ಬಳ್ಳಾರಿ

`ಆಯ್ಕೆ ಆಧಾರಿತ ಗುಣಾಂಕ ಪದ್ಧತಿ’ತರಬೇತಿ ಕಾರ್ಯಕ್ರಮ

`ಆಯ್ಕೆ ಆಧಾರಿತ ಗುಣಾಂಕ ಪದ್ಧತಿ’ತರಬೇತಿ ಕಾರ್ಯಕ್ರಮ

ಹಂಪಿ 04: ಕನ್ನಡ ವಿಶ್ವವಿದ್ಯಾಲಯ 2020-21ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ `ಆಯ್ಕೆ ಆಧಾರಿತ ಗುಣಾಂಕ ಪದ್ಧತಿ’ (ಸಿಬಿಸಿಎಸ್) ತರಬೇತಿ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯುಎಸಿ) ದಿಂದ ನಡೆಸಲಾಯಿತು. 

ಸಂಪನ್ಮೂಲ ವಿದ್ವಾಂಸರಾಗಿ ಭಾಗವಹಿಸಿದ ಮಹಿಳಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಈ.ಯರ್ರಿಸ್ವಾಮಿ ವಿದ್ಯಾರ್ಥಿಗಳಿಗೆ ಸಿಬಿಸಿಎಸ್ ಪಠ್ಯಕ್ರಮ ಹಾಗೂ ಗ್ರೇಡಿಂಗ್ ಸಿಸ್ಟಂ ಬಗ್ಗೆ ಉಪನ್ಯಾಸ ನೀಡಿದರು. 

ವಿದ್ಯಾರ್ಥಿಗಳಿಗೆ ಸಿಬಿಸಿಎಸ್‍ಇ ಕುರಿತು ಮನವರಿಕೆ ಮಾಡಿಕೊಡಲಾಯಿತು. ವಿದ್ಯಾರ್ಥಿಗಳು ಪ್ರಶ್ನೆ-ಉತ್ತರಗಳ ವಿಧಾನದಲ್ಲಿ ಮಾಹಿತಿ ಪಡೆದುಕೊಂಡರು. ತರಬೇತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮಹಿಳಾ ಅಧ್ಯಯನ, ದೃಶ್ಯಕಲೆ, ಸಂಗೀತ ಮತ್ತು ಯೋಗ ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಐಕ್ಯುಎಸಿ ನಿರ್ದೇಶಕರಾದ ಡಾ.ಎ.ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಹಾಯಕ ನಿರ್ದೇಶಕರಾದ ಡಿ. ಪ್ರಭಾ ಅವರ ವಂದಿಸಿದರು.

ಸುದ್ದಿ ಓದಿ