ರಾಷ್ಟ್ರೀಯ

ವಿಜಯ್ ದಿವಸ್ : 1971 ರ ಸಮರದ ವೀರ ಸೇನಾನಿಗಳ ಸ್ಮರಿಸಿದ ಪ್ರಧಾನಿ, ರಾಜನಾಥ್

ವಿಜಯ್ ದಿವಸ್ : 1971 ರ ಸಮರದ ವೀರ ಸೇನಾನಿಗಳ ಸ್ಮರಿಸಿದ ಪ್ರಧಾನಿ, ರಾಜನಾಥ್

ನವದೆಹಲಿ, ಡಿ 16: ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾದ ಭಾರತ ಹಾಗೂ ಪಾಕಿಸ್ತಾನದ ನಡುವೆ 1971 ರಲ್ಲಿ ನಡೆದ ಯುದ್ಧದ 50 ನೇ ವರ್ಷಾಚರಣೆಯ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು "ಸ್ವರ್ಣಿಮ್ ವಿಜಯ್ ಮಾಶಾಲ್" - ವಿಜಯದ ಜ್ಯೋತಿ ಬೆಳಗಿಸಿದರು. ವಿಜಯ ದಿವಸವು 1971 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ನಿರ್ಣಾಯಕ ವಿಜಯವನ್ನು ಸೂಚಿಸುತ್ತದೆ, ಇದು ಪೂರ್ವ ಪಾಕಿಸ್ತಾನದ ವಿಮೋಚನೆ ಮತ್ತು ಹೊಸ ರಾಜ್ಯ ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. 1971 ರಲ್ಲಿ ಈ ದಿನದಂದು, ಪಾಕಿಸ್ತಾನದ ಪಡೆಗಳ ಮುಖ್ಯಸ್ಥ ಜನರಲ್ ನಿಯಾಜಿ ನೇತೃತ್ವದ 93,000 ಸೈನಿಕರು ಭಾರತೀಯ ಪಡೆಗಳಿಗೆ ಶರಣಾದರು. 1971 ರಲ್ಲಿ ಇಂಡೋ-ಪಾಕ್ ಯುದ್ಧದಲ್ಲಿ ಪಾಲ್ಗೊಂಡು ವೀರ ಮರಣ ಹೊಂದಿದ ಸೈನಿಕರ ನೆನಪಿಗಾಗಿ 1972 ರಲ್ಲಿ ಅಮರ್ ಜವಾನ್ ಜ್ಯೋತಿ ನಿರ್ಮಿಸಲಾಯಿತು.

ಯುದ್ಧದ 50ನೇ ವರ್ಷದ ನೆನಪಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬುಧವಾರ ಬೆಳಗ್ಗೆ '' ಸ್ವರ್ಣಿಮ್ ವಿಜಯ್ ವರ್ಷ '' ಲೋಗೋ ಅನಾವರಣಗೊಳಿಸಿದರು.   ಈ ಸಂದರ್ಭದಲ್ಲಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂರು ಸೇನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. “ಭಾರತೀಯ ಸೇನೆಯ ಶೌರ್ಯಕ್ಕೆ  ನಮಸ್ಕರಿಸುತ್ತೇನೆ. 1971 ರ ಯುದ್ಧದಲ್ಲಿ ಧೈರ್ಯದ ಹೊಸ ಕಥೆಯನ್ನು ಬರೆದ ಕೆಚ್ಚೆದೆಯ ಸೈನಿಕರ ಧೈರ್ಯ ನನಗೆ ನೆನಪಿದೆ. ಅವರ ತ್ಯಾಗ ಎಲ್ಲಾ ಭಾರತೀಯರಿಗೂ ಸ್ಫೂರ್ತಿಯ ಮೂಲವಾಗಿದೆ. ರಾಷ್ಟ್ರವು ಯಾವಾಗಲೂ ಅವರನ್ನು ಗೌರವಿಸುತ್ತದೆ "ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ, “1971 ರಲ್ಲಿ ಈ ದಿನ, ಭಾರತೀಯ ಸೇನೆಯು ತನ್ನ ಅದಮ್ಯ ಧೈರ್ಯ ಮತ್ತು ಶೌರ್ಯದಿಂದ ವಿಶ್ವ ಭೂಪಟದಲ್ಲಿ ಐತಿಹಾಸಿಕ ಬದಲಾವಣೆಯನ್ನು ಮಾಡಿ, ಮಾನವ ಸ್ವಾತಂತ್ರ್ಯದ ಸಾರ್ವತ್ರಿಕ ಮೌಲ್ಯಗಳನ್ನು ರಕ್ಷಿಸಿತು. ಇತಿಹಾಸದಲ್ಲಿ ಚಿನ್ನದ ಅಕ್ಷರಗಳನ್ನು ಹೊಂದಿರುವ ಈ ಗುರುತು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡುತ್ತದೆ. ಹ್ಯಾಪಿ ವಿಜಯ್ ದಿವಸ್" ಎಂದು ಹೇಳಿದದಾ.ರೆ

ಕ್ರೀಡಾ ಸಚಿವ ಕಿರಣ್ ರಿಜಿಜು, "ಇಂದು ವಿಜಯ್ ದಿವಸ್, ಭಾರತವು 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ಮಿಲಿಟರಿ ವಿಜಯವೆಂದು ಗುರುತಿಸುತ್ತದೆ. 93000 ಪಾಕ್ ಸೈನಿಕರು ಶರಣಾದರು. ನಾವು ಕೃತಜ್ಞತೆಯಿಂದ ತಲೆ ಬಾಗುತ್ತೇವೆ. ವಿಜಯ್ ದಿವಸ್ 2020" ಎಂದು ಟ್ವೀಟ್ ಮಾಡಿದ್ದಾರೆ. ಗಡಿ ಭದ್ರತಾ ಪಡೆಗಳು ರಿಲೇ ಓಟದ ಮೂಲಕ ಗೌರವ ಸಲ್ಲಿಸುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, “1971 ರ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಗೆದ್ದ ವಾರ್ಷಿಕೋತ್ಸವದಂದು ದೇಶದ ಜನರಿಗೆ ನನ್ನ ಶುಭಾಶಯಗಳನ್ನು ಕಳುಹಿಸುತ್ತೇನೆ ಮತ್ತು ಭಾರತೀಯ ಸೇನೆಯ ಧೈರ್ಯಕ್ಕೂ ನಮಸ್ಕರಿಸುತ್ತೇನೆ. ಭಾರತದ ನೆರೆಯ ರಾಷ್ಟ್ರವು ಪ್ರಧಾನ ಮಂತ್ರಿಯ ಧೈರ್ಯವನ್ನು ತಿಳಿದಿದ್ದ ಮತ್ತು ಗಡಿಗಳನ್ನು ಉಲ್ಲಂಘಿಸುವ ಭಯದಲ್ಲಿದ್ದ ಕಾಲದಲ್ಲಿ ಈ ಯುದ್ಧ ಸಂಭವಿಸಿದೆ ಎಂದು ಹೇಳಿದ್ದಾರೆ.

ಸುದ್ದಿ ಓದಿ