ಬಳ್ಳಾರಿ

ಎಡ-ಪ್ರಜಾಸತ್ತಾತ್ಮಕ ಪಕ್ಷಗಳಿಂದ ಆನ್‌ಲೈನ್ ಪ್ರತಿಭಟನೆ

ಎಡ-ಪ್ರಜಾಸತ್ತಾತ್ಮಕ ಪಕ್ಷಗಳಿಂದ ಆನ್‌ಲೈನ್ ಪ್ರತಿಭಟನೆ

ಬಳ್ಳಾರಿ 28: ಕೇಂದ್ರ-ರಾಜ್ಯ ಸರ್ಕಾರಗಳು ಕರೋನಾ ಪರಿಸ್ಥಿತಿಯನ್ನು ನಿರ್ಲಕ್ಷ್ಯ ಧೋರಣೆಯಿಂದ ಹಾಗೂ ಅವೈಜ್ಞಾನಿಕ ರೀತಿಯಿಂದ ನಿರ್ವಹಿಸಿದ ರೀತಿಯನ್ನು ಖಂಡಿಸಿ ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟ ವತಿಯಿಂದ ಇಂದು ರಾಜ್ಯಮಟ್ಟದ ಆನ್‌ಲೈನ್ ಪ್ರತಿಭಟನೆ ಸಭೆ ನಡೆಯಿತು.  

ಸರ್ವರಿಗೂ ಉಚಿತ ಲಸಿಕೆ, ಓಷಧಿ, ಚಿಕಿತ್ಸೆ ಒದಗಿಸಿ, ನೇರ ನಗದು ಹಾಗೂ ಉಚಿತ ಪಡಿತರ ನೀಡಿರಿ, ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಪಡಿಸಿ, ಉದ್ಯೋಗ ಖಾತ್ರಿ ಯೋಜನೆ 200ದಿನಕ್ಕೆ ಹೆಚ್ಚಿಸಿ ಹಾಗೂ ನಗರಗಳಿಗೂ ವಿಸ್ತರಿಸಿ, ಕೋವಿಡ್ ವಾರಿಯರ​‍್ಸ‌ಗೆ ಸುರಕ್ಷತೆ ಒದಗಿಸಿ, ಈ ಬೇಡಿಕೆಗಳಿಗಾಗಿ ಆಗ್ರಹಿಸಲಾಯಿತು.  

ಸಿಪಿಐ, ಸಿಪಿಐ(ಎಂ), ಎಸ್‌.ಯುಸಿ.ಐ (ಸಿ), ಆರ್‌.ಪಿ.ಐ ಸೇರಿದಂತೆ ಇನ್ನಿತರ ಎಡ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳು ಈ ಆನ್ಲೈನ್ ಪ್ರತಿಭಟನಾ ಸಭೆಗೆ ಕರೆ ನೀಡಿದ್ದವು. ಸಿ.ಪಿ.ಐ(ಎಮ್)ನ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಸಿ.ಪಿ.ಐನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಎಸ್‌ಯುಸಿಐ(ಸಿ)ನ ರಾಜ್ಯ ಕಾರ್ಯದರ್ಶಿ ಕೆ.ಉಮಾರವರು, ಆರ್‌.ಪಿ.ಐ ರಾಜ್ಯ ಅಧ್ಯಕ್ಷರು ಮೋಹನ್ ರಾಜ್ ಮತ್ತಿತರರು ಭಾಷಣಕಾರರಾಗಿ ಆಗಮಿಸಿದ್ದರು. 

ಬಳ್ಳಾರಿ ಜಿಲ್ಲೆಯಲ್ಲಿಯೂ ಸಹ ಈ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಸಾವಿರಾರು ಜನರು ಝೂಮ್ ಹಾಗೂ ಫೇಸ್‌ಬುಕ್ ಮೂಲಕ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಹೋರಾಟವು ಮುಂದೆವರೆಯಲಿದ್ದು, ಇದೇ ಜೂನ್ 1ರಂದು ರಾಜ್ಯಮಟ್ಟದ ಆನ್‌ಲೈನ್ ಚಳುವಳಿಗೆ ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟವು ಕರೆ ಕೊಟ್ಟಿವೆ. ಬಳ್ಳಾರಿಯ ಜನತೆಯು ಸಹ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಎಸ್‌.ಯುಸಿ.ಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾದ್ಯ, ಸಿ.ಪಿ.ಐ(ಎಮ್)ನ ಆರ್‌.ಎಸ್ ಬಸವರಾಜ, ನಾಗಭೂಷಣ್ ರಾವ್, ಆರ್‌.ಪಿ.ಐನ ಮಲ್ಲಿಕಾರ್ಜುನ ಮನವಿ ಮಾಡಿಕೊಂಡಿದ್ದಾರೆ. 


ಸುದ್ದಿ ಓದಿ