ಸಿಂಧಗಿ

ಅಭಿವೃದ್ಧಿ ಕಾರ್ಯ ಕೈಕೊಳ್ಳದೇ ದಾಖಲೆಗಳನ್ನು ಸೃಷ್ಠಿಸಿದ ಪಿಡಿಓ

ಅಭಿವೃದ್ಧಿ ಕಾರ್ಯ ಕೈಕೊಳ್ಳದೇ ದಾಖಲೆಗಳನ್ನು ಸೃಷ್ಠಿಸಿದ ಪಿಡಿಓ

ಸಿಂದಗಿ 20; ತಾಲೂಕಿನ ಬಂದಾಳ ಗ್ರಾಪಂನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಕೊಳ್ಳದೇ 15ನೇ ಹಣಕಾಸು ಯೋಜನೆಯಡಿಯಲ್ಲಿ ಪಿಡಿಓ ಬಿ.ಆರ್.ಶಹಾಪುರ ಅವರು ದಾಖಲೆಗಳನ್ನು ಸೃಷ್ಠಿಸಿ ರೂ. 16,45,277 ಹಣ ಎತ್ತಿ ಹಾಕಿದ್ದಾರೆ ಎಂದು ಕರ್ನಾಟಕ ರಣಧೀರ ಪಡೆ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಮಣಿಗೇರಿ ಆರೋಪಿಸಿದ್ದಾರೆ. 

ಪಟ್ಟಣದ ಅಪ್ಪಾಜಿ ಹೋಟೇಲೊಂದರಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಗ್ರಾಪಂಗೆ ಸದಸ್ಯರ ಅವಧಿ ಮುಗಿದು ಕೆಲ ಕಾರಣಾಂತರಗಳಿಂದ ಚುನಾವಣೆ ಮುಂದೂಡಲಾಗಿದ್ದು ಅದಕ್ಕೆ ನಾನೇ ರಾಜಾ ಎಂಬಂತೆ ಈ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಂದಾಳ ಮತ್ತು ಚಿಕ್ಕಸಿಂದಗಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ  ಮೂಲಭೂತ ಸೌಕರ್ಯಗಳನ್ನು ಒದಗಿಸದೇ ನೈರ್ಮಲಿಕರಣ, ಚರಂಡಿ ಸ್ವಚ್ಚತೆ, ಬೋರವೆಲ್ ರಿಪೇರಿ ಸಲುವಾಗಿ ಕೆಲವೊಂದು ಇಲೆಕ್ಟ್ರೀಕಲ್ ಅಂಗಡಿಗಳಿಂದ ಬಿಲ್ಲ್‍ಗಳನ್ನು ಸೃಷ್ಠಿಸಿ ಹಗಲು ದರೋಡೆ ಮಾಡಿದ್ದಾರೆ ಎಂದು ತಾಪಂ ಕಾರ್ಯನಿರ್ವಹಕ ಅಧಿಕಾರಿ ಹಾಗೂ ಜಿಪಂ ಇಓಗೆ ದಾಖಲೆಗಳ ಸಮ್ಮೇತ ದೂರು ಸಲ್ಲಿಸಿದ್ದು ಇದರ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥ ಭ್ರಷ್ಠ ಅಭಿವೃದ್ಧಿ ಅಧಿಕಾರಿಯಿಂದ ಸರಕಾರಕ್ಕೆ ಹಣ ಮರಳಿ ಬರಣಾ ಮಾಡಿಸಿ ಅವರನ್ನು ಅಮಾನತ್ತು ಗೊಳಿಸಿ ಶಿಕ್ಷೆಗೆ ಗುರಿಪಡಿಸಬೇಕು ಇಲ್ಲದಿದ್ದರೆ ತಾಪಂ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಏಚ್ಚರಿಕೆ ನೀಡಿದರು.

ಗ್ರಾಪಂ ಮಾಜಿ ಸದಸ್ಯ ಮಲ್ಲನಗೌಡ ಬಿರಾದಾರ ಮಾತನಾಡಿ, ಗ್ರಾಪಂ ಅವಧಿ ಮುಗಿದು ಕೆಲ ತಿಂಗಳುಗಳೇ ಕಳೇದಿವೆ ಅಭಿವೃದ್ಧಿ ಅಧಿಕಾರಿ ಗ್ರಾಪಂಗೆ ಬರದೇ ಮನೆಯಲ್ಲಿಯೇ ಕುಳೀತು ಅಭಿವೃದ್ಧಿ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ತಯಾರಿಸಿ ನಕಲಿ ಬಿಲ್ಲುಗಳನ್ನು ತಯಾರಿಸಿ ಹಣ ಕೊಳ್ಳೆ ಹೊಡೆದಿದ್ದಾದರೆ ಎನ್ನುವುದು ಸುಳ್ಳಲ್ಲ ಈ ಅಧಿಕಾರಿಯ ಮೋಬಾಯಿಲ್ ಯಾವಾಗ ನೋಡಿದರು ಚುಡಾಫ್ ಇರುತ್ತದೆ. ನೆರವಾಗಿ ಬೇಟಿಯಾದರೆ ಯಾವುದೇ ನೆಪ ಒಡ್ಡಿ ಜಾರಿಕೊಳ್ಳುತ್ತಾನೆ ಅದಕ್ಕೆ ರಣಧೀರ ಪಡೆಯ ಸಂಘಟನೆಯು ಸೂಕ್ತ ಕಾರ್ಯಕ್ಕೆ ಮುಂದಾಗಿದ್ದು ಒಳ್ಳೆಯದ್ದು ಅವರೊಂದಿಗೆ ಕೈ ಜೊಡಿಸಿ ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆದ ಅಧಿಕಾರಿಯ ವಿರುದ್ದ ಮೇಲಾಧಿಕಾಗಳ ಮುಂದೆಯು ಸಾಭೀತು ಪಡೆಸಲು ಸಿದ್ದ ಎಂದರು.

ಮಾಜಿ ಸದಸ್ಯೆ ರಮಜಾನಬಿ ಬೆಕಿನಾಳ ಅವರ ಪುತ್ರ ನಬೀರಸೂಲ್ ಮಾತನಾಡಿ, ಅಧಿಕಾರಾವಧಿಯಲ್ಲಿ ಸರಿಯಾದ ಮಾಹಿತಿ ನೀಡುತ್ತಿರಲ್ಲಿಲ್ಲ್ ಈ ಅಧಿಕಾರಿಯನ್ನು ನೋಡಬೇಕಾದರೆ ಹರಸಾಹಸ ಪಡಬೇಕಾಗಿತ್ತು ಗ್ರಾಪಂಗೆ ಯಾವಾಗ ಬಂದು ಹೋಗುತ್ತಿದ್ದರೆಂಬುದೇ ಗೊತ್ತಾಗುತ್ತಿರಲ್ಲಿಲ್ಲ. ಸರಕಾರ ಗ್ರಾಮಗಳ ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ ಆದರೆ ಇಂತಹ ಅಧಿಕಾರಿಗಳಿಂದ ಕಾರ್ಯಕ್ರಮಗಳು ಪೋಲಾಗುತ್ತಿವೆ. ಬ್ರಷ್ಠಾಚಾರದಲ್ಲಿ ತೊಡಗಿದ ಅಧಿಕಾರಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ದೂರಿದರು. 

ಸುದ್ದಿ ಓದಿ