ರಾಜಸ್ಥಾನದ ವ್ಯಾಪಾರಸ್ಥರಿಗೆ ಒಂದು ತಿಂಗಳ ಗಡುವು: ಅಮರ ನಲವಡೆ
ಸಂಕೇಶ್ವರ 21: ನಿನ್ನೆ ಪುರಸಭೆ ಭವನದಲ್ಲಿ ಸಭೆ ಸೇರಿ ಪ್ರತಿದಿನದ ತರಕಾರಿ ಮಾರುಕಟ್ಟೆ ಹಾಗೂ ವಾರದ ಸಂತೆಯನ್ನು ಗಾಂಧಿಚೌಕ, ಸುಭಾಷ ರಸ್ತೆ, ಅಜಾದ ರಸ್ತೆ ಮತ್ತು ಹಣ್ಣು ಹಂಪಲುಗಳ ವ್ಯಾಪಾರವನ್ನು ಡಾ. ಅಂಬೇಡ್ಕರ್ ವೃತ್ತದ ಹತ್ತಿರ ಪುರಸಭೆಯ ವಾಣಿಜ್ಯ ಮಳಿಗೆಗಳಲ್ಲಿ ಪ್ರಾರಂಭಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
ಹಣ್ಣು ಹಂಪಲುಗಳ ಬೀದಿ ವ್ಯಾಪಾರಸ್ಥರು ಇದಕ್ಕೆ ತೀವ್ರವಾಗಿ ವಿರೋಧಿಸಿ ತಾವು ಮಾರಾಟ ಮಾಡುವ ಹಣ್ಣು ಹಂಪಲುಗಳು ಮತ್ತು ತರಕಾರಿಗಳ ಮೂಟೆಗಳನ್ನು ದುರದುಂಡೀಶ್ವರ ಕಾಂಪ್ಲೆಕ್ಸ್ ಇಲ್ಲಿಯ ಹೋಲ್ಸೇಲ್ದಲ್ಲಿ ವ್ಯಾಪಾರ ಮಾಡಿಕೊಂಡು ಗಾಂಧಿ ಚೌಕದವರೆಗೆ ಹೋಗಲು ಹಮಾಲಿ ಒತ್ತುವ ಗಾಡಿಗಳ ಮುಖಾಂತರ ಹಣ ದುಬಾರಿಯಾಗುವುದು. ಮತ್ತು ಇಲ್ಲಿಂದ ಸ್ಥಳಾಂತರ ಮಾಡಿ ವ್ಯಾಪಾರವಾಗದೇ ಇದ್ದಲ್ಲಿ ಸಣ್ಣ ಬೀದಿ ವ್ಯಾಪಾರಸ್ಥರಿಗೆ ತುಂಬಾ ನಷ್ಟವಾಗುತ್ತದೆ. ತರಕಾರಿ ಕಾಯಿಪಲ್ಲೆ ಹಾಗೆಯೇ ಇಟ್ಟರೆ ನಾಶವಾಗುತ್ತವೆ ಎಂದು ಪುರಭವನದಲ್ಲಿ ಸಭೆಯಲ್ಲಿದ್ದ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಪುರಸಭೆಯ ಸದಸ್ಯರಿಗೆ ತಿಳಿ ಹೇಳಿದರು.
ನಗರದಲ್ಲಿರುವ ಗಾಂಧಿಚೌಕ, ಸುಭಾಷ ರಸ್ತೆ, ಅಜಾದ ರಸ್ತೆಗಳಲ್ಲಿ ಅಂಗಡಿಗಳು ಇದ್ದು ವ್ಯಾಪಾರಸ್ಥರು ವ್ಯಾಪಾರವನ್ನು ಮಾಡುತ್ತಿದ್ದಾರೆ ಹಾಗೂ ಪುರಸಭೆಯ ವಾಣಿಜ್ಯ ತೆರಿಗೆಗಳನ್ನು ಕಟ್ಟುತ್ತಿದ್ದಾರೆ. ಆದರೆ ಬೀದಿ ವ್ಯಾಪಾರಸ್ಥರು ವಾಣಿಜ್ಯ ತೆರಿಗೆಗಳನ್ನು ಕಟ್ಟುವುದಿಲ್ಲ ಈ ವಿಷಯದಲ್ಲಿ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿ ಮಾಜಿ ನಗರಾಧ್ಯಕ್ಷ ಹಾಗೂ ಹಾಲಿ ಪುರಸಭೆಯ ಸದಸ್ಯ ಅಮರ ಮಧುಕರ ನಲವಡೆ, ಡಾ. ಜಯಪ್ರಕಾಶ ಕರಜಗಿ ಇವರು ಮಾತನಾಡುತ್ತ ಎರಡು ವ್ಯಾಪಾರಸ್ಥರಿಗೆ ಸಮಜಾಯಿಷಿ ತಿಳಿಸಿದರು.
