ಅಪ್ರೆಂಟಿಸ್ ಮೇಳ ಉದ್ಘಾಟನೆ
ಲೋಕದರ್ಶನ ವರದಿ
ಶಿಗ್ಗಾವಿ 07: ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಕನೆಕ್ಟ್ ಸಂಸ್ಥೆ ಧಾರವಾಡ ಇವರ ವತಿಯಿಂದ ಸ್ಥಳೀಯ ಕಿರ್ಲೊಸ್ಕರ ಮೊಟಾರ್ಸ ಲಿಮಿಟೆಡ್ ಬೆಂಗಳೂರು ಕಂಪನಿಗೆ ಅಪ್ರೆಂಟಿಸ್ ಮೇಳವನ್ನು ತರಬೇತಿ ಅಧಿಕಾರಿ ಮನೋಹರ ಸಾತಗೊಂಡ ಉದ್ಘಾಟಿಸಿದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅನಿಲ ಜಮಾದಾರ, ಪವನ್ ಬಡಿಗೇರ, ಬಸನಗೌಡ ಪಾಟೀಲ ಮತ್ತು ಕನೆಕ್ಟ್ ಸಂಸ್ಥೆಯ ಸಹದೇವ ಸಂದರ್ಶನ ನಡೆಸಿದರು. ಕಿರಿಯ ತರಬೇತಿ ಅಧಿಕಾರಿ ರೂಪಾ ಹೆಚ್ ಮತ್ತು ರಾಜೇಶ್ ಉರುಣಕರ, ಸುಭಾಷ ಮುದಿಗೌಡ್ರ, ರಫಿಕ್ ಬೆಳಗಾಲಪೇಟೆ ಸಹಕರಿಸಿದರು, ಟ್ರೆನಿಂಗ್ ಆಂಡ್ ಪ್ಲೇಸ್ಮೆಂಟ್ ಅಧಿಕಾರಿ ಶಶಿಕಾಂತ ರಾಠೋಡ ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು, ಒಟ್ಟು 13 ಜನ ಅಭ್ಯರ್ಥಿಗಳು ಅಂತಿಮ ಹಂತಕ್ಕೆ ಆಯ್ಕೆ ಆದರು.