ನಿರ್ಮಾಪಕ ಬುದ್ಧದೇವ್ ದಾಸ್ಗುಪ್ತಾ ನಿಧನ: ಪ್ರಧಾನಿ ಸಂತಾಪ
ನವದೆಹಲಿ, ಜೂನ್ 10: ಚಲನಚಿತ್ರ ನಿರ್ಮಾಪಕ, ಚಿಂತಕ ಮತ್ತು ಕವಿ ಬುದ್ಧದೇವ್ ದಾಸ್ಗುಪ್ತಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ''ಶ್ರೀ ಬುದ್ಧದೇಬ್ ದಾಸ್ಗುಪ್ತಾ ಅವರ ನಿಧನದಿಂದ ದುಃಖವಾಗಿದೆ. ಅವರ ವೈವಿಧ್ಯಮಯ ಕೃತಿಗಳು ಸಮಾಜದ ಎಲ್ಲಾ ವರ್ಗಗಳ ಜೊತೆಗೂಡಿವೆ. ಅವರು ಪ್ರಖ್ಯಾತ ಚಿಂತಕರಾಗಿದ್ದರು ಮತ್ತು ಕವಿ. ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಹಲವಾರು ಅಭಿಮಾನಿಗಳೊಂದಿಗೆ ಇವೆ'' ಎಂದಿದ್ದಾರೆ.ಬುದ್ಧದೇವ್ ಗುರುವಾರ ಬೆಳಿಗ್ಗೆ ತಮ್ಮ ದಕ್ಷಿಣ ಕೋಲ್ಕತಾ ನಿವಾಸದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡದಿಂದ ಬಳಲುತ್ತಿದ್ದ ಅವರು, ದೀರ್ಘಕಾಲದವರೆಗೆ ಡಯಾಲಿಸಿಸ್ಗೆ ಒಳಗಾಗಿದ್ದರು. ಅವರು ಚಲನಚಿತ್ರ ನಿರ್ಮಾಪಕರಾಗಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ದಾಸ್ಗುಪ್ತಾ ಚಲನಚಿತ್ರ ನಿರ್ದೇಶಕರಾಗಿ ಖ್ಯಾತರಾಗಿದ್ದರೂ, ಬಂಗಾಳಿ ಭಾಷೆಯಲ್ಲಿ ಅತ್ಯುತ್ತಮ ಕವಿಯೂ ಆಗಿದ್ದರು. ಅವರು ಹಲವು ಕವನಗಳನ್ನು ರಚಿಸಿದ್ದರು.