ನಿಮ್ಮ ಅಭಿಪ್ರಾಯಗಳನ್ನು ನಾವು ಎಲ್ಲ ಸದಸ್ಯರು ಆಲಿಸಿದ್ದೇವೆ. ನಂತರ ಇದಕ್ಕೊಂದು ಬೇನಗೇ ಸೂಕ್ತವಾದ ಕ್ರಮವನ್ನು ಕೈಗೊಳ್ಳುತ್ತೇವೆಂದು ಪುರಸಭೆಯ ಮಾಜಿ ನಗರಾಧ್ಯಕ್ಷ ಅಮರ ನಲವಡೆ ಇವರು ಭರವಸೆ ನೀಡಿದರು.
ರಾಜಸ್ಥಾನದಿಂದ ವಲಸೆ ಬಂದ ವ್ಯಾಪಾರಸ್ಥರಿಗೆ ಒಂದು ತಿಂಗಳೊಳಗಾಗಿ ತಾವು ತಮ್ಮ ನಿರ್ಣಯಗಳನ್ನು ಹೇಳಬೇಕು ಮತ್ತು ನಗರದ ವ್ಯಾಪಾರಸ್ಥರಿಗೆ ಸಾಕಷ್ಟು ಹಾನಿಯಾಗುತ್ತಿದ್ದು, ಇದನ್ನು ತಾವು ಗಮನದಲ್ಲಿಟ್ಟುಕೊಂಡು ಪರಸ್ಪರ ಸಹಕಾರ ನೀಡಬೇಕೆಂದು ವಲಸೆ ಬಂದ ವ್ಯಾಪಾರಸ್ಥರಿಗೆ ಅಮರ ನಲವಡೆ ಇವರು ತಾವು ಹೇಳುತ್ತಿರುವುದು ಬೆದರಿಕೆ ಅಲ್ಲ. ಭಾರತದ ಪೌರತ್ವವನ್ನು ಪಡೆದುಕೊಂಡಿರುವ ತಾವು ದೇಶದಲ್ಲಿ ಎಲ್ಲಿ ಬೇಕಾದರೂ ವ್ಯಾಪಾರ ಮಾಡಬಹುದು ಎಂದು ಸಭೆಯಲ್ಲಿ ಹೇಳಿದರು. ತಾವು ಹಾಗೂ ನಮ್ಮ ಸಂಕೇಶ್ವರದ ವ್ಯಾಪಾರಸ್ಥರು ಅನ್ಯೋನ್ಯವಾಗಿ ಬಂಧುತ್ವವನ್ನು ಬೆಳೆಸಿಕೊಂಡು ಹೋಗಬೇಕೆಂದು ಹೇಳಿದರು.
ಸಭೆಯಲ್ಲಿ ಹಿರಿಯ ಸದಸ್ಯ ಗಜಾನನ ಕ್ವಳ್ಳಿ, ಅಜಿತ ಕರಜಗಿ, ಚಿದಾನಂದ ಕರದನ್ನವರ, ನಂದು ಮುಡಶಿ, ವ್ಯಾಪಾರಿ ಅಸೋಷಿಯೇಶನ್ದ ಉಪಾಧ್ಯಕ್ಷ ಸುಭಾಷ ಕಾಸಾರಕರ, ಪಿಂಟು ಕೋಳಿ, ಅಭಿ ಕುಲಕರ್ಣಿ, ಮತ್ತು ನ್ಯಾಯವಾದಿ ಪ್ರವೀಣ ನೇಸರಿ (ಪುಟ್ಟು), ಮಾಜಿ ನಗರಾಧ್ಯಕ್ಷ ಬಂಡು ಹತನೂರಿ, ಕುಮಾರ ಕಬ್ಬೂರಿ, ವಿನೋದ ನಾಯಿಕ, ಪ್ರಮೋದ ಹೊಸಮನಿ, ದೀಲೀಪ ಹೊಸಮನಿ, ಪ್ರಕಾಶ ಈಟೇಕರ, ಎಂ.ಬಿ.ಘಸ್ತಿ, ಪುರಸಭೆಯ ಕಿರಿಯ ಅಬಿಯಂತ ಆರ್.ಬಿ.ಗಡಾದ ಮೊದಲಾದವರು ಹಾಗೂ ಎಲ್ಲ ವ್ಯಾಪಾರಸ್ಥರು ಉಪಸ್ಥಿತರಿದ್ದರು. ಆರ್.ಬಿ.ಗಡಾದ ಸ್ವಾಗತಿಸಿದರು.