ಲೇಖನಗಳು

ಅಯ್ಯೋ ದೇವರೇ! ಇದೆಂಥಾ ಪರಿಸ್ಥಿತಿ ಬಂತು ಇವರಿಗೆ!

ಅಯ್ಯೋ ದೇವರೇ! ಇದೆಂಥಾ ಪರಿಸ್ಥಿತಿ ಬಂತು ಇವರಿಗೆ!

ಮದವೇರಿದ ಆನೆಗಳ ಹಿಂಡು ಬಾಳೆ ಹಣ್ಣಿನ ತೋಟಕ್ಕೆ ನುಗ್ಗಿದಾಗ ಆ ತೋಟದ ಸ್ಥಿತಿ ಹೇಗೆಲ್ಲ ಆಗಬಲ್ಲದೊ, ಸಧ್ಯ ಆಫ್ಘಾನಿಸ್ತಾನದ ಜನರ ಪರಿಸ್ಥಿತಿ ಕೂಡಾ ಹಾಗೆಯೆ ಆಗಿಬಿಟ್ಟಿದೆ. ಇನ್ನೆನು ಕೆಲವೆ ತಿಂಗಳುಗಳಲ್ಲಿ ಅಮೇರಿಕಾದ ಸೇನೆ ಅಲ್ಲಿಂದ ಕಾಲ್ಕಿಳುವುದು ಪಕ್ಕಾ ಅನ್ನೂ ಮಾಹಿತಿ ಬಂದ ಬೆನ್ನಲ್ಲೇ, ಉಗ್ರರು ಅಫ್ಘಾನಿಸ್ತಾನದ ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತ ಬಂದಿದ್ದರು. ಯಾವಾಗ ಅಮೇರಿಕ ಸೇನೆ ಅಲ್ಲಿಂದ ಸಂಪೂರ್ಣ ವಾಪಾಸ್ ಹೋಯಿತೊ, ಹೊದ   ಏಳೇ ಏಳು ದಿನಗಳಲ್ಲಿ ತಾಲಿಬಾನಿನ ಕಿರಾತಕ ಬಂಡುಕೋರರು ರಾಜಧಾನಿ ಕಾಬುಲ್ ಒಳಗಡೆ ನುಗ್ಗಿದರು, ನೋಡು ನೋಡುತ್ತಿದ್ದಂತೆ ಸಂಪೂರ್ಣ ರಾಜಧಾನಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಶತ್ರುಗಳನ್ನು ಹಿಮ್ಮೆಟ್ಟಿಸೊಕೆ ಸಾಧ್ಯವಾಗದೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಗಣಿಯವರಂತೂ ಈ ಮೊದಲೇ ದೇಶದಿಂದ ಪಲಾಯನಗೈದರು. ದೇಶಾದ್ಯಂತ ಅರಾಜಕತೆ ಸೃಷ್ಟಿಯಾಗಿ, ಎಲ್ಲೆಡೆ ಪ್ರಕ್ಷುಬ್ಧ ಸ್ಥಿತಿ ನಿಮರ್ಾಣವಾಗಿಬಿಟ್ಟಿತ್ತು. ರಸ್ತೆಯ ತುಂಬೆಲ್ಲ ಗನ್ನು ಹಿಡಿದು ಅಬ್ಬರಿಸುತ್ತಿರುವ ತಾಲಿಬಾನ್ ಅಸುರರ ಮಧ್ಯೆ ಜೀವ ಉಳಿದರೆ ಸಾಕಪ್ಪ ಅಂತ ಅಮೇರಿಕನ್ ಸೇನೆಗೆ ಮೊರೆ ಇಡುತ್ತಿರುವ ಅಮಾಯಕ ಪ್ರಜೆಗಳ ಸ್ಥಿತಿಯಂತೂ ಚಿಂತಾಜನಕವಾಗಿತ್ತು. ಅಬ್ಬಬ್ಬಾ..! ಅಲ್ಲಿನ ದಯನೀಯ ಸ್ಥಿತಿ ಯಾವ ಶತ್ರುವಿಗೂ ಬೇಡ. ಈ ನರರಾಕ್ಷಸರ ಅಟ್ಟಹಾಸದ ಕ್ರೌರ್ಯದಿಂದ ಕೆಲವರು ಕಂಗಾಲಾಗಿ ಆತಂಕಕ್ಕೊಳಗಾದರು, ತಾಲಿಬಾನಿಗಳ ಮನಸ್ಥಿತಿಯನ್ನು ಚನ್ನಾಗಿ ಅರಿತ ಮತ್ತೆ ಹಲವರು ಹೇಗಾದರೂ ಸರಿ, ದೇಶದಿಂದ ಹೊರ ಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪದೊಂದಿಗೆ ಉಟ್ಟ ಬಟ್ಟೆಯಮೇಲೆ ಹೊರನಡೆದರು, ಪರಿಣಾಮವಾಗಿ ಕಾಬುಲ್ ವಿಮಾನ ನಿಲ್ದಾಣ ಕಳೆದ ಸೋಮವಾರ ಅಕ್ಷರಶಃ ಸಂತೆಯಂತಾಗಿಬಿಟ್ಟಿತ್ತು. ಉಹಿಸಲಿಕ್ಕೂ ಅಸಾಧ್ಯದ ಸ್ಥಿತಿ,  ನಮ್ಮ ಹಳ್ಳಿಗಳಲ್ಲಿ ಜನರು ಬಸ್ಸು, ಟ್ಯಾಕ್ಸಿಗಳಿಗೆ ಜೋತು ಬಿದ್ದು ಹೇಗೆ ಪ್ರಯಾಣಿಸುತ್ತಾರೋ, ಹಾಗೇ ಜನಗಳು ವಿಮಾನಗಳನ್ನೇರಿ ಜೋತುಬಿದ್ದಿದ್ದರು, ಸಾಲದಕ್ಕೆ ಅದರ ರೆಕ್ಕೆಗಳ ಮೇಲೂ ಕುಳಿತಿದ್ದರು, ಆ ದೃಶ್ಯಗಳನ್ನು ನೋಡಿದರೆ, ಅಲ್ಲಿನ ಭಯಾನಕ ಸ್ಥಿತಿ ಎಂತವರಿಗೂ ಸರಳವಾಗಿ ಅರ್ಥವಾಗಿಬಿಡುತ್ತದೆ. 

ಅಫ್ಘಾನ್ ಜನರ ಸದ್ಯದ ಸ್ಥಿತಿಯನ್ನು ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ಏಳೆಂಟು ದಿನಗಳಿಂದ ಮನೆಯಿಂದ ಹೊರ ಬಾರದ ಸ್ಥಿತಿ, ಅವರಿಗೆ ತಿನ್ನಲು ಅನ್ನವಿಲ್ಲ, ಕುಡಿಯೊದಕ್ಕೆ ನೀರಿಲ್ಲ, ಕಂಡ ಕಂಡಲ್ಲೆಲ್ಲ ಬರಿ ಬಂದೂಕಿನದ್ದೆ ಶಬ್ದ. ಉಗ್ರರ ರಣ ಅಟ್ಟಹಾಸಕ್ಕೆ ಗಲ್ಲಿ, ಬಿದಿಗಳಲ್ಲಿ ಹೆಣವಾಗಿ ಬಿಳುತ್ತಿರುವವರು ಒಂದೆಡೆಯಾದರೆ,  ಅವರಿಗೆ ಹೆದರಿ ಜೀವಂತ ಶವವಾಗಿರುವವರು ಇನ್ನೂ ಹಲವರು. ನರಲೋಕ ಹೇಗಿರುತ್ತದೆ ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಈಗಿನ ಅಫ್ಘಾನಿಸ್ತಾನ. ತಾಲಿಬಾನಿ ನರಕಾಸುರರು ಇದೀಗ ಸೃಷ್ಟಿಸಿರುವ ಭೂಲೋಕದ ನರಕವಿದು. ಒಂದು ಕಡೆ 'ನಾವು ಬದಲಾಗಿದ್ದೇವೆ ಅಂತ ಶಾಂತಿಯ ಹೇಳಿಕೆಯನ್ನು ಕೊಡುವುದು, ಶರಣಾಗುವಂತೆ ಸೂಚಿಸುವುದು ಆದರೆ ಶರಣಾದವರ ಮೇಲೆ ರಕ್ತದ ಓಕುಳಿಯನ್ನೇ ನಡೆಸಿದ್ದಾರೆ. ಅದೆಷ್ಟೋ ಜನ ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ, ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅಲ್ಲಿನ ಜನ ತಾಲಿಬಾನಿಗಳ ವಿರುದ್ದ ಅವರು ತೋರಿದ ಅಸಹಾಯಕತೆಯನ್ನು  ನೆನೆಸಿಕೊಂಡರೆ ಅಷ್ಟೇ ಜಿಗುಪ್ಸೆ ಆಗುತ್ತದೆ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಬದಲಿಗೆ, ಯಾರೊ ಬಂದು ನಮ್ಮನ್ನು ರಕ್ಷಿಸುತ್ತಾರೆ! ಇಡೀ ಜಗತ್ತೇ ನಮ್ಮ ಹಿಂದೆ ಬಂದು ನಿಲ್ಲುತ್ತದೆ ಅನ್ನೋ ಭ್ರಮೆಯಲ್ಲಿ ಅಫ್ಘಾನ್ ತನಗೆ ತಾನೆ ಮೋಸ ಮೋಸ ಮಾಡಿಕೊಂಡಿತು ಎನ್ನುವ ಮಾತಲ್ಲಿ ಹುರುಳಿಲ್ಲ. ಇಡೀ ಅಫ್ಘಾನ್ ಸೇನೆಯನ್ನು ಧ್ವಂಸ ಮಾಡಲು ತಾಲಿಬಾನ್ ನರರಾಕ್ಷಸರು ತೆಗೆದುಕೊಂಡಿದ್ದು ಕೇವಲ 7 ದಿನಗಳು ಮಾತ್ರ. ಬೆಲಿಯೇ ಎದ್ದು ಹೊಲ ಮೈದಂತೆ, ಅಲ್ಲಿನ ಅನೇಕ ಸೈನಿಕರು ಉಗ್ರರೊಂದಿಗೆ ಕೈಜೋಡಿಸಿ ರಿವಸ್9 ಅಟ್ಯಾಕ್ ಮಾಡಿದರೆ, ಉಗ್ರರು ಕಾಬೂಲ್ ಸಮಿಪ ಬಂದಿರೊ ಸುದ್ದಿ ತಿಳಿದ ಮತ್ತೆ ಕೆಲವು ಸೈನಿಕರು ಕೈಯಲ್ಲಿನ ಶಸ್ತ್ರಗಳನ್ನ ಅಲ್ಲೆ ಇಟ್ಟು ಹೆದರಿ ಒಡಿ ಹೋದರು. ಇದು ತಮಗೆ ತಾವೇ ಮಾಡಿಕೊಂಡ ದ್ರೋಹ ಅಲ್ಲದೆ ಮತ್ತಿನ್ನೇನು? ಅಮೇರಿಕಾದ ಶಸ್ತ್ರಾಸ್ತ್ರ, ಭಾರತದ ಬೆಂಬಲ ಹಾಗೂ ವಿಶ್ವಸಂಸ್ಥೆಯ ಬರವಸೆ ಇಷ್ಟೆಲ್ಲಾ ಇದ್ದರೂ ಅಫ್ಘಾನ್ ತನ್ನ  ಸಮಾಧಿಯನ್ನು ತಾನೇ ತೊಡಿಕೊಂಡಿತು. 

ಕುಂದುಜ್ ನಗರದಿಂದ ಹೊರಬಿದ್ದು ಕಾಬುಲಿಗೆ ಓಡಿಬಂದ ಒಬ್ಬಾಕೆ ಹೇಳುವಂತೆ, ಅವತ್ತು ತಾಲಿಬಾನಿಗಳ ಆಕ್ರಮಣ  ಹೇಗಿತ್ತೆಂದರೆ, ಪಶ್ತೂನ್ ಕಡೆಯಿಂದ ಹೊರಟ ತಾಲಿಬಾನ್ ರಾಕ್ಷಸರ ದಂಡಯಾತ್ರೆ ಒಂದೊಂದೇ ನಗರಗಳನ್ನು ಆಕ್ರಮಿಸಿಕೊಳ್ಳುತ್ತ ಬರುತ್ತಿದ್ದಂತೆ ಅವರ ಕ್ರೌರ್ಯದ ಅಟ್ಟಹಾಸಕ್ಕೆ "ಬೀದಿಯ ತುಂಬ ಹೆಣಗಳು ಚೆಲ್ಲಾಡಿದ್ದವು. ಎಲ್ಲರೂ ತಮ್ಮನ್ನು ರಕ್ಷಿಸಿಕೊಳ್ಳಲು ಓಡುತ್ತಿದ್ದರಷ್ಟೇ ಹೊರತು, ಯಾರನ್ನೂ ಯಾರೂ ರಕ್ಷಿಸಲು ಸಾಧ್ಯವಾಗದ ಪರಿಸ್ಥಿತಿ." ಅದೆಷ್ಟೋ ಮಂದಿ ನುಗ್ಗಿಬಂದ ತಾಲಿಬಾನಿಗಳಿಗೆ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಒಪ್ಪಿಸಿ ಕೈ ಮುಗಿದಿದ್ದರು. ಇನ್ನೂ ಪ್ರಾಯ ಬಾರದೇ ಇರುವ ಎಳೆಯ ಹೆಣ್ಣು ಮಕ್ಕಳನ್ನು ಸಹ ಹೊತ್ತುಕೊಂಡು ಒಯ್ಯಲಾಗಿತ್ತು. ರಾಜಧಾನಿ ಸಮೀಪಿಸುವುದಕ್ಕೂ ಮೊದಲೇ ತಾಲಿಬಾನ್ ಮುಖಂಡರು, ತಾವು ವಶಪಡಿಸಿಕೊಂಡ ಎಲ್ಲ ಪ್ರಾಂತ್ಯಗಳ ಇಮಾಮ್ ಗಳು, ಮುಲ್ಲಾಗಳನ್ನು ಕರೆಸಿ, "ನಿಮ್ಮ ವ್ಯಾಪ್ತಿಯಲ್ಲಿರುವ 14 ವರ್ಷ ಹೆಣ್ಣುಮಕ್ಕಳು ಹಾಗೂ 35 ರಿಂದ 45 ವರ್ಷ ಮೀರದ ವಿಧವೆಯರ ಪಟ್ಟಿ ಮಾಡಿ ನಮಗೆ ಒಪ್ಪಿಸಿ, ಇವರನ್ನು ನಮ್ಮ ಯೋಧರಿಗೆ ಮದುವೆಯಾಗುವಂತೆ ಅವರ ಕುಟುಂಬದವರು ತಾವಾಗಿಯೇ ಒಪ್ಪಿಸಿಕೊಡಲಿ,"ಎಂದು ಉರ ಪ್ರಮುಖರಿಗೆ ಪರಮಾನನ್ನು ಹೊರಡಿಸಿದ್ದರು. ಅವರನ್ನು ನಮ್ಮ ಉಗ್ರರ ಬಳಿ ಲೈಂಗಿಕ ಜೀತದಾಳುಗಳಾಗಿ ಬಿಡಿ ಎಂಬುದೆ ಇವರ ಮಾತಿನ ಅರ್ಥ. ಈ ಸುದ್ದಿ ತಿಳಿಯುತ್ತಿದ್ದಂತೆ, ಅಲ್ಲಿನ ಬೋಡರ್ಿಂಗ್ ಶಾಲೆಯೊಂದರಲ್ಲಿ ಓದುತ್ತಿದ್ದ ಐದುನೂರಕ್ಕೂ ಹೆಚ್ಚು ವಿದ್ಯಾಥರ್ಿನಿಯರನ್ನು ಈ ತಾಲಿಬಾನಿ ರಾಕ್ಷಸರಿಂದ ರಕ್ಷಿಸಿಕೊಳ್ಳುವುದಕ್ಕಾಗಿ, ಆ ಶಾಲೆಯ ಮುಖ್ಯಸ್ಥೆ ವಿದ್ಯಾಥರ್ಿಗಳ ದಾಖಲಾತಿಗಳನ್ನೇ ಸುಟ್ಟು ಹಾಕಿದ್ದರು. 

ಅಫ್ಘಾನಿಸ್ತಾನದ ಸೈನಿಕರೆಲ್ಲ ಶರಣಾಗತಿ ಘೋಷಿಸಿದ ನಂತರ ಈಗ ತಾಲಿಬಾನಿಗಳ ಬಂದೂಕುಗಳ ಗುರಿ, ಮಾಜಿ ಸರಕಾರಿ ಉದ್ಯೋಗಿಗಳು, ವಿದೇಶಗಳಿಂದ ಬಂದ ಎನ್ ಜಿಒ ಸಿಬ್ಬಂದಿಗಳು, ಅಲ್ಲಿ ಇನ್ನೂ ಉಳಿದುಕೊಂಡಿರುವ ರಾಯಭಾರ ಕಚೇರಿಗಳ ಸಿಬ್ಬಂದಿಗಳು, ವಿದೇಶದಿಂದ ಬಂದು ಅಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತ ಆಸ್ತಿ ಮಾಡಿಕೊಂಡವರು, ಸರಕಾರಿ ಸೇನೆಗೆ ಈ ಹಿಂದೆ ತಮ್ಮ ಕುರಿತು ಸುದ್ದಿಗಳನ್ನು ರಹಸ್ಯವಾಗಿ ತಲುಪಿಸುತಿದ್ದವರು ಎಂಬ ಅನುಮಾನಕ್ಕೊಳಗಾದವರು, ಮಹಿಳಾ ಹಕ್ಕುಗಳ ಹೋರಾಟಗಾರರು-ಎಲ್ಲರನ್ನೂ ಉಗ್ರರು ಮನೆಮನೆ ಶೋಧಿಸಿ ಹೊರತೆಗೆಯುತ್ತಿದ್ದಾರೆ. ಇವರ ಪರಿಸ್ಥಿತಿ ಇನ್ನೂ ಮುಂದೆ ಏನಾಗುತ್ತದೆ ಎಂಬುದುದನ್ನು ದೇವರೇ ಬಲ್ಲ. ಆಗಲೇ ಮಹಿಳಾ ಹಾಗೂ ಸರಕಾರಿ ಪತ್ರಕರ್ತರನ್ನು ವಿಚಾರಣೆ ಇಲ್ಲದೇ, ಸಿಕ್ಕ ಸಿಕ್ಕಲ್ಲಿ ಹತ್ಯೆ ಗೈದಿದ್ದಾರೆ. 

