ಬುಡಾ ಉದ್ಯಾನವದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಬಳ್ಳಾರಿ 22: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿರುವ ಶ್ರೀ ಟೇಕೂರು ಸುಬ್ರಹ್ಮಣ್ಯ ಉದ್ಯಾನವನದಲ್ಲಿ ಬುಡಾದ 22.50ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹಾಗೂ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹಾಗೂ ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಟಿ.ಸುರೇಶ್ ಬಾಬು ಮತ್ತು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡ ಶ್ರೀನಿವಾಸ್ ಮೋತ್ಕರ್, ಪಾಲಣ್ಣ, ಎಪಿಎಂಸಿಯ ತಿಮ್ಮಪ್ಪ, ಮಾಜಿ ಕಾರ್ಪೊರೇಟರ್ಗಳಾದ ಭಾಸ್ಕರ್, ಮಂಜುನಾಥ್, ಹೊನ್ನೂರು ಸ್ವಾಮಿ, ಮಾರುತಿ, ಸುರೇಂದ್ರ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ವೀರೇಂದ್ರ ಕುಂದಗೋಳ, ಪ್ರಾಧಿಕಾರದ ಎಇಇ ರವಿಶಂಕರ್ ಮತ್ತು ಎಂಜನಿಯರಗಳಾದ ನಹೀಂ, ಪವನ್ ದೇಸಾಯಿ ಹಾಗೂ ಗುತ್ತಿಗೆದಾರರು ಮತ್ತು ಇತರರು ಇದ್ದರು.