ಮುಂದಗೋಡ

ಬಿದಿರಿನ ಕರಕುಶಲತೆಯ ಒಂದು ತಿಂಗಳ ವಿನ್ಯಾಸ ಅಭಿವೃದ್ಧಿ ಕಾರ್ಯಾಗಾರ

ಬಿದಿರಿನ ಕರಕುಶಲತೆಯ ಒಂದು ತಿಂಗಳ ವಿನ್ಯಾಸ ಅಭಿವೃದ್ಧಿ ಕಾರ್ಯಾಗಾರ

ಮುಂಡಗೋಡ 02:  ಎಸ್‌.ಟಿ ವರ್ಗದ ಕುಶಲಕರ್ಮಿಗಳಿಗೆ ಎಸ್ಡಿಹೆಚ್ ಎಸ್‌.-ಎನ್‌ಐಐಡಿಪಿ ಯೋಜನೆಯಡಿಯಲ್ಲಿ ಸಂಘಟಿತ ಪ್ರಯತ್ನ ಕರಕುಶಲ ಸೇವಾ ಕೇಂದ್ರ ಅಭಿವೃದ್ಧಿ ಆಯುಕ್ತರ ಕಛೇರಿ(ಕರಕುಶಲ)ಜವಳಿ ಸಚಿವಾಲಯ,ಭಾರತ ಸರ್ಕಾರ,ಮಂಗಳೂರು(ಕರ್ನಾಟಕ) ಹಾಗೂ ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಎಸ್‌.ಟಿ ವರ್ಗದ ಕುಶಲಕರ್ಮಿಗಳಿಗೆ ದಿನಾಂಕ; 01ರಿಂದ 24ರವರೆಗೆ ಒಂದು ತಿಂಗಳ ತರಭೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.  

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದಂತ ಶ್ರೀ ವೆಂಕಟೇಶ್ ಸಹಾಯಕ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಕಾರವಾರ ಜಿಲ್ಲೆ, ಇವರು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟನೆಯನ್ನು ನೇರವೇರಿಸಿದರು ತಾವೆಲ್ಲರೂ ತರಭೇತಿಯನ್ನು ಸಕಾಲದಲ್ಲಿ ತೆಗೆದುಕೊಂಡು ವಸ್ತುಪ್ರದರ್ಶನ ಇರುವಾಗ ತಾವೂಗಳು ಮಾಡಿದ ವಸ್ತುಗಳನ್ನು ವಸ್ತುಪ್ರದರ್ಶನಕ್ಕೆ ತೆಗೆದುಕೊಂಡು ಹೋಗಬೇಕು ಅವಕಾಶಗಳು ಸಿಕ್ಕಾಗ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.  

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರಶಾಂತ ಹಳ್ಳೂರ ಸಹಾಯಕ ವ್ಯವಸ್ಥಾಪಕರು ಎಸ್‌.ಬಿ.ಐಮುಂಡಗೋಡ, ಶ್ರೀಗಣೇಶಪಿ, ಕೃಷಿ ಸಹಾಯಕರು ಎಸ್‌.ಬಿ.ಐ ಶಾಖೆ ಮುಂಡಗೋಡ ಇವರು ಆಗಮಿಸಿದ್ದರು. ಬ್ಯಾಂಕ ಸಾಲ, ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನಿಡಿದರು ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಆಡಿಯಲ್ಲಿ ಇರುವ ವಿವಿಧ ಸಬ್ಸಿಡಿಸಾಲ, ಮುದ್ರಾಯೋಜನೆ, ಬ್ಯಾಂಕನಿಂದ ಇರುವ ಬೀದಿಬದಿ ವ್ಯಾಪಾರಿಗಳಿಗೆ ಸ್ವ-ನಿಧಿ ಸಾಲಯೋಜನೆ ವಾಟ್ಸಾಪ್ ಮೂಲಕ ಬ್ಯಾಂಕ ಬ್ಯಾಲೆನ್ಸ ಚೆಕ್ ಮಾಡುವದು ವ್ಯಾಪಾರಿಗಳು ಸ್ಕ್ಯಾನರ್ ಅಳವಡಿಸಿಕೊಳ್ಳುವದು. ಇವುಗಳ ಕುರಿತು ಮಾಹಿತಿಯನ್ನು ನಿಡಿದರು.  ಅತಿಥಿಗಳಾಗಿ ಆಗಮಿಸಿದಂತ ಕುಮಾರ ನಾಯ್ಕ ಸಿ,ಎ.ಓ ಪಟ್ಟಣ ಪಂಚಾಯತ್ ಮುಂಡಗೋಡ ಇವರು ಎಸ್,ಸಿ ಎಸ್‌.ಟಿ ಸಮುದಾಯದವರಿಗೆ ಇರುವ ಸಾಲ ಸೌಲಭ್ಯಗಳು, ಬೀದಿಬದಿ ವ್ಯಾಪಾರಿಗಳಿಗೆ ಪ್ರದಾನ ಮಂತ್ರಿ ಸ್ವ ನಿಧಿ ಯೋಜನೆಯಲ್ಲಿ ಹಂತ ಹಂತವಾಗಿ ಇರುವ ಸಹಾಯಧನದ ಬಗ್ಗೆ ತಿಳಿಸಿದರು.ತಾಲೂಕ ಮಟ್ಟ ಜಿಲ್ಲಾಮಟ್ಟ ರಾಜ್ಯಮಟ್ಟದಲ್ಲಿ ವಿವಿಧ ವಸ್ತುಪ್ರದರ್ಶನದಲ್ಲಿ ತಾವೂಮಾಡಿದ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ತೆಗೆದುಕೊಂಡು ಹೊಗುವುದು ಹಾಗೂ ಕರಕುಶಲತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ವಂದನೀಯ ಫಾ.ಅನಿಲ್ ಡಿಸೋಜಾರವರು ತರಬೇತಿಯ ಅನೂಕುಲತೆಯನ್ನು ಕುಶಲಕರ್ಮಿಕಾರ್ಡ ಹೊಸಜ್ಞಾನ ಪಡೆದುಕೊಳ್ಳಬೇಕು. ತರಭೇತಿ ಪಡೆಯಲು ಯಾವುದೆ ಸಹಾಯ ಸಹಕಾರವನ್ನು ಲೊಯೋಲ ವಿಕಾಸ ಕೇಂದ್ರ ಸದಾ ನಿಮಗೆ ನೀಡುತ್ತದೆ. ನಿವುಮಾಡುವ ಕೆಲಸದಲ್ಲಿ ನಿಮ್ಮಮೌಲ್ಯವನ್ನು ಹೆಚ್ಚಿಸಿಕೊಳ್ಳಿ,ನೀವು ನೇರ ವಸ್ತುಗಳನ್ನು ಮಾರಾಟ ಮಾಡಬಹುದು ಹೊಸಹೊಸ ವಿನ್ಯಾಸವನ್ನು ಮಾಡುವದನ್ನು ಕಲಿಯಬೇಕು ಎಂದರು.  

ಮಳಗಿ ಮೇದಾರ ಸಮುದಾಯದ ಮುಖಂಡರಾದ ಹನುಂತಪ್ಪ ಇಡಗೋಡ ಇವರು ವೇದಿಕೆಯಮೇಲೆ ಹಾಜರಿದ್ದರು ತಾವೂ ಮಾಡುತ್ತಿರುವ ಮೂಲ ಕಸಬುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ನಮ್ಮಲ್ಲಿ ಕಲೆ ಇದೆ ಅವುಗಳನ್ನು ಪ್ರಸ್ತುತ ಪಡಿಸಲು ಮಾಹಿತಿ ಇಲ್ಲ ತರಭೇತಿ ಪಡೆದುಕೊಂಡರೆ ನಮ್ಮಲ್ಲಿ ಹೊಸ ಹೊಸ ವಿಚಾರಗಳು ತಿಳಿಯುತ್ತವೆ ನಾವೆಲ್ಲ ಸಮಯವನ್ನು ಮರುಪಯೋಗ ಪಡಿಸಿಕೊಳ್ಳದೆ ಕರಕುಶಲತೆಯಲ್ಲಿ ವಿನ್ಯಾಸಗಳನ್ನು ತಿಳಿದುಕೊಳ್ಳಬೇಕು ಎಂದು ಎಲ್ಲರಿಗೂ ತಿಳಿಸಿದರು. 


ಸುದ್ದಿ ಓದಿ