ಅಮೆರಿಕ ಸೇನೆ ಹಿಂತೆಗೆತ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ ಒಂದೊಂದೇ ಪ್ರಾಂತ್ಯ ವಶಪಡಿಸಿಕೊಳ್ಳುತ್ತ ಸಾಗಿದ ತಾಲಿಬಾನಿಗಳು, ಆಗಲೇ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಕೆಂಗಣ್ಣು ಬೀರಿದ ಉಗ್ರರು, ಅವರು ವಾಸಿಸುವ ಪ್ರದೇಶಗೆ ತೆರಳಿ ಅಂತಹ ಸಮುದಾಯಗಳನ್ನು ಹುಡುಕಿ ಹುಡುಕಿ ಕ್ರೂರವಾಗಿ ಹಿಂಸೆ ಕೊಡುತ್ತಿದ್ದಾರೆ. ತುಸು ಪ್ರತಿರೋಧ ತೋರಿದವರನ್ನಂತೂ ನಿದರ್ಾಕ್ಷಣ್ಯವಾಗಿ ಕೊಂದು ಹಾಕಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ ಜುಲೈ ಮೊದಲ ವಾರದಲ್ಲಿ ಘಜನಿ ಪ್ರಾಂತ್ಯದಲ್ಲಿ ಹಜಾರೆ ಸಮುದಾಯಕ್ಕೆ ಸೇರಿದ ಒಂಭತ್ತು ಜನರನ್ನು ಈ ರಕ್ತಪಿಶಾಚಿಗಳು ಹತ್ಯೆಗೈದಿದ್ದರು. 

ಅತಿ ಹೆಚ್ಚು ಭಯಬಿತರಾದವರು ಮಹಿಳಾ ಹಕ್ಕುಗಳ ಪ್ರತಿಪಾದಕರು. ಕಳೆದ ಎರಡು ದಶಕಗಳಲ್ಲಿ ಅಮೆರಿಕನ್ನ್ ಸೈನ್ಯ ಬೆಂಬಲವಾಗಿ ಇರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಣ್ಣುಮಕ್ಕಳ ಶಾಲೆಗಳನ್ನು ಆರಂಭಿಸಲಾಗಿತ್ತು. ಸ್ತ್ರೀಯರು ಬ್ಯಾಂಕ್, ಶಾಲೆ, ವಿವಿಧ ಇಲಾಖೆಗಳಲ್ಲಿ ಉದ್ಯೋಗ ಮಾಡತೊಡಗಿದ್ದರು. ಮುಕ್ತವಾಗಿ ಓಡಾಡಲು, ಮಾತನಾಡಲು, ಓದಲು-ಬರೆಯಲು ಆರಭಿಸಿದ್ದರು. ಎರಡು ದಶಕಗಳಲ್ಲಿ ಹುಟ್ಟಿ ಬೆಳೆದ ಯುವಜನರ ತಲೆಮಾರು, 1996ರಿಂದ 2002 ವರೆಗೆ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಳಿದ ಸಂದರ್ಭದಲ್ಲಿ, ಆಗ ತಾವು ಅನುಭವಿಸಿದ ಯಾತನೆಯನ್ನು ಅಲ್ಲಿನ ಹೆಣ್ಣುಮಕ್ಕಳು ಹತಾಶಯರಾಗಿ ಇಂದಿಗೂ ಸ್ಮರಿಸುತ್ತಾರೆ. ಇಂದಿನ ಪಿಳಿಗೆ ತಾಲಿಬಾನಿಗಳ ಕ್ರೌರ್ಯವನ್ನು ಕಂಡಿದ್ದಿಲ್ಲವಾದರೂ, ತಮ್ಮ ಹಿಂದಿನ ತಲೆಮಾರಿನವರಿಂದ ಕೇಳಿ ತಿಳಿದಿದ್ದರು. ಆದರೀಗ, ಆ ಯುವ ಚೈತನ್ಯಗಳ ಮನದಲ್ಲಿ ಹರಳುಗಟ್ಟಿದ ಕನಸುಗಳು ನನಸಾಗದೇ ಉಳಿದು ಬಿಡುತ್ತದೆಯಾ? ಸಧ್ಯಕ್ಕಂತೂ ಎರಡು ದಶಕಗಳ ಹಿಂದಿನ ಸ್ಥಿತಿ ಮತ್ತೇ ನಿಮರ್ಾಣವಾಗಿಬಿಟ್ಟಿದೆ. ಸ್ತ್ರೀವಾದಿ ಹೋರಾಟಗಾರರು ತಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿಂದ ಪಾರು ಮಾಡುವಂತೆ ಅಮೆರಿ, ಭಾರತ ಮುಂತಾದ ದೇಶಗಳಿಗೆ ಇಂಟನರ್ೆಟ್ ಮೂಲಕ ಮೊರೆಯಿಟ್ಟಿದ್ದಾರೆ. 

ತಾಲಿಬಾನಿಗಳಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಿತ್ತೊಗೆದು, ಅವರಪಾಲಿಗೆ ದೇವರ ಎನ್ನಲಾದ 'ಶರಿಯಾ' ಕಾನೂನಿನ ಮೂಲಕ ದೇಶವನ್ನಾಳುವ ಕನಸು ಕಂಡಿದ್ದಾರೆ. ಈ ಕಾನೂನಿನಲ್ಲಿ ಹೆಣ್ಣುಮಕ್ಕಳೇ ಟಾಗರ್ೆಟ್. ಶರಿಯಾ ಕಾನೂನಿನಲ್ಲಿರುವ ದೃಷ್ಟಾಂತಗಳನ್ನು ನೆನೆಸಿಕೊಂಡರೆ ಕಣ್ಣಲ್ಲಿ ನೀರುತ್ತದೆ.  ಇವರ ಆಡಳಿತದಡಿ ಮಹಿಳೆಯರಿಗೆ, ಸಾಕುಪ್ರಾಣಿಗಳಿಗೆ ಇರುವ ಸ್ಥಾನ ಮಾನವೂ ಇಲ್ಲ. ಅವರು ಮನೆಕೆಲಸಕ್ಕೆ ಮಾತ್ರ ಸೀಮಿತ. ಯಾವುದೇ ಹಕ್ಕುಗಳನ್ನು ಕೇಳುವಂತಿಲ್ಲ, ಶಿಕ್ಷಣವನ್ನು ಪಡೆಯೊಹಾಗಿಲ್ಲ. 10 ವರ್ಷದ ಒಳಗಿನ ಹೆಣ್ಣುಮಕ್ಕಳು ಮಾತ್ರ ಕುರಾನ್ ಪಾಠ ಹೇಳಿಸಿಕೊಳ್ಳಬಹುದು. ಆಕೆ ಯಾವುದೇ ಉದ್ಯೋಗವನ್ನೂ ಮಾಡುವಂತಿಲ್ಲ. 18 ವರ್ಷಕ್ಕೆ ಮೇಲ್ಪಟ್ಟ ಹೆಣ್ಣು ಮಕ್ಕಳು ಒಬ್ಬೊಬ್ಬರೇ ಇರುವಹಾಗಿಲ್ಲ; ಅದು ಪಾಪ. ಆಕೆಗೆ ಮದುವೆ ಮಾಡಲೇಬೇಕು. ಯಾವೊಬ್ಬ ಸ್ತ್ರೀ ಕೂಡಾ ಒಬ್ಬರೇ ಹೊರ ಹೊಗುವಂತಿಲ್ಲ, ಜೊತೆಗೊಬ್ಬ ಪುರುಷ ಇರಲೇಬೇಕು. ಆಕೆ ಮುಖ ಸಹಿತ ಇಡೀ ದೇಹವನ್ನು ಮುಚ್ಚಿಕೊಂಡಿರಬೇಕು. ಆಕೆ ಹೈಹೀಲ್ಡ್ ಶೂ ಅಥವಾ ಚಪ್ಪಲಿ ಧರಿಸುವಹಾಗಿಲ್ಲ. ಅವಳ ಹೆಜ್ಜೆಯ ಸಪ್ಪಳ ಪುರುಷನಿಗೆ ಕೇಳಿದರೂ ಅದು ಆತನ ಮನ ಕೆಡಿಸಬಹುದೆಂಬುದು ಕಾರಣ. ಆಕೆ ದೊಡ್ಡ ಸ್ವರದಲ್ಲಿ ಮಾತನಾಡುವಂತಿಲ್ಲ, ತನ್ನ ಮನೆಯ ಬಾಲ್ಕನಿಯಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಕುಂದಜ್ ನಲ್ಲಿ ಒಬ್ಬಾಕೆ ಜೀನ್ಸ್ ಧರಿಸದ್ದಳು ಎಂಬ ಕಾರಣಕ್ಕಾಗಿ ಅಲ್ಲೇ ಆಕೆಯನ್ನು ಗುಂಡಿಕ್ಕಿ ಸಾಯಿಸಿದ್ದರು. ಒಂದುವೇಳೆ ಮಹಿಳೆ ಮದುವೆಯಾಗದೆ ಪ್ರೇಮಸಂಬಂಧ ಇಟ್ಟುಕೊಂಡಿದ್ದರೆ ಅಥವಾ ವಿವಾಹೇತರ ಸಂಬಂಧ ಹೊಂದಿ ಸಿಕ್ಕಿಬಿದ್ದರೆ, ಅಥವಾ ವಿಧವೆಯಾಗಿದ್ದು ಬೇರೊಬ್ಬ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿರುವುದು