ರಾಷ್ಟ್ರೀಯ

ಡಿ.12ರಂದು ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಡಿ.12ರಂದು ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ, ಡಿ 11 :ಪ್ರಧಾನಿ ನರೇಂದ್ರ ಮೋದಿ ಅವರು ಡಿ.12ರಂದು ಜಾಗತಿಕ ಹವಾಮಾನ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು  ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಶುಕ್ರವಾರ ಹೇಳಿದ್ದಾರೆ.ಡಿ.12ಕ್ಕೆ ಪ್ಯಾರಿಸ್‌ ಹವಾಮಾನ ಒಪ್ಪಂದಕ್ಕೆ ಐದು ವರ್ಷ ಪೂರ್ಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಜಾವಡೇಕರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆಗೆ ಇತ್ತೀಚಿನ ಕ್ರಿಯೆಗಳು ಕಾರಣವಲ್ಲ, ಬದಲಿಗೆ ಇತಿಹಾಸದ ಘಟನೆಗಳು ಕಾರಣ. ಅಮೆರಿಕ ಮತ್ತು ಅರಬ್‌ ರಾಷ್ಟ್ರಗಳು ಕ್ರಮವಾಗಿ ಶೇ.25 ಹಾಗೂ 23ರಷ್ಟು ಹೊರಸೂಸುವಿಕೆಯನ್ನು ಹೊಂದಿದ್ದರೆ, ಭಾರತ ಶೇ.3ರಷ್ಟು ಮಾತ್ರ ಕೊಡುಗೆ ನೀಡಿದೆ ಎಂದರು.

ಭಾರತ 2030ರೊಳಗೆ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ತೀವ್ರತೆಯನ್ನು ಶೇ.33ರಿಂದ 35ರಷ್ಟು ಇಳಿಸಲು ಬದ್ಧವಾಗಿದೆ. ನಾವು ಈಗಾಗಲೇ ಶೇ.21ರಷ್ಟು ಪ್ರಮಾಣವನ್ನು ಇಳಿಸಿದ್ದು, ಮುಂದಿನ 10 ವರ್ಷಗಳಲ್ಲಿ ಉಳಿದವುಗಳನ್ನು ಇಳಿಕೆ ಮಾಡಲಾಗುವುದು ಎಂದರು. ಪ್ಯಾರಿಸ್ ಒಪ್ಪಂದವನ್ನು ಪಾಲಿಸಿರುವ ಕೆಲವೇ ದೇಶಗಳ ಪೈಕಿ ಭಾರತ ಕೂಡ ಒಂದು. ನಮ್ಮ ರಾಷ್ಟ್ರೀಯವಾಗಿ ನಿರ್ಧಾರಿತ ಕೊಡುಗೆ(ಎನ್‌ಡಿಸಿ) ತಾಪಮಾನದಲ್ಲಿ 2 ಡಿಗ್ರಿಗಿಂತ ಕಡಿಮೆ ಏರಿಕೆಗೆ ಕಾರಣವಾಗುತ್ತದೆ ಎಂದರು. 

ಸುದ್ದಿ ಓದಿ