ರಾಷ್ಟ್ರೀಯ

ಅಂತಾರಾಷ್ಟ್ರೀಯ ಭಾರತಿ ಉತ್ಸವಕ್ಕೆ ಪ್ರಧಾನಿ ಚಾಲನೆ

ಅಂತಾರಾಷ್ಟ್ರೀಯ ಭಾರತಿ ಉತ್ಸವಕ್ಕೆ ಪ್ರಧಾನಿ   ಚಾಲನೆ

ನವದೆಹಲಿ, ಡಿ 11 :ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ  2020 ನೇ ಸಾಲಿನ  ಅಂತಾರಾಷ್ಟ್ರೀಯ ಭಾರತಿ ಉತ್ಸವವನ್ನು  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಲಿದ್ದಾರೆ. ಇಂದು ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ 2020ರ ಅಂತಾರಾಷ್ಟ್ರೀಯ ಭಾರತಿ ಉತ್ಸವ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವರ್ಷ ಉತ್ಸವವನ್ನು ವರ್ಚುವಲ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದ್ದು, ಹಲವು  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕವಿಗಳು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಗುರುವಾರ ತಿಳಿಸಿದೆ. ವಿಶೇಷವೆಂದರೆ, ವನವಿಲ್ ಕಲ್ಚರಲ್ ಸೆಂಟರ್ ವತಿಯಿಂದ ತಮಿಳು ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ 138ನೇ ಜನ್ಮ ದಿನಾಚರಣೆ ಅಂಗವಾಗಿ ಈ ಉತ್ಸವ ಆಯೋಜಿಸಲಾಗಿದೆ. 

ಸುದ್ದಿ ಓದಿ