ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾರ್ಯಗಾರ
ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾರ್ಯಗಾರ
ಲೋಕದರ್ಶನ ವರದಿ
ಬಳ್ಳಾರಿ 14: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಇಂಜನೀರಿಂಗ್ ವಿಭಾಗದಲ್ಲಿ ಫ್ಲೋ ಮೆಜರ್ಮೆಂಟ್ಸ್ –ಎಡ್ವಾಂಸ್ ಮಾಡ್ಯೂಲ್ ಟ್ರಯಿನಿಂಗ್ ಆನ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್ಮೆಂಟ್” ಒಂದು ದಿನದ ಕಾರ್ಯಗಾರ ಹಮ್ಮಿಕೊಂಡರು.
ಉಪಪ್ರಾಂಶುಪಾಲ ಡಾ. ಸವಿತಾ ಸೊನೋಳಿ ಮಾತನಾಡುತ್ತಾ ಇಲ್ಲಿ ಭಾಗವಹಿಸುತ್ತಿರುವ ಜಿಲ್ಲಾಪಂಚಾಯತ್-ಬಳ್ಳಾರಿ ವತಿಯಿಂದ ಇಂಜನೀರ್ಗಳು, ಅಧಿಕಾರಿ ವೃಂದದವರು ದಿನನಿತ್ಯವು ಸಮಾಜ ಹಿತ ಕಾರ್ಯಗಳÀಲ್ಲಿ ತೊಡಗಿರುತ್ತಾರೆ. ಅವರಿಗೆ ನಮ್ಮ ಮಹಾವಿದ್ಯಾಲಯದಲ್ಲಿನ ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ನೂತನ ತಾಂತ್ರಿಕ ವಿಧಾನಗಳು,ಪದ್ದತಿಗಳು ಉಪಯುಕ್ತವಾಗಬೇಕು, ಹಾಗು ಪ್ರಜೆಗಳಿಗೆ ಉತ್ತಮ ಸೌಲಭ್ಯಗಳು ಇವರಿಂದ ದೊರೆಯಲಿ ಎಂದು ಬಯಸಿದರು.
ಡಾ. ಕೋರಿ ನಾಗರಾಜ್ ಇವರು ಭಾಗವಹಿಸಿದ ವೃಂದದವರಿಗೆ ಕಾರ್ಯಗಾರದ ಬಗ್ಗೆ ವಿವರಿಸುತ್ತ. ಶಿಕ್ಷಣವೆಂದರೆ ಮೊದಲೇ ವiನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು. ನಿಮ್ಮಲ್ಲಿ ಶ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ” ಎಂದು
ಕೋರಿದರು.
ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲ ಡಾ. ಸವಿತಾ ಸೊನೋಳಿ, ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ಮುಖ್ಯಸ್ಥ ಡಾ. ಕೋರಿ ನಾಗರಾಜ್, ಡಾ. ಶಿವಕುಮಾರಮೋದಿ, ಡಾ. ಕೊಟ್ರೇಷ್ ಸರದಾರ್, ಪ್ರೋ. ಎಂ.ಆರ್.ಇಂದುಧರ್, ಪ್ರೋ.ಸೋಮನಾಥ್ ಸ್ವಾಮಿ, ಪ್ರೋ.ಕೆ.ಜಿ.ಮಹೇಶ್, ಪ್ರೋ. ನವೀನ್, ಪ್ರೋ.ವಿರೂಪಾಕ್ಷಗೌಡರು, ಹಾಗೂ ಜಿಲ್ಲಾಪಂಚಾಯತ್-ಬಳ್ಳಾರಿವತಿಯಿಂದ ಇಂಜನೀರ್ಗಳು, ಅಧಿಕಾರಿ ವೃಂದದವರು ಜಾನಕಿರಾಮ್ ಪ್ರಾಜೆಕ್ಟ್ ಡೈರೆಕ್ಟರ್, ಇವರ ತಂಡದಲ್ಲಿ -ಶ್ರೀಯಮನೂರಪ್ಪ, ಆರ್.ಪ್ರಭು, ಐಶ್ವರ್ಯ, ಸಂಧ್ಯಾ ಇನ್ನಿತರರು ಭಾಗವಹಿಸಿದ್ದರು. ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ಡಾ. ಶಿವಕುಮಾರಮೋದಿ, ಡಾ. ಕೊಟ್ರೇಷ್ ಸರದಾರ್, ಸ್ವಾಗತಿಸಿದರು, ಹಾಗೂ ನಿರೂಪಣೆ ಮಾಡಿದರು.