ಚಕರ ಅವಹೇಳನ: ಸಚ್ಚಿದಾನಂದ ಮೂರ್ತಿ ಖಂಡನೆ

ಬೆಂಗಳೂರು, ಫೆ 21 :  ಪೊಗರು ಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಪ್ರದರ್ಶಿಸುತ್ತಿರುವುದನ್ನು  ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಖಂಡಿಸಿದ್ದಾರೆ. ಯಾವುದೇ ಜಾತಿ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸುವುದು ಸರಿಯಾದ ಕ್ರಮವಲ್ಲ ಅದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದಂತಾಗುತ್ತದೆ. ತಕ್ಷಣವೇ ಈ ದೃಶ್ಯವನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಇಡೀ ರಾಜ್ಯದಾದ್ಯಂತ ಇರುವ ಅರ್ಚಕರು ಹಾಗೂ ಪುರೋಹಿತರು ತೀವ್ರ ಬೇಸರಗೊಂಡಿದ್ದು ಸನಾತನ ಧರ್ಮದ ರಕ್ಷಕರಾದ ಇವರುಗಳನ್ನು ಅವಹೇಳನಕಾರಿಯಾಗಿ ಅವಮಾನಕಾರಿಯಾಗಿ ಚಿತ್ರಿಸಿರುವುದು ಸರಿಯಲ್ಲ ಈ ಕೂಡಲೇ ಆ ದೃಶ್ಯವನ್ನು ತೆಗೆದು ಹಾಕಬೇಕು ಹಾಗೂ ಚಿತ್ರ ನಿರ್ಮಾಪಕರು ನಿರ್ದೇಶಕರು ಕ್ಷಮೆ ಕೋರಬೇಕು ಎಂದು ಆಗ್ರಹಪಡಿಸಿದ್ದಾರೆ. ಇಲ್ಲದೆ ಹೋದಲ್ಲಿ  ಮಂಗಳವಾರ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಅಲ್ಲದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಬೇಕಾಗುತ್ತೆ ಎಂದೂ  ಅವರು ಎಚ್ಚರಿಕೆ ನೀಡಿದ್ದಾರೆ. 



ಸುದ್ದಿ ಓದಿ