27ರಂದು ಚನ್ನಮ್ಮ ಜಯಂತಿ-ವಿಜಯೋತ್ಸವ2ಎ ಮೀಸಲಾತಿ ಹಕ್ಕೋತ್ತಾಯ ಸಮಾರಂಭ
ತಾಳಿಕೋಟಿ 24: ಕನ್ನಡ ನಾಡಿನ ವೀರಮಾತೆ ಕಿತ್ತೂರ ರಾಣಿ ಚನ್ನಮ್ಮ ಅವರ 244ನೇ ಜಯಂತಿ ಹಾಗೂ 199ನೇ ವಿಜಯೋತ್ಸವ ಮತ್ತು 2ಎ ಮೀಸಲಾತಿಗಾಗಿ ಹಕ್ಕೋತ್ತಾಯ ಸಮಾರಂಭ ಅ.27ರಂದು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಘಟಕದ ವತಿಯಿಂದ ಜರುಗಲಿದೆ.
ಅಂದು ಬಳಗಾನೂರ ಗ್ರಾಮದ ನೀಲಗಂಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 3 ಘಂಟೆಗೆ ನಡೆಯಲಿರುವ ಸಮಾರಂಭದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಲಿದ್ದು ಬಳಗಾನೂರ ಗ್ರಾಮದ ಶಿವಶರಣೆ ಮಂಜುಳಾತಾಯಿ ಉಪಸ್ಥಿತರಿರಲಿದ್ದಾರೆ. ಗ್ರಾಮದ ಗಣ್ಯರಾದ ನಿಂಗನಗೌಡ ಪಾಟೀಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.
ವಿಜಯಪೂರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಸಮಾರಂಭದ ಉದ್ಘಾಟನೆಯನ್ನು ಮಾಡಲಿದ್ದಾರೆ. ರಾಷ್ಟ್ರೀಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ವಿನಯಕುಲಕರ್ಣಿ ಜ್ಯೋತಿ ಬೆಳಗಿಸುವರು, ಬೆಳಗಾವಿ ಮಾಜಿ ಸಚಿವ ಎ. ಬಿ. ಪಾಟೀಲ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಲಿದ್ದು ಉಪನ್ಯಾಸಕ ಡಾ. ಪ್ರಕಾಶ ನರಗುಂದ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ, ಮಾಜಿ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಜಿ ಜಿ.ಪಂ ಉಪಾಧ್ಯಕ್ಷ ಎಮ್. ಎಸ್. ಪಾಟೀಲ(ನಾಲತವಾಡ), ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ, ಕಾಂಗ್ರೇಸ್ ಮುಖಂಡ ಅಶೋಕ ಮನಗೂಳಿ, ಬಿ.ಡಿ.ಸಿ.ಸಿ. ಬ್ಯಾಂಕ ನಿದರ್ೇಶಕಿ ಸಂಯುಕ್ತಾ ಪಾಟೀಲ, ಆಗಮಿಸಲಿದ್ದಾರೆ.
ಅತಿಥಿಗಳಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಬಿಜೆಪಿ ಮುಖಂಡ ಶಂಕರಗೌಡ ಹಿರೇಗೌಡರ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ ದೇಶಮುಖ, ಪಂಚಮಸಾಲಿ ಸಮಾಜ ತಾಲೂಕಾ ಅಧ್ಯಕ್ಷ ಅಮರೇಶ ಗೂಳಿ, ಡಾ. ವಿ. ಎಸ್. ಕಾರ್ಚಿ , ಡಾ. ಸಿ. ಎಸ್. ಸೋಲಾಪೂರ, ಶ್ರೀಶೈಲ ದೊಡಮನಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಡಾ. ಶ್ರೀಶೈಲ ಹುಕ್ಕೇರಿ, ಪ್ರಭು ಬಿಳೇಭಾವಿ, ತಾ.ಪಂ ಮಾಜಿ ಸದಸ್ಯ ಗುರು ಕೊಪ್ಪದ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