ಬಳ್ಳಾರಿ

ಸಂಘಟನೆಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ

ಸಂಘಟನೆಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ

ಕಮ್ಮರಚೇಡು ಕಲ್ಯಾಣಸ್ವಾಮಿ ಕರೆ: ಮಹಾರಾತ್ರಿ ಮನೋರಂಜನೆ ಕಾರ್ಯಕ್ರಮ 

ಬಳ್ಳಾರಿ 19: ಕನ್ನಡ ಪರ ಸಂಘಟನೆಗಳು ಕೇವಲ ಹೋರಾಟ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುವುದಷ್ಟೆ ಅಲ್ಲ ದೇಶದ ಧಾರ್ಮಿಕ ಪರಂಪರೆಯನ್ನು ಸಹ ಉಳಿಸಿ ಬೆಳೆಸಿ ಮುಂದುವರೆಸಿಕೊಂಡು ಹೋಗುವ ಜಬ್ಧಾರಿ ಸಂಘಟನೆಗಳ ಮೇಲಿದೆ, ಆ ಕೆಲಸವನ್ನು ನವ ಕರ್ನಾಟಕ ಯುವ ಶಕ್ತಿ ಸಂಘಟನೆ ಬಳ್ಳಾರಿಯಲ್ಲಿ ಪ್ರತಿವರ್ಷ ಶಿವರಾತ್ರಿ ದಿನದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಾರಾತ್ರಿ ಮನೋರಂಜನೆ ಹೆಸರಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಮುನ್ನಡೆಸಿಕೊಂಡು ಬಂದು, ಈಗ ಹನ್ನೆರಡನೆ ವರ್ಷದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಈ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್ ಮತ್ತು ಜಿಲ್ಲಾ ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮಿಗಳು ಶ್ಲಾಘಿಸಿದರು.  

ಅವರು ಇಂದು ನಗರದ ದೊಡ್ಡ ಮಾರ್ಕೆಟ್ ಹತ್ತಿರ ತೇರುಬೀದಿಯಲ್ಲಿ ನವ ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಾರಾತ್ರಿ ಮನೋರಂಜನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.  

ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ದರೂರು ಶಾಂತನಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನವ ಕರ್ನಾಟಕ ಯುವಶಕ್ತಿ ಸಂಘಟೆನೆ ಜಿಲ್ಲಾ ಬಿಭಜನೆ, ಕಾವೇರಿ ಜಲವಿವಾದ, ಬೆಳಗಾವಿ ಗಡಿ ವಿವಾದ ಸೇರಿದಂತೆ ನಾಡಿನ ಜಲ, ನೆಲ, ಭಾಷೆ ಮತ್ತು ಸಂಸ್ಕೃತಿಗೆ ಯಾವುದೇ ಸಂದರ್ಭದಲ್ಲಿ ಅನ್ಯಾಯ ನಡೆದಲ್ಲಿ ತಕ್ಷಣ ಹೋರಾಟಕ್ಕೆ ಮುಂದಾಗುತ್ತದೆ. ನಗರದ ಮೂಲಭೂತ ಸೌಕರ್ಯವಾಗಲಿ, ಅಕ್ರಮ ಚಟುವಟಿಕೆಗಳಾಗಲಿ ಅಥವಾ ಶೈಕ್ಷಣಿಕ ರಂಗದಲ್ಲಿ ನಡೆಯುವ ಅನ್ಯಾಯ ಮತ್ತು ಅಕ್ರಮಗಳು ಕಂಡಲ್ಲಿ ಪ್ರತಿಭಟಿಸುವಲ್ಲಿ ಮುಂಚೂಣಿಯಲ್ಲಿರುತ್ತದೆ ಇದು ಅತ್ಯಂತ ಮೆಚ್ಚುಗೆಯ ಕೆಲಸ ಎಂದರು.  

ಸಂಘಟೆನಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಮಿಜಿಗಳು ಹೇಳಿದಂತೆ ನಮ್ಮ ಸಂಘಟನೆ ಬರಿ ಸಾಮಾಜಿಕ ಹೋರಾಟಗಳನ್ನು ಮಾತ್ರ ಮಾಡುವುದಿಲ್ಲ, ಧಾರ್ಮಿಕ ಚಟುವಟಿಗೆಳನ್ನು ಕಳೆದ ಹೊನ್ನೊಂದು ವರ್ಷದಿಂದ ನಡೆಸುತ್ತಾ ಬಂದಿದೆ. ಜೊತೆಗೆ ಬಡ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದೆ ಮತ್ತು ಮುಂದೆಯು ಸಹ ಮಾಡಲಿದೆ ಎಂದರು.  

ಕಾರ್ಯಕ್ರಮದಲ್ಲಿ ಯುವ ಶಕ್ತಿ ಸಂಘಟೆನೆ ಜಿಲ್ಲಾ ಪದಾಧಿಕಾರಿಗಳಾದ ಕೆ. ರಮೇಶ್, ಎಂ ದೇವೇಶ್, ಎಚ್ ರವಿಕುಮಾರ್, ಕೇದಾರ್‌ನಾಥ್, ಗಿರಿಬಾಬು, ವಾಮದೇವಸ್ವಾಮಿ, ಯಮುನಪ್ಪ ಸೇರಿದಂತೆ ಇತರರಿದ್ದರು.  

ನಂತರ ಕೊಪ್ಪಳದ ಕ್ಷಿತಿ ಈವೆಂಟ್ ಮ್ಯಾನೆಜ್‌ಮೆಂಟ್ ತಂಡದಿಂದ ಹಾಸ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರಿನ ಜ್ಯೂ. ಸುದೀಪ್ ಕಂಡು ನೆರೆದ ಜನರು ಪುಳಕಗೊಂಡರು. 


ಸುದ್ದಿ ಓದಿ