ಮುಂದಗೋಡ

ಪತ್ರಕರ್ತರ ಮೇಲೆ ಸಿಪಿಐ ಭೀಮಣ್ಣ ಎಂ. ಸೂರಿ ಅನುಚಿತ ವರ್ತನೆಗೆ ಆಕ್ರೋಶ

ಪತ್ರಕರ್ತರ ಮೇಲೆ  ಸಿಪಿಐ ಭೀಮಣ್ಣ ಎಂ. ಸೂರಿ ಅನುಚಿತ ವರ್ತನೆಗೆ ಆಕ್ರೋಶ

ಮುಂಡಗೋಡ : ದಾಂಡೇಲಿಯ ಪತ್ರಕರ್ತರಾದ. ಬಿ. ಎನ್‌. ದಾಸರೆಯವರ ಮೇಲೆ  ಪೊಲೀಸ್ ವೃತ್ತ ನೀರೀಕ್ಷಕ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ ಜೊತೆ ದರಿ​‍್ದಂದ ಹಾಗೂ ಅನುಚಿತವಾಗಿ ನಡೆದುಕೊಂಡಿರುವುದನ್ನು ಖಂಡಿಸಿ, ತಾಲೂಕು ಕಾರ್ಯನಿರತ ಪತ್ರಕರ್ತರ ದ್ವನಿ ಸದಸ್ಯರು ತಹಶೀಲ್ದಾರ ಶಂಕರ ಗೌಡಿ ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ್ದರು.    ಪತ್ರಕರ್ತರಾದ  ದಾಂಡೇಲಿಯ ಬಿ ಎನ್‌. ವಾಸರೆಯವರು ದಾಂಡೇಲಿ ನಗರದ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರ ವಿರುದ್ಧ ಅದೇ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಂಡೇಲಿಯ ಪೊಲೀಸ್ ವೃತ್ತ ನೀರೀಕ್ಷಕ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ ಜೊತೆ ದರಿ​‍್ದಂದ ಹಾಗೂ ಅನುಚಿತವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ತಾಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ಖಂಡಿಸುತ್ತದೆ, ಹಾಗೂ ಮುಂಬರುವ ದಿನಗಳಲ್ಲಿ ಪತ್ರಕರ್ತರ ಮೇಲೆ ದಬ್ಬಾಳಿಕೆ ಮಾಡದಂತೆ ಮತ್ತು ಪತ್ರಕರ್ತರಿಗೆ ಈ ರೀತಿ ಆಗದಂತೆ ಸರಕಾರದ ಮಟ್ಟದಲ್ಲಿ ಕಾನೂನು ಜಾರಿಯಾಗಬೇಕೆಂದು ನಿಡಿದ ಮನವಿಯಲ್ಲಿ ತಿಳಿಸಲಾಗಿದೆ    ತಾಲೂಕ ಅಧ್ಯಕ್ಷ ಗಜೇಂದ್ರ ಕರ್ಜಗಿ ಉಪಾಧ್ಯಕ್ಷ ಭೀಮಣ್ಣ ಬೋವಿ ಕಾರ್ಯದರ್ಶಿ ಮಾಲತೇಶ ಜಾಡರ ಸದಸ್ಯರಾದ ಶಿವರಾಜ ಶಿರಾಲಿ.ಸಚಿನ ಕೊರವರ.ಸಂತೋಷ ಪೂಜಾರಿ  ಉಪಸ್ಥಿತರಿದ್ದರು. 


ಸುದ್ದಿ ಓದಿ