26ಕ್ಕೆ ಆನ್ಲೈನ್ ವಿಶೇಷ ಉಪನ್ಯಾಸ
ಹಂಪಿ 22 : 72ನೇ ಗಣರಾಜ್ಯೋತ್ಸವ ದಿಣಾಚರಣೆ ಅಂಗವಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನೇವರಿ 26 ರಂದು ಬೆಳಿಗ್ಗೆ 10:30ಕ್ಕೆ “ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ” ಎಂಬ ವಿಷಯ ಕುರಿತು ಆನ್ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗುಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಸ.ಚಿ.ರಮೇಶ ವಹಿಸಲಿದ್ದು, ವಿಶೇಷ ಉಪನ್ಯಾಸಕರಾಗಿ ಕಾನೂನ ಅಧ್ಯಯನ ವಿಭಾಗದ ಪ್ರಾಧ್ಯಪಕರಾದ ಡಾ.ಎನ್.ಸತೀಶ ಗೌಡ ಹಾಗೂ ಪ್ರಾಸ್ತಾವಿಕವಾಗಿ ಡಾ. ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕರಾದ ಡಾ. ಯರ್ರಿಸ್ವಾಮಿ ಈ ಅವರು ಮಹಿಸಲಿದ್ದಾರೆ.