ಮಾಧ್ಯಮದವರೊಂದಿಗೆ ವ್ಯವಸ್ಥಾಪಕನ ಅಸಭ್ಯ ವರ್ತನೆಗೆ ಆಕ್ರೋಶ
ಹುನಗುಂದ 10: ಶ್ರೀಶೈಲದಿಂದ ಮರಳಿ ಹುನಗುಂದ ಘಟಕಕ್ಕೆ ಬಂದ್ ಬಸ್ನ ಚಾಲಕ ಮತ್ತು ನಿರ್ವಾಹಕರಿಗೆ ಡೀಪೋ ಮ್ಯಾನೇಜರ್ ಬಿ.ಬಿ.ಚಿತ್ತವಾಡಗಿ ಅವರು ಮರಳಿ ಕರ್ತವ್ಯ ಹಾಜರಾಗುವಂತೆ ಒತ್ತಾಯಿಸುತ್ತಿರುವುದನ್ನು ಚಾಲಕ ನಿರಾಕರಿಸುತ್ತಿದ್ದಾಗ ಪೋಟೋ ತಗೆದ ಮಾಧ್ಯಮದವರೊಂದಿಗೆ ವ್ಯವಸ್ಥಾಪಕ ಅಸಭ್ಯವಾಗಿ ವರ್ತಿಸಿದ ಘಟನೆ ನಡೆಯಿತು. ಕಳೆದ ಮೂರು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಸಾರಿಗೆ ನೌಕರರ ಮುಷ್ಕರದಿಂದ ಕಳೆದ ಎರಡು ದಿನಗಳ ಹಿಂದೆ ಶ್ರೀಶೈಲಕ್ಕೆ ಹೋಗಿದ್ದ ಹುನಗುಂದ ಘಟಕದ ಬಸ್ ಮರಳಿ ಡೀಪೋ ಸೇರುತ್ತಿದ್ದಂತೆ, ಘಟಕ ವ್ಯವಸ್ಥಾಪಕ ಮರಳಿ ಕರ್ತವ್ಯಕ್ಕೆ ಹೋಗಲು ಸೂಚಿಸುತ್ತಿರುವ ವೇಳೆ ಮಾಧ್ಯಮದವರು ಪೋಟೋ ತಗೆದು ಚಾಲಕರ ಅಭಿಪ್ರಾಯ ಕೇಳಿದರು ಎನ್ನುವ ಕಾರಣಕ್ಕೆ ನೀವ್ಯಾರೀ ಪೋಟೋ ತಗೆಯೋದಕ್ಕೆ ? ಯಾರನ್ನು ಕೇಳಿ ಪೋಟೋ ತಗದ್ರೀ ? ನಿಮ್ಮ ಮೇಲೆ ನಾನು ಕೇಸ್ ಮಾಡಸ್ತೀನಿ, ಪೊಲೀಸ್ ಕರಸ್ತೀನಿ ಅಂತಾ ಬೆದರಿಕೆಯನ್ನು ಹಾಕಿದ್ದಲ್ಲದೇ ಅಸಭ್ಯವಾಗಿ ಮಾತನಾಡಿ ಮಾಧ್ಯಮದವರನ್ನು ಅವಮಾನ ಪಡಿಸುವುದರ ಜೊತೆಗೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಮತ್ತು ಮಾಧ್ಯಮದವರ ಪ್ರಶ್ನೆಗೆ ಧÀಕ್ಕೆ ತರುವ ರೀತಿ ಡೀಪೋ ಮ್ಯಾನೇಜರ ನಡೆದುಕೊಂಡರು.
ಇಷ್ಟೆಕ್ಕೆ ಸುಮ್ನೆ ಇರದ ಡೀಪೋ ಮ್ಯಾನೇಜರ ಹುನಗುಂದ ಠಾಣಿಯ ಪಿಎಸ್ಐ ಶರಣಬಸಪ್ಪ ಸಂಗಳದವರಿಗೆ ದೂರವಾಣಿ ಕರೆಯ ಮೂಲಕ ವಿಷಯ ತಿಳಿಸಿ ಸ್ಥಳಕ್ಕೆ ಕರೆಯಿಸಿ ವಿಷಯ ಪ್ರಾಸ್ತಾಪಿಸಿದಾಗ ಪಿಎಸ್ಐ ಸಂಗಳದವರು ಮಾಧ್ಯಮದವರು ಅವರ ಕೆಲಸ ಅವರು ಮಾಡ್ತಾರೆ ನಿಮ್ಮ ಕೆಲಸ ನೀವು ಮಾಡಿ ಅವರನ್ನು ಪೋಟೋ ತಗೆಬೇಡಿ ಅಂತಾ ನಿರ್ಬಂಧಿಸುವುದು ಸರಿಯಲ್ಲ ಎಂದು ಮ್ಯಾನೇಜರಗೆ ಕ್ಲಾಸ್ ತಗೆದುಕೊಂಡರು. ನಂತರ ಪತ್ರಕರ್ತರನ್ನು ಸಮಾಧಾನ ಪಡಿಸಿ ವಿಕೋಪಕ್ಕೆ ತೆರಳುತ್ತಿದ್ದ ಘಟನೆಯನ್ನು ಪಿಎಸ್ಐ ಅವರು ತಿಳಿಗೊಳಿಸಿದರು.