ಬಳ್ಳಾರಿ

ಆರೋಗ್ಯ ಶಿಬಿರ ಏರ್ಪಡಿಸಿರುವುದು ಸಾರ್ಥಕದ ಕೆಲಸ: ಶ್ರೀಗಳು

ಆರೋಗ್ಯ ಶಿಬಿರ ಏರ್ಪಡಿಸಿರುವುದು ಸಾರ್ಥಕದ ಕೆಲಸ: ಶ್ರೀಗಳು

ಬಳ್ಳಾರಿ 23 : ಚಾನಾಳ್ ಶೇಖರ್ ಅವರು ತಮ್ಮ ಹುಟ್ಟುಹಬ್ಬವನ್ನು ದೀನ ದಲಿತರಿಗೆ, ಬಡಜನರಿಗೆ ಉಪಯೋಗವಾಗುವ ರೀತಿಯಲ್ಲಿ ವೈದ್ಯೇಹಿ ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಿರುವುದು ಸಾರ್ಥಕದ ಕೆಲಸ ಎಂದು ಬಳ್ಳಾರಿ ಸಂಸ್ಥಾನ ಮಠದ ಶ್ರೀ ಕಲ್ಯಾಣ ಸ್ವಾಮಿಗಳು ಕಮ್ಮರಚೇಡು ಹೇಳಿದರು. 

ಶುಕ್ರವಾರ ನಗರದ ಬಸವೇಶ್ವರ ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪದ್ಮಭೂಷಣ, ತ್ರಿವಿಧದಾಸೋಹಿ, ಬಸವಶ್ರೀ ಪ್ರಶಸ್ತಿ, ಮಹಾಶಿವಯೋಗಿ, ಕರ್ನಾಟಕ ರತ್ನ ಪರಮಪೂಜ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳವರ ದ್ವೀತಿಯ ಪುಣ್ಯ ಸ್ಮರಣೆ ಹಾಗೂ ಸಿ.ಎಸ್.ಆರ್.ಅಸೋಸಿಯೇಟ್ಸ್‍ನ ಸಂಸ್ಥಾಪಕ ಅಧ್ಯಕ್ಷರಾದ ಚಾನಾಳ್ ಶೇಖರ್ ರವರ 43ನೇ ಜನ್ಮ ದಿನದ ಪ್ರಯುಕ್ತ ಅಭಿಮಾನಿ ಬಳಗದಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀಗಳು ಮಾತನಾಡಿದರು.

ಮೊದಲಿಗೆ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳರವರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು.

ರಾಷ್ಟ್ರೀಯ ಬಸವ ದಳ ಬಳ್ಳಾರಿ ಅಧ್ಯಕ್ಷರಾದ ಶಾರದಮ್ಮ ಅಕ್ಕನವರು, ಮುಖ್ಯ ಅತಿಥಿಗಳಾಗಿ ಟಚ್-ಫಾರ್ ಪೌಂಡೇಷನ್ ಅಧ್ಯಕ್ಷರು, ಕೊರ‍್ಲಗುಂದಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾರಾಭರತ್‍ರೆಡ್ಡಿ, ಖ್ಯಾತಿ ನ್ಯಾಯವಾದಿಗಳು ಬಿ.ವಿ.ಬಸವರಾಜ, ವೀರಶೈವ ಸಮಾಜದ ಮುಖಂಡರು, ಸರಳದೇವಿ ಕಾಲೇಜ್‍ನ  ಪ್ರಾಂಶುಪಾಲರಾದ ಹೇಮರೆಡ್ಡಿ, ನಿಕಟ ಪೂರ್ವ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರಪ್ಪ, ಮಹಿಳಾ ಮುಖಂಡರಾದ ಸುಮಂಗಳ ಜಿ.ಎಸ್. ಬಸವರಾಜ, ಶೋಭಾ ಕಾಳಿಂಗ, ಸಿ.ಎಸ್.ಆರ್.ಅಸೋಸಿಯೇಟ್ಸ್‍ನ ಉಪಾಧ್ಯಕ್ಷರಾದ ಲತಾ ಚಾನಾಳ್ ಶೇಖರ್, ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್, ಮುಖಂಡರಾದ ಮಿಂಚೇರಿ ಬಾಬು, ಭಾಸ್ಕರ್ ರೆಡ್ಡಿ, ಯುವ ಮುಖಂಡರಾದ ಜಗನ್ನಾಥ, ಹುಗ್ಗಿ ಮಹೇಶ್, ಸಂಗಮೇಶ್ವರ ಟ್ರಸ್ಟ್‍ನ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. 

ಸುಮಾರು 100ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು ಹಾಗೂ ಉಚಿತ ಆರೋಗ್ಯ ಶಿಬಿರದಲ್ಲಿ 800ಕ್ಕೂ ಹೆಚ್ಚು ಜನರು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು, ಔಷಧಗಳನ್ನು, 40ಕ್ಕೂ ಹೆಚ್ಚು ಜನ ಕಣ್ಣಿನ ತಪಾಸಣೆ ಮಾಡಿಸಿಕೊಂಡು 16 ಜನ ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡರು.

ಸುದ್ದಿ ಓದಿ