ನೂತನ ಬಸ್ ತಂಗುದಾಣ ಉದ್ಘಾಟನೆ
ಬಳ್ಳಾರಿ 20: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಲ್ಲಂ ರಾಮಾಂಜನೇಯ ಮತ್ತು ಮಕ್ಕಳು, ಪಿ.ಪಾಲಣ್ಣ ಹಾಗೂ ಪಿ.ರಮೇಶ್ ಕಾಕರ್ಲ ತೋಟ ಇವರ ಪ್ರಾಯೋಜಕತ್ವದಲ್ಲಿ ತಾಲ್ಲೂಕು ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಬಸ್ ತಂಗುದಾಣವನ್ನು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತು ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಟಿ.ಸುರೇಶ್ ಬಾಬು ಹಾಗೂ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಾಯೋಜಕರಾದ ಪಿ.ಪಾಲಣ್ಣ ಮತ್ತು ಪಿ.ರಮೇಶ್, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಎಪಿಎಂಸಿಯ ತಿಮ್ಮಪ್ಪ, ಮಾಜಿ ಕಾರ್ಪೊರೇಟರ್ ಭಾಸ್ಕರ್, ಮಂಜುನಾಥ್, ಹೊನ್ನೂರು ಸ್ವಾಮಿ, ಮಾರುತಿ, ಸುರೇಂದ್ರ ಮತ್ತು ಗುತ್ತಿಗೆದಾರರಾದ ಜೆ.ಎಂ. ಸೂರ್ಯಪ್ರಕಾಶ್ ಮತ್ತು ಇತರರು ಇದ್ದರು.