ಬಳ್ಳಾರಿ

ಮಹಿಳೆಯರು ಸ್ವಯಂ ಪ್ರೇರಿತವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ: ಕಪ್ಪಗಲ್ಲು

ಮಹಿಳೆಯರು ಸ್ವಯಂ ಪ್ರೇರಿತವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ: ಕಪ್ಪಗಲ್ಲು

ಬಳ್ಳಾರಿ 25: ಮಹಿಳೆಯರು ಸ್ವಯಂ ಪ್ರೇರಿತವಾಗಿ ಸಾಮಾಜಿಕ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಹೈದರಾಬಾದ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರವಾದ ನಂತರ ಈ ಭಾಗವು  ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ  ತುಂಬಾ ಮುಂದುವರೆದಿದೆ ಹಾಗಾಗಿ ನಾವು ಯಾವುದೆ ಕಲಿಕೆಯನ್ನು ಪರಿಶ್ರಮದಿಂದ ಕಾರ್ಯನಿರ್ವಸಿದರೆ ಅಸಾಧ್ಯವಾದುದು ಯಾವದು ಇಲ್ಲಾ, ಈ ರಾಜ್ಯದ ಮುಖ್ಯಮಂತ್ರಿಯವರು ಕಲ್ಯಾಣ ಕರ್ನಾಟಕ ಎಂದೂ ನಾಮಕರಣ ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲೆಯ ಆಡಳಿತ ಮಂಡಳಿ ಸದಸ್ಯ ಪ್ರಭುದೇವ ಕಪ್ಪಗಲ್ಲು ಹೇಳಿದರು.

ಅವರು ಹೊಲಿಗೆ ಯಂತ್ರವನ್ನು ಬಟ್ಟೆ ಹೊಲಿಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಮಾ. 25ರಂದು ಬಳ್ಳಾರಿಯಲ್ಲಿ ನಡೆದ ಬಳ್ಳಾರಿ ನಗರ ಮತ್ತು ಗ್ರಾಮಾಂತರ ತಾಲ್ಲೂಕಿನ ಪ್ರಗತಿ ಮತ್ತು ಹೊಲಿಗೆ ಕೇಂದ್ರದ ಒಂದು ದಿನದ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ರೂರಲ್ ಫಾರ್ ಡೆವಲಪಮೆಂಟ್ ಸಂಸ್ಥೆಯ ಅಧ್ಯಕ್ಷ ಬಿ.ಡಿ. ಗೌಡ ಹಾಗೂ ಜೋಳದರಾಶಿ ಪಂಪನಗೌಡ ಸರ್, ಕೆ.ಆರ್.ಮಲ್ಲೆಶ ಕುಮಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಬಳ್ಳಾರಿ ನಗರ ಜಿಲ್ಲಾ ಸಂಚಾಲಕ ಪ್ರವೀಣ ನಾಯಕ ಮತ್ತು ಗ್ರಾಮಾಂತರ ಜಿಲ್ಲಾ ಸಂಚಾಲಕ ಮಂಜುನಾಥ ಸ್ವಾಮಿ, ಸಿರಗುಪ್ಪ ವೀರೆಶ, ಸಂಡೂರು ಜಿಲ್ಲಾ ಸಂಚಾಲಕ ಸಂಜೀವ ಅವರು ಉಪಸ್ಥಿತಿರಿದ್ದರು, ಶ್ರೀದೇವಿ ಅವರು ನಿರೂಪಿಸಿದರು. ಪ್ರವೀಣ ನಾಯಕ ಸ್ವಾಗತ & ಪ್ರಾಸ್ತವಿಕ ಮಾತನಾಡಿದರು, ವಿರೇಶ ಕಗ್ಗ¯ ವಂದಿಸಿದರು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಪ್ರತಿನಿಧಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಸುದ್ದಿ ಓದಿ