ಶಿಗ್ಗಾವ್

ಅಜ್ಞಾನದಿಂದ ಬೆಳಕಿನ ಕಡೆಗೆ ಸಾಗಿ: ವರುಣಗೌಡ

ಅಜ್ಞಾನದಿಂದ ಬೆಳಕಿನ ಕಡೆಗೆ ಸಾಗಿ: ವರುಣಗೌಡ

ಲೋಕದರ್ಶನ ವರದಿ 

ಶಿಗ್ಗಾವಿ 24: ಅಸತ್ಯದಿಂದ ಸತ್ಯದ ಕಡೆಗೆ ಅಲ್ಲದೇ ಅಜ್ಞಾನದಿಂದ ಬೆಳಕಿನ ಕಡೆಗೆ ಸಾಗಿ  ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸೋಣ ಎಂದು ರೈತ ಸೇನಾ ಜಿಲ್ಲಾಧ್ಯಕ್ಷ ಹಾಗೂ ಕಣಾರ್ಜುನ ಚಲನಚಿತ್ರ ನಟ ವರುಣಗೌಡ ಪಾಟೀಲ ಹೇಳಿದರು. 

ತಾಲೂಕಿನ ಶ್ಯಾಡಂಬಿ ಅವರ ರೆಸಾರ್ಟನಲ್ಲಿ ದೀಪಾವಳಿ ಹಬ್ಬದ ನಿಮಿತ್ಯ ನಡೆದ ಕೆಲಸಗಾರರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ನಮ್ಮ ಮನೆಯ ಕೆಲಸಗಾರರು ಅಲ್ಲ ಇವರು ನಮ್ಮ ಪ್ರಾಣ ರಕ್ಷಕರು ಇವರನ್ನು ಗೌರವಿಸುವುದು ನಮ್ಮ ಧರ್ಮ ಎಂದರು. 

ಮುಖಂಡ ಕಿರಣಗೌಡ ಪಾಟೀಲ ಮಾತನಾಡಿ ನಮ್ಮ ಸಹೋದರ ವರುಣ ಕಳೆದರೆಡು ವರ್ಷಗಳಲ್ಲಿ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದ್ದು ನಮಗೆ ಸಂತಸ ತಂದಿದೆ ಅವರಿಗೆ ನಮ್ಮ ಸದಾ ಬೆಂಬಲವಿರುತ್ತದೆ ಅಲ್ಲದೇ ರೈತರಿಗೋಸ್ಕರ ರೈತರ ಬಗ್ಗೆ ಕಣಾರ್ಜುನ ಚಲನಚಿತ್ರ ಮಾಡುತ್ತಾ ಇದ್ದಾರೆ ಅದು ಯಶಸ್ವಿಯಾಗಲಿ ಎಂದು ಹಾರೈಸಿದರು. 

ಶಿಕ್ಷಕ ತಾರಕೇಶ ಮಠದ ಮಾತನಾಡಿ ಕಿರಣಗೌಡ್ರ ಹಾಗೂ ವರುಣಗೌಡ್ರ ಇಬ್ಬರು ಸಹಿತ ತಾಲೂಕಿನಲ್ಲಿ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಅದಕ್ಕೆ ತಾಲೂಕಿನ ಹಾಗೂ ಗ್ರಾಮಸ್ಥರ ಬೆಂಬಲವಿದೆ ಎಂದರು. 

ಈ ಸಂದರ್ಭದಲ್ಲಿ  ಕಣಾರ್ಜುನ ನಿರ್ದೇಶಕ ಬಸವರಾಜ ಕುರಗೋಡಿ, ಮುಖಂಡ ಪ್ರಕಾಶ ಹಾದಿಮನಿ, ಮುತ್ತು, ವಿಧು ಪಾಟೀಲ, ಸೇರಿದಂತೆ ಗ್ರಾಮಸ್ಥರು ಹಾಗೂ ಕೆಲಸಗಾರರು ಉಪಸ್ಥಿತರಿದ್ದರು.ಜಾ.ವಿ.ವಿ.ಸ.ಪ್ರಾದ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