ಬಳ್ಳಾರಿ

ನಮ್ಮ ರಂಗಭೂಮಿ, ನಾವು ನಮ್ಮವರಿಗೆ ಕಾರ್ಯಕ್ರಮ

ನಮ್ಮ ರಂಗಭೂಮಿ, ನಾವು ನಮ್ಮವರಿಗೆ ಕಾರ್ಯಕ್ರಮ

ಲೋಕದರ್ಶನ ವರದಿ 

ಬಳ್ಳಾರಿ 05: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ನಮ್ಮ ರಂಗಭೂಮಿ ಮತ್ತು ನಾವು ನಮ್ಮವರಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆ ಕಳೆದ ಆರು ವರ್ಷಗಳಿಂದ ಯಾವುದೇ  ಪ್ರತಿ ಫಲಾಪೇಕ್ಷೆ ಇಲ್ಲದೆ ಅನೇಕ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದೆ. ಇದರಲ್ಲಿನ ಯುವಕರು ಒಂದಾಗಿ ಮಾಡುವ ಈ ಕಾರ್ಯ ಶ್ಲಾಘನೀಯವಾದುದು ಎಂದು ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ  ಎಂ.ಶಿವಾಜಿರಾವ್  ಹೇಳಿದರು.  



ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ವರದಿಗಾರ ಎನ್‌.ವೀವರಭದ್ರಗೌಡ ಅವರು ನಗರದಲ್ಲಿ ಅನೇಕ ಸಂಘ ಸಂಸ್ಥೆಗಳು ಮಾಡದಷ್ಟು ಸೇವೆಗಿಂತ ಹೆಚ್ಚಿನ ಪ್ರಚಾರ ಬಯಸುತ್ತವೆ. ಆದರೆ ಅದನ್ನು ಬಯಸದೇ ಕಳೆದ ಆರು ವರ್ಷಗಳಿಂದ  ಸ್ವಚ್ಚತೆ, ಪರಿಸರ, ಪ್ರಾಣಿ ಸಂಕುಲಗಳ ಸಂರಕ್ಷಣೆ, ಹಸಿದ ಹೊಟ್ಟೆಗಳಿಗೆ ಮಿಕ್ಕ ಅನ್ನದ ವಿತರಣೆ, ಬಡ ಮಕ್ಕಳಿಗೆ ಶಿಕ್ಷಣ ನೀಡುವುದು ಸೇರಿದಂತೆ  ಹಲವಾರು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದೆ ಈ ಸಂಸ್ಥೆ  ಇತರ ಸಂಘಸಂಸ್ಥೆಗಳಿಗೆ ಮಾದರಿಯಾದುದು ಎಂದರು. ಕಲಾವಿದರನ್ನು ಕೇವಲ ಸನ್ಮಾನ ಮಾಡಿ ಕಳಿಸದೆ. ಅವರ ಜೀವನದ ಹಲವು ಮಜಲುಗಳನ್ನು  ವೇದಿಕೆಯಲ್ಲಿಸಂವಾದ ನೆಡೆಸುವ ಮೂಲಕ ಪರಿಚಯಿಸಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. 

 

ವೇದಿಕೆಯಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆಗೈದ  ಹೆಚ್‌.ಎಂ.ಪಂಪಯ್ಯ ಸ್ವಾಮಿ,  ವೀಣಾ ಆದೋನಿ,  ಕೆ.ಜಗದೀಶ್ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಗಳಾದ ಬ್ಯಾಂಕ್ ನಿವೃತ್ತ ಉದ್ಯೋಗಿ ಎ.ಜಿ.ವಿಜಯಮ್ಮ  ಅನಂತ ಚೇತನ ಮಕ್ಕಳ ಪೋಷಕರಿಗೆ ಗಾಲಿ ಕುರ್ಚಿ ವಿತರಿಸಿದರು ಹಾಗು ಅತಿಥಿಗಳಾದ ರೂಪನಗುಡಿ ಕಾಲೇಜಿನ ಪ್ರಾಂಶುಪಾಲ ಗೋಪಾಲ ಸಗರ್ ಬಿಡುಗಡೆಗೊಳಿಸಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಕಲಾವಿದರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. 

   

