ಪ್ರಜಾಪ್ರಭುತ್ವ ಉಳಿಸಿ ರಕ್ಷಣೆ ಮಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ
ಮುಂಡರಗಿ 10: ಅಖಂಡ ಭಾರತ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿ ರಕ್ಷಣೆ ಮಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಡಾ ಅಂಬೇಡ್ಕರ್, ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿ, ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಆದವರು ಇರುವದರಿಂದ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಮಹಾನುಭಾವ ಹೋರಾಟಗಾರರು ಇದ್ದಾರೆ ಎಂದು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದಲ್ಲಿ ಬ್ಯಾಲವಾಡಗಿ ವೃತ್ತದಲ್ಲಿ, 75ನೇ ಸ್ವಾತಂತ್ರೋತ್ಸವದ ನಿಮಿತ್ತ ಶಿರಹಟ್ಟಿ ಕ್ಷೇತ್ರದಿಂದ 75ಕಿ.ಮೀ ಪಾದಯಾತ್ರೆಯನ್ನು ಕೈಕೊಂಡು ಮುಂಡರಗಿ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ದೇಶಕ್ಕೆ ಕಾಂಗ್ರೇಸ್ ಪಕ್ಷದ ಕೊಡುಗೆ ಸೂರ್ಯಚಂದ್ರ ಇರುವ ತನಕ ಮರೆಯಲು ಸಾಧ್ಯವಿಲ್ಲ, ಪಕ್ಷದ ಕೊಡುಗೆ ಅಪಾರವಾಗಿದೆ. ದೇಶದ ಯಾವ ರಾಜಕೀಯ ಪಕ್ಷಗಳು, ದೇಶಕ್ಕೆ ಕೊಡುಗೆ ನೀಡಿಲ್ಲವೆಂದರು. ಸ್ವಾತಂತ್ರಕ್ಕಾಗಿ ಜಾತಿ ಧರ್ಮ ಮರೆತು, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಬ್ರಿಟ್ರೀಷರ ವಿರುದ್ಧ ಹೋರಾಟ ಮಾಡಿ, ದೇಶದ ಜನರು ನೆಮ್ಮದಿಯಿಂದ ಬದುಕಲು ಸಾಕ್ಷಿಯಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಅತಂತ್ರ ಸ್ಥಿತಿಯಲ್ಲಿತು, ಹಳ್ಳಿ ಜನತೆಗೆ ಊಟ, ವಸತಿ, ಶಿಕ್ಷಣದ ತೊಂದರೆ ಆಗಿತ್ತು. 75 ಕಿ.ಮೀ ಪಾದಯಾತ್ರೆಯಲ್ಲಿ ಗ್ರಾಮೀಣ ಜನತೆಗೆ ಕಾಂಗ್ರೇಸ್ ಪಕ್ಷದ ಸಾಧನೆ ಸೌಲಭ್ಯ, ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಜನತೆಯ ಗಮನಕ್ಕೆ ತರಲಾಗಿದೆ. ಕಳೆದ 8 ವರ್ಷಗಳಿಂದ ದೇಶದ ಜನತೆ ವನವಾಸವನ್ನು ಅನುಭವಿಸುತ್ತಿದ್ದಾರೆ. ದಿನಬಳಕೆ ವಸ್ತುಗಳ ದರಗಳ ಏರಿಕೆಯಿಂದ ಜನಸಾಮಾನ್ಯರ ಬದುಕು ಶೋಚನೀಯವಾಗಿದೆ.
