ಶಿಗ್ಗಾವ್

ಪ್ರತಿಭಾ ಪುರಸ್ಕಾರಕ್ಕೆ ಆನ್ ಲೈನ್ ನಲ್ಲಿ ಅರ್ಜಿ

ಪ್ರತಿಭಾ ಪುರಸ್ಕಾರಕ್ಕೆ ಆನ್ ಲೈನ್ ನಲ್ಲಿ ಅರ್ಜಿ

ಲೋಕದರ್ಶನ ವರದಿ

ಶಿಗ್ಗಾವಿ05 :ರಾಜ್ಯ ಸರ್ಕಾರೀ ನೌಕರರಕೇಂದ್ರ ಸಂಘವು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90 ಕ್ಕೂ ಅಧಿಕ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರ ಕ್ಕೆಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಿ  ಎಂದು ತಾಲೂಕ ಘಟಕದ ಅಧ್ಯಕ್ಷ ಅರುಣ ಹುಡೇದಗೌಡ್ರ ಹೇಳಿದರು.

ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಅರ್ಜಿಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ನೌಕರರಾಗಿರಬೇಕು. (ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕಗೊಂಡ ನೌಕರರ ಮಕ್ಕಳು ಅರ್ಜಿ ಸಲ್ಲಿಸುವಂತಿಲ್ಲ) ವಿದ್ಯಾರ್ಥಿ ಪ್ರಥಮ ಪ್ರಯತ್ನದಲ್ಲೇ ಎಸ್ಎಸ್ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಎಂದು ಹೇಳಿದ್ದಾರೆ. 

ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಪಾಸ್ ಫೋಟೋ ಅಳತೆಯ ಭಾವಚಿತ್ರ, ಧೃಡೀಕೃತಅಂಕಪಟ್ಟಿ, ಇಲಾಖೆಯ ಸೇವಾ ಧೃಡೀಕರಣ ಪತ್ರ, ಸಂಘದಜಿಲ್ಲಾ/ ತಾಲ್ಲೂಕು / ಯೋಜನಾ ಶಾಖೆ ಅಧ್ಯಕ್ಷರ ಸಹಿ, ಮೊಹರಿನೊಂದಿಗೆ ಪಡೆದಧೃಡೀಕೃತ ಪತ್ರಅಪ್ ಲೋಡ್ ಮಾಡಬೇಕು.ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ನೊಂದಾಯಿತ ಇ-ಮೇಲ್ ಗೆ ಸ್ವೀಕೃತಿ ರವಾನೆಯಾಗಲಿದೆಎಂದು ತಿಳಿಸಿದ್ದಾರೆ. ಜುಲೈ 15 ರ ಒಳಗಾಗಿ https://bit.ly/ksgeaprathibapuraskara2022

2022ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅರುಣ ಹುಡೇದಗೌಡ್ರ-9845787286, ರಮೇಶ ಹರಿಜನ-9945394961 ಇವರನ್ನು ಸಂಪರ್ಕಸಬಹುದು ಎಂದು ಪ್ರಕಟಣೆಗೆ ಕೋರಿದೆ 

ಸುದ್ದಿ ಓದಿ