ರಂಗನಟಿ ವೀಣಾ ಆದೋನಿ ಅವರನ್ನು ಸಂಸ್ಥೆಯ ಕಾರ್ಯನಿರ್ವಾಹಕ ಸುರೇಶ್ ಮಾತನಾಡಿಸುತ್ತ  ಅವರ ಜೀವನ ಗಾಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು.  ಮಕ್ಕಳನ್ನು ಪುಸ್ತಕದ ಹುಳುಗಳಾಗಿ ಪುಸ್ತಕಗಳಿಗೆ ಜೋತು ಬೀಳದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಎಂದ ವೀಣಾ ಅವರು  ಹೇಳಿ. ರಂಗಗೀತೆ ಹಾಡಿ, ನಾಟಕದ ಮಾತು ಹೇಳಿ ನೆರೆದವರ ಮನಸೂರೆಗೊಂಡರು. ಸಂಸ್ಥೆಯ  ಮಾಕಂರ್ಡೇಯ ಅವರು ವಂದುವಾಗಲಿಯ ಹಾಲಿ ಶ್ರೀಧರಗಡ್ಟೆ ನಿವಾಸಿ ಬಯಲಾಟದ ಮಾಸ್ಟರ್ ಹೆಚ್‌.ಎಂ.ಪಂಪಯ್ಯಸ್ವಾಮಿ ಅವರನ್ನು ಪರಿಚಯಿಸಿದರು. 1985 ರಿಂದ ದೊಡ್ಡಾಟ ಕಲಿಸುತ್ತಿರುವ ತಾಮಗೆ ಸರ್ಕಾರ  ಈವರೆಗೆ ಯಾವುದೇ ಪ್ರಶಸ್ತಿ ನೀಡಿಲ್ಲ ಎಂದ ಅವರು. ಬಯಲಾಟ ಗಂಡುಕಲೆ ಈ ಕಲೆಗೆ ನಗರವಾಸಿಗಳು ಹಾಗು ವಿದ್ಯಾವಂತರು ಆಸಕ್ತಿ ತೋರದಿರುವುದೆ ಈ ಕಲೆ ಹಿಂದುಳಿಯುವಿಕೆಗೆ ಕಾರಣ ಎಂದು ಅಭಿಪ್ರಾಯ ಪಟ್ಟರು. ಬಯಲಾಟ ಸಂಭಾಷಣೆಯನ್ನು ತಮ್ಮ ಕಂಚಿನ ಕಂಠದಿಂದ ಹೇಳಿ. ಪ್ರೇಕ್ಷಕರನ್ನು ರಂಜಿಸಿದರು. ರಂಗನಿರ್ದೇಶಕ ಕೆ.ಜಗದೀಶ್ ಅವರನ್ನು ವಿನಯ್ ಪರಿಚಯಿಸಿದರು.  ವಿದ್ಯಾರ್ಥಿ ದೆಶೆಯಿಂದ ಇಂದಿನವರೆಗೆ ರಂಗಭೂಮಿ ಸೇವೆ ಮಾಡುತ್ತಿರುವೆ ಈ ವರಗೆ 788 ನಾಟಕಗಳ ನಿರ್ದೇಶನ, ಪ್ರದರ್ಶನ ಮಾಡಿದೆ.  ವೃತ್ತಿಯ ಜೊತೆ ರಂಗಭೂಮಿಯನ್ನು ಪ್ರವೃತ್ತಿಯಾಗಿ ಪಡೆದುಕೊಂಡು ಅದಕ್ಕೂ ಚಲದಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ಬದುಕಿದೆ ಎಂದರು. ಯಾವುದೇ ಸಾಧನೆಗೆ ಸಮಯ ಇಲ್ಲ ಎಂದು ಯಾರೂ ಭಾವಿಸಬಾರದು ಎಂದರು ಇಂದು ಕಲಾವಿದರಲ್ಲಿ ಶ್ರಧ್ದೆ  ರಂಗಶಿಸ್ತು ಆಸಕ್ತಿಯ ಕೊರತೆಯಿಂದಾಗಿ ನಾಟಕಗಳು ಯಶಸ್ವಿಯಾಗುತ್ತಿಲ್ಲ. ಅಭಿನಯದ ಗಂಧಗಾಳಿ ಗೊತ್ತಿಲ್ಲದವರು ಕೂಡ  ದೊಡ್ಡ ಕಲಾವಿದರಂತೆ ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು  ಕುಟುಕಿದರು. 

 

ಸಂಸ್ಥೆಯ ಕಾರ್ಯನಿರ್ವಾಹಕ ರಾಯಚೋಟಿ ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರಾಶ್ರಿತರಿಗೆ ಬೆಡ್ ಶೀಟ್ ವಿತರಣೆ, ಕೋವಿಡ್ ನಲ್ಲಿ ಆಹಾರ ಧಾನ್ಯ ವಿತರಣೆ, ಮಕ್ಕಳಿಗೆ ಉಚಿತ ಟ್ಯೂಷನ್, ತ್ಯಾಜ್ಯ ವಿಲೇವಾರಿ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯ ಚಟುವಟಿಕೆ ಮಾಡಿರುವ ಬಗ್ಗೆ ತಿಳಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಕು.ಸಂಧ್ಯಾ,ಶಾಂತ ಮತ್ತು ಮೀನಾಕ್ಷಿ ನಡೆಸಿಕೊಟ್ಟರು.ಸಂಸ್ಥೆಯ ಕಾರ್ಯನಿರ್ವಾಹಕರಾದ ಚಂದ್ರಿಕ,ಪೂಜ,ಮಂಜುಳ,ಮಂಗಳ ನಾಗರಾಜ್, ವೀರೇಶ್, ಬಾಲಸುಬ್ರಮಣ್ಯ, ನಿಜಲಿಂಗ, ಪಂಪಾಪತಿ, ಪ್ರಕಾಶ್, ಪಂಪಾ, ಶಿವಾಜಿ, ಪ್ರಶಾಂತ್, ಭಾಷ, ಆನಂದ್ ಯೋಗಿ ಪಾಲ್ಗೊಂಡಿದ್ದರು. ಅಮೃತ, ಅವನಿ, ಗಾಯತ್ರಿ, ಅವರಿಂದ  ಭರತ ನಾಟ್ಯ, ಸಂಜು ಶ್ರೀ,ರಂಜಿತ ಉಪಾಧ್ಯಾಯ, ದಕ್ಷಿಣ ಮೂರ್ತಿ  ರವರು ಪ್ರದರ್ಶಿದ  ಏಕಪಾತ್ರಾಭಿನಯ ಮನೋಜ್ಞವಾಗಿತ್ತು. ಟಿ.ಜಿ.ತಿರುಮಲ ಕು.ವೀಣಾ, ಅಶ್ವನಿ, ಹುಲುಗಪ್ಪ ಮತ್ತು ತಂಡದಿಂದ ಗೀತೆಗಳ ಗಾಯನ ನಡೆಯಿತು ಕುಮಾರಿ ಸ್ವಾತಿ ಪ್ರಾರ್ಥನೆ ಮಾಡಿದರು. 


ಸುದ್ದಿ ಓದಿ