ದೇಶದ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುವದಾಗಿ ಹಾಗೂ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವದಾಗಿ, ಮೊದಲಾದ ಆಸೆಗಳನ್ನು ಪ್ರಧಾನಿ ಮೋದಿ ಅವರು ತೋರಿಸಿ, ಅಧಿಕಾರ ಹಿಡಿದು, ನಂತರ ಡಿಜೈಲ್, ಪೆಟ್ರೋಲ್ ಮತ್ತು ಸಿಲೆಂಡರ್ ಬೆಳೆ ಏರಿಕೆ ಮಾಡುವುದಲ್ಲದೆ ದೈನಂದಿನ ದಿನಸಿ ಬೆಲೆಗಳನ್ನು ಗಗನಕ್ಕೆ ಏರಿಸಿ, ಮೌನವೃತ ತಾಳಿದ್ದಾರೆಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ದೇಶದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ಬಹುಮತ ಇದೆ ಎಂದು ಜನವಿರೋಧಿ, ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಿದ್ದಾರೆ. ಸ್ವಾತಂತ್ರ ಯೋಧರನ್ನು ಸ್ಮರಿಸುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ರೈತರ ದೇಶದ ಬೆನ್ನೆಲುಬು ಎಂದು ಹೇಳುವ ಸರಕಾರ, ರೈತರಿಗೆ ಏನು ಮಾಡಿದೆ. ಈ ಪಾದಯಾತ್ರೆ ಸಂದರ್ಭದಲ್ಲಿ ಎಲ್ಲ ಹಳ್ಳಿಗಳ ಜನತೆ ಬೆಂಬಲ ಹಾಗೂ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಕಾಂಗ್ರೇಸ್ ಕಮೀಟಿ ಅಧ್ಯಕ್ಷ ರಾಮಚಂದ್ರ ಕಲಾಲ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಭರತ ನಾಯಕ, ಎಂ.ಎಸ್.ದೊಡ್ಡಗೌಡರ, ಎಚ್ ವಿರುಪಾಕ್ಷಗೌಡ, ಯಲ್ಲಪ್ಪ ಹೊಂಬಳಗಟ್ಟಿ, ಡಿ.ಕೆ.ಹೊನ್ನಪ್ಪನವರ, ಅನ್ವರ ಬನ್ನಿಗೋಳ, ಆರ್.ಎಂ.ಸೈದರ, ಮೆಹಬೂಬ ಬನ್ನಿಗೋಳ, ಸುರೇಶ ಮಾಗಡಿ, ಸುರೇಶ ಬಣಕಾರ, ಶರಣಪ್ಪ ಕುಬಸದ, ನಜೀರ ಶೀರಿ, ಡಿ.ಎಂ.ಕಾತರಕಿ, ಶೇಖರ ಜುಟ್ಲಣ್ಣವರ, ಎಂ.ವಾಯ್.ಗೌಡರ, ಎ.ಪಿ.ದಂಡಿನ, ಬಸವರಾಜ ಹೊಸಮನಿ, ಶೇಖರಾಜ ಹೊಸಮನಿ, ಮಲ್ಲಪ್ಪ ಹಲವಾಗಲಿ, ಪ್ರೋ.ಬಿ.ಎಫ್.ಈಟಿ, ರಾಜೇಸಾಬ ಬೆಟಗೇರಿ, ರಾಮು ಭಜಂತ್ರಿ, ರಾಘವೇಂದ್ರ ಕುರಿಯವರ, ವಿನೋದ ವಡ್ಡರ, ವ್ಹಿ.ಎಸ್.ಘಟ್ಟಿ, ಈರಣ್ಣ ಡೊಣ್ಣಿ, ಮಂಜು ಡಂಬಳ, ಪ್ರಭು ಗುಗ್ಗರಿ, ಮಂಜುನಾಥ ಮುಂಡವಾಡ, ಹುಮಾಯೂನ ಮಾಗಡಿ, ಲೋಕೇಶ ದೊಡ್ಡಮನಿ, ಶ್ರೀನಿವಾಸ ದೊಡ್ಡಮನಿ, ಸುಜಾತಾ ದೊಡ್ಡಮನಿ, ಜ್ಯೋತಿ ಕುರಿಯವರ, ಪ್ರತಿಭಾ ಹೊಸಮನಿ, ಕಲ್ಪನಾ ಸವಣೂರ, ಪಾರ್ವತಿ ಕುಬಸದ, ಮಂಜುಳಾ ಹೊಸಮನಿ, ಸುಮಂಗಲಾ ಹೊಸಮನಿ, ಶಕುಂತಲಾ ಬಳ್ಳಾರಿ, ಲಕ್ಷ್ಮೀದೇವಿ ಮಾಗಡಿ, ಕಮಲಾಕ್ಷಿ ಚಳಗೇರಿ, ರೇಣುಕಾ ಹೊಸಮನಿ, ಭಾಗ್ಯಶ್ರೀ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.