ಶಿಗ್ಗಾವ್

ಸ್ವಚ್ಛತಾ ಶ್ರಮದಾನ ಮಾಡುವುದೇ ನಮ್ಮ ಗುರಿ: ಶಿವಾನಂದ ಮ್ಯಾಗೇರಿ

ಸ್ವಚ್ಛತಾ ಶ್ರಮದಾನ ಮಾಡುವುದೇ ನಮ್ಮ ಗುರಿ: ಶಿವಾನಂದ ಮ್ಯಾಗೇರಿ

ಶಿಗ್ಗಾವಿ 29: ತಾಲೂಕನ್ನು ಕಸಮುಕ್ತವಾಗಿ ಮಾಡಿ ಹಸಿರುಮಯ ಮಾಡುವ ಸಂಕಲ್ಪದೊಂದಿಗೆ ತಾಲೂಕಿನ ಎಲ್ಲ ಕಸವಿರುವ ಕ್ಷೇತ್ರಗಳಲ್ಲಿ ಸ್ವಚ್ಛತಾ ಶ್ರಮದಾನ ಮಾಡುವುದೇ ನಮ್ಮ ಗುರಿ ಎಂದು ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ತಾಲೂಕ ಘಟಕವತಿಯಿಂದ ಸ್ವಚ್ಚತಾ ಅಭಿಯಾನ ಶ್ರಮದಾನ ಮಾಡಿ ಮಾತನಾಡಿದ ಅವರು ನಾವು ವಾಸಿಸುವ ಪರಿಸರ ಸ್ವಚ್ಚ ಇರದಿದ್ದರೇ ಅನೇಕ ರೋಗರುಜಿನಗಳು ಬರುತ್ತವೆ ಆದ್ದರಿಂದ ನಾವು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಸ್ವಚ್ಚತೆ ಕೈಗೊಳ್ಳುತ್ತಿದ್ದೇವೆ ಎಂದರು.

ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ ಮಾತನಾಡಿ ಪ್ರತಿ ತಿಂಗಳಿಗೊಮ್ಮೆ ನಮ್ಮ ಪದಾಧಿಕಾರಿಗಳ ಸಲಹೆ  ಸೂಚನೆಯ ಮೇರೆಗೆ ಆ ಪರಿಸರವನ್ನು ಆಯ್ಕೆಮಾಡಿ ಅದನ್ನು ಸಂಪೂರ್ಣವಾಗಿ ಸ್ವಚ್ಚ ಗೋಳಿಸುವುದು ಮೋರ್ಚಾದ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ನಾರಾಯಣಪೂರ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಯ ಮುಂಡಗೋಡ, ರವಿ ಬಿಷೇಟ್ಟಿ, ಮಂಜುನಾಥ ಮಿರ್ಜಿ, ಸಚಿನ ಮಡಿವಾಳರ, ರಾಘವೇಂದ್ರ ಅಟದಕರ, ಮಲ್ಲಿಕಾರ್ಜುನ ಹಡಪದ, ಸಂಜೀವ ಬಾರಿಗೀಡದ, ಶರಣಪ್ಪ ಗುಳೇದಕೇರಿ, ಶಂಕರ ಹೊಸಕಟ್ಟಿ, ರಾಘು ನಿಂಬಕ್ಕನವರ, ಸೇರಿದಂತೆ ಭಾಜಪ ಕಾರ್ಯಕರ್ತರು ಇದ್ದರು.

ಸುದ್ದಿ ಓದಿ