ಪ್ರಧಾನಿ ಮೋದಿ ಭಾಷಣ ಖಂಡನೀಯ: ಆರ್ಕೆಎಸ್
ಬಳ್ಳಾರಿ 10: ದೆಹಲಿಯಲ್ಲಿ ಹೋರಾಟಶೀಲ ರೈತರನ್ನು ‘ಆಂದೋಲನಜೀವಿ’ಯೆಂದು ಮತ್ತು ಹೋರಾಟವನ್ನು ‘ವಿದೇಶಿ ವಿನಾಶಕಾರಿ ಸಿದ್ಧಾಂತ’ವೆಂದು ಹೇಳಿ, ರಾಜ್ಯ ಸಭೆಯಲ್ಲಿ ದಿ.08 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಆರ್ಕೆಎಸ್ ಖಂಡಿಸಿದೆ.
ಮೋದಿ ಸರ್ಕಾರದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುತ್ಕಾಯ್ದೆ– 2020 ಅನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ರೈತರು ಹಿಂದೆಕೇಳರಿಯದ ಧೈರ್ಯ ಹಾಗೂ ಬಲಿದಾನಗಳೊಂದಿಗೆ ಧೀರೋದಾತ್ತವಾಗಿ ಹೋರಾಡುತ್ತಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಈ ಉದಾತ್ತ ಹೋರಾಟದಿಂದಾಗಿ ಪ್ರಪಂಚದೆಲ್ಲೆಡೆ ಪ್ರಜಾತಂತ್ರ ಮನೋಭಾವದ ಪ್ರಾಮಾಣಿಕ ಚಿಂತನಾಶೀಲ ಜನರೆಲ್ಲರೂಉತ್ತೇಜಿತರಾಗಿದ್ದಾರೆ. ಆದರೆ ಮೋದಿ ಹೋರಾಟಶೀಲ ಜನರು ಕೇವಲ ‘ಆಂದೋಲನಜೀವಿ’ಯಲ್ಲದೆ ಬೇರೇನೂಅಲ್ಲ. ಅದರಲ್ಲಿ ಹೊಸತೇನೂಇಲ್ಲ ಎಂದು ಹೇಳಿರುವುದು ನೋವಿನ ಸಂಗತಿ ಎಂದು ತಿಳಿಸಿದೆ.
ದುಡಿಯುವಜನರ ವಿಮುಕ್ತಿಗಾಗಿ ತಮ್ಮದೆಲ್ಲವನ್ನೂ ಬಲಿದಾನ ಮಾಡಿದ ನೇತಾಜಿ, ಭಗತ್ಸಿಂಗ್ ಮುಂತಾದ ನಮ್ಮ ಮಹಾನ್ ಪೂರ್ವಿಕರ ಹೆಜ್ಜೆಗಳನ್ನು ಅನುಸರಿಸುತ್ತೇವೆ.ನಾವೀಗ ಮೋದಿ ಸರ್ಕಾರದಫ್ಯಾಸಿಸ್ಟ್ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದೇವೆ. ಸರ್ಕಾರತಲೆತಗ್ಗಿಸುವಂತೆ ಮಾಡುತ್ತೇವೆಂದು ನಿರ್ಧರಿಸಿರುವುದಾಗಿ ತಿಳಿಸಿದೆ.
ಇಂದಿನ ರೈತರ ಚಳುವಳಿಯು ಕೇವಲ ಅವರ ಉಳಿವಿಗಾಗಿ ನಡೆಯುತ್ತಿರುವುದಲ್ಲ, ಬದಲಿಗೆ ಸಾಮಾನ್ಯಜನರ ಉಳಿವಿಗೂ ಸಹ ಎಂಬುದನ್ನು ನೆನಪಿನಲ್ಲಿಡಬೇಕು. ದೇಶದಲ್ಲಿ ನಡೆಯುತ್ತಿರುವರೈತರ ಈ ಚಳುವಳಿಯು ಉತ್ಕೃಷ್ಟವಾದದ್ದು, ಹಾಗೆಯೇ ನಮ್ಮದೇಶದಚರಿತ್ರೆಯ ಇಂದಿನ ಘಟ್ಟದಲ್ಲಿಅನನ್ಯವಾದದ್ದು.
ಭಾರತೀಯಜನರು ರೈತರಜೊತೆ ನಿಲ್ಲುತ್ತಾರೆ ಎಂದು ನಿರೀಕ್ಷಿಸುವುದಾಗಿ ಆರ್ಕೆಎಸ್ ತಿಳಿಸಿದೆ.