ಲಿಂ ಮುಖಂಡರು ಸಭೆಗೆ ಪ್ರತ್ಯೇಕವಾಗಿ ನಮ್ಮ ಬೆಂಬಲಿಗರೂ ಸಭೆ ನಡೆಸುತ್ತಾರೆ; ಸಚಿವ ಸತೀಶ ಜಾರಕಿಹೊಳಿ
ಅಥಣಿ, 23 ; ಜಿಲ್ಲಾ ಮಧ್ಯವರ್ತಿ ಬ್ಯಾಂಕು ಬ್ಯಾಂಕಿನ ಚುನಾವಣೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಇದಕ್ಕಾಗಿ ಒಂದು ಟಿಂ ಕೆಲಸ ಮಾಡುತ್ತಿದ್ದು, ನಾನು ನೇರವಾಗಿ ಈ ಸಂಬಂಧ ಭಾಗಿಯಾಗಿಲ್ಲ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತೂವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ಸ್ಥಳೀಯ ನೀರೀಕ್ಷಣಾ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಲಿಂಗಾಯತ ಮುಖಂಡರು ಸಭೆ ನಡೆಸಿರುವುದು ನನ್ನ ಗಮನಕ್ಕೆ ಬಂದಿದ್ದು, ಅವರು ಪ್ರತ್ಯೇಕ ಸಭೆ ನಡೆಸಿದಂತೆ ನಮ್ಮ ಬೆಂಬಲಿಗರೂ ಕೂಡ ಸಭೆ ನಡೆಸುತ್ತಾರೆ ಇದರಲ್ಲಿ ವಿಶೇಷ ಏನೂ ಇಲ್ಲ ಎಂದರು.
ಸುಪ್ರಿಂ ಕೋರ್ಟ ಇಡೀ ದಾಳಿಯ ಕುರಿತು ತನ್ನದೇ ಆದ ಅಭಿಪ್ರಾಯ ವ್ಯಕ್ತ ಪಡಿಸಿದೆ ಜೊತೆಗೆ ಮೂಡಾ ಹಗರಣದ ಕುರಿತು ಸ್ಪಷ್ಟತೆ ನೀಡಿದೆ ಇದನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಇಡೀ ದೇಶದಲ್ಲಿ ಇಡಿ ನಡೆಸುತ್ತಿರುವ ದಾಳಿಗಳೆಲ್ಲವೂ ಕೂಡ ರಾಜಕೀಯ ಪ್ರೇರಿತವಾಗಿವೆ ಎಂದ ಅವರು ಬೆಳಗಾವಿ ಜಿಲ್ಲೆಯ ವಿಭಜನೆಗೆ ಸಂಬಂಧಿಸಿದಂತೆ ಅನೇಕ ಬಾರಿ ನಾನು ನನ್ನ ಅಭಿಪ್ರಾಯ ವ್ಯಕ್ತ ಪಡಿಸಿರುವೆ ಎಂದು ಹೇಳಿದರು ಇದಕ್ಕೂ ಮುನ್ನ ಸಚಿವ ಸತೀಶ ಜಾರಕಿಹೊಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳಿ, ದಿಗ್ವಿಜಯಸಿಂಗ ಪವಾರ ದೇಸಾಯಿ, ರಾವಸಾಹೇಬ ಐಹೊಳೆ, ಸಿದ್ಧಾರ್ಥ ಸಿಂಗೆ, ಶ್ಯಾಮರಾವ ಪೂಜಾರಿ, ಸಂಜೀವ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.