ಕಂಡುಬಂದರೆ, ಅವಳನ್ನು ಹಾಗೂ ಪುರುಷನನ್ನು ಸಾರ್ವಜನಿಕವಾಗಿ  ಹೊಡೆದು ಕೊಲ್ಲಲಾಗುತ್ತದೆ. ಒಂದು ವೇಳೆ ಆಕೆಯ ತಪ್ಪೆನೂ ಇಲ್ಲದೇ, ಅವಳು ಬಲಾತ್ಕಾರಕ್ಕೆ ಒಳಪಟ್ಟರೂ ಆಕೆಗೆ ಛಡಿ ಏಟು, ಸಾವು ಕಟ್ಟಿಟ್ಟ ಬುತ್ತಿ. ಹೆಣ್ಣು ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ, ಪುರುಷ ವೈದ್ಯರು ಹೆಣ್ಣುಮಕ್ಕಳನ್ನು ಮುಟ್ಟಿ ಚಿಕಿತ್ಸೆ ನೀಡುವಂತಿಲ್ಲ. ಅವರು ಮಹಿಳಾ ಡಾಕ್ಟರ್ ಇರುವ ಆಸ್ಪತ್ರೆಗೆ ಮಾತ್ರವೇ ಹೋಗಬೇಕು. ಅಂಥ ಆಸ್ಪತ್ರೆ ಇರುವುದು ಕಾಬೂಲ್ ಗೆ ಒಂದೇ. ದುದರ್ೆವ ನೋಡಿ ಹೇಗಿದೆ! ಹೆಣ್ಣು ಮಕ್ಕಳಿಗೆ ಶಿಕ್ಷಣನ್ನೆ ನಿಷಿದ್ದ ಮಾಡಿದರೆ, ಅವರು ಶಾಲೆಗೆ ಹೋಗದೆ ಇದ್ದರೆ, ಹೆಣ್ಣುಮಕ್ಕಳು ಡಾಕ್ಟರ್ ಆಗೋದಾರೂ ಎಲ್ಲಿಂದ?

ಇಸ್ಲಾಂನಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ನಿಸಿದ್ದ, ಮಕ್ಕಳಾಗದಂತೆ ತಡೆಯೋ ಹಾಗಿಲ್ಲ! ದಿವಂಗತ ರವಿ ಬೆಳಗೆರೆ ಅವರು ಹಲವು ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಹೊಗಿದ್ದ ಸಂದರ್ಭದಲ್ಲಿ, ಅವರು ಕಣ್ಣಾರೆ ಕಂಡಿದ್ದ ಅಲ್ಲಿನ ಕೆಲವು ದೃಶ್ಯಗಳನ್ನು ತಮ್ಮ 'ಮುಸ್ಲಿಂ' ಎಂಬ ಕೃತಿಯಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಅಲ್ಲಿನ ಹೆಣ್ಣುಮಕ್ಕಳ ಪರಿಸ್ಥಿತಿ ಹೆಗಿತ್ತೆಂಬುದನ್ನು ಅವರು ಬರೆಯುತ್ತಾರೆ  ' ಮಕ್ಕಳನ್ನು ಹೆತ್ತು ಹೆತ್ತು ಅವರ ಗರ್ಭಕೋಶವು ಗುಪ್ತಾಂಗದ ಮೂಲಕ ಕೆಳಗೆ ಜಾರಿ ಬಿಡುತ್ತದೆ, ಹಾಗೆಯೇ ನಡೆಯುತ್ತಾರೆ, ನಂತರ ಅದು ನಂಜಾಗಿ, ಸೆಪ್ಟಿಕ್ ಆಗಿ ನರಳಿ ನರಳಿ ಸಾವನ್ನಪ್ಪುತ್ತಾರೆ. ನರಕ ಅಂತ ಯಾವುದನ್ನಾದರೂ ಕರೆಯುವ ಹಾಗಿದ್ದರೆ, ಇದಕ್ಕಿಂತ ದೊಡ್ಡ ನರಕ ಇನ್ಯಾವುದಿದೆ ಹೇಳಿ!. ಅಲ್ಲಿ ಸಲಿಂಗಿಗಳು ಅಂತ ಯಾರಾದರೂ ಗೊತ್ತಾದರೆ ಅವರನ್ನು ನಡು ರಸ್ತೆಯಲ್ಲಿ ಕತ್ತು ಕತ್ತರಿಸಿ ಕೊಲ್ಲಲಾಗುತ್ತದೆ. ಬ್ಯೂಟಿ, ಸಲೂನ್ ಗಳೂ ಇಲ್ಲಿನಿಷೇಧಿತ. ಮೇಕಪ್, ನೇನ್ ಪಾಲಿಷ್ ಕೂಡಾ ಶಿಕ್ಷಾರ್ಹ,1996ರರ ಸಂದರ್ಭದಲ್ಲಿ ಬೆರಳಿಗೆ ನೇನ್ ಪಾಲಿಷ್ ಹಾಕಿಕೊಂಡಿದ್ದ ಕಾರಣಕ್ಕಾಗಿ ಆ ಮಹಿಳೆಯ ಬೆರಳುಗಳನ್ನೇ ಕತ್ತರಿಸಿಹಾಕಿದ್ದರು. ಮಹಿಳೆಯರನ್ನು ಯಾವುದೇ ಮಾಧ್ಯಮಗಳಲ್ಲಿ(ಮುದ್ರಣ, ದೃಶ್ಯ) ತೋರಿಸುವಂತಿಲ್ಲ. ಕಾಬುಲ್ ತಾಲಿಬಾನಿಗಳ ವಶವಾಗುತ್ತಿದ್ದಂತೆಯೇ, ಸ್ಥಳೀಯ ಚಾನಲ್ ಗಳಲ್ಲಿದ್ದ ಎಲ್ಲಾ ಮಹಿಳಾ ಆ್ಯಂಕರ್ ಗಳು, ಸುದ್ದಿವಾಚಕಿಯರನ್ನು ತೆಗೆಯಲಾಯಿತು. ಹಿನ್ನೆಲೆ ಸಂಗೀತವನ್ನು ಕೈಬಿಡಲಾಯಿತು. ಮತಾಂದರ ಅಧಿಕಾರದಲ್ಲಿ ಸಂಗೀತ, ಮನರಂಜನೆಗೆ ಅವಕಾಶವಿಲ್ಲ. ಯಾವುದೇ ಚಾನಲ್ ಗಳಲ್ಲಿ ಸಂಗೀತ, ಚಿತ್ರಗೀತೆಗಳನ್ನಾಗಲಿ, ಹಾಲಿವುಡ್ ಬಾಲಿವುಡ್ ಫಿಲಂಗಳನ್ನಾಗಲಿ ಪ್ರಸಾರ ಮಾಡುವಂತಿಲ್ಲ. ಕಲ್ಕತ್ತಾದಲ್ಲಿ ಉದ್ಯಮಿಯಾಗಿದ್ದ ಅಫ್ಘಾನಿಸ್ತಾನ ಮೂಲದ ವ್ಯಕ್ತಿಯನ್ನು ಪ್ರೇಮಿಸಿ ಮದುವೆಯಾಗಿದ್ದ ಸುಸ್ಮಿತಾ ಬ್ಯಾನಜರ್ಿ ಎಂಬ ಭಾರತೀಯ ಲೇಖಕಿ, ತಾಲಿಬಾನಿಗಳ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದಳೆಂಬ ಕಾರಣಕ್ಕಾಗಿ 2013 ರಲ್ಲಿ ಆಕೆಯನ್ನು ಗುಂಡಿಟ್ಟು ಕೊಲ್ಲಲಾಯಿತು. 1996 ಡಿಸೆಂಬರ್ 16 ರಂದು ಸುಮಾರು ಇನ್ನೂರಕ್ಕೂ ಹೆಚ್ಚು ಮಹಿಳೆಯರು ಈ ಶರಿಯಾ ಕಾನೂನನ್ನು ಧಿಕ್ಕರಿಸಿ ಹೋರಾಟ ನಡೆಸಿದ್ದಕ್ಕಾಗಿ ಅವರಿಗೆ ಚಿತ್ರಹಿಂಸೆ ಕೊಡಲಾಗಿತ್ತು. ಒಂದು ಲೆಕ್ಕಾಚಾರದ ಪ್ರಕಾರ ಅಫ್ಘಾನಿಸ್ತಾನದಲ್ಲಿ ಸುಮಾರು 50 ಲಕ್ಷದಷ್ಟು ವಿದವೆಯರಿದ್ದಾರೆಂಬ ಮಾಹಿತಿ ಇದೆ 

ದೇವರ ಮೇಲೆ ನನಗೆ ನಂಬಿಕೆ ಇಲ್ಲ ಅಂತ ಯಾರಾದರೂ ಹೇಳಿದರೆ, ಅಥವಾ ನನಗೆ ದೇವರ ಮೇಲೆ ನಂಬಿಕೆ ಇದೆ, ಆದರೆ ಮೂತರ್ಿ ಪೂಜೆ ಮಾಡುತ್ತೇನೆ ಅಂತಲೂ ಯಾರಾದರೆ ಹೇಳಿದರೆ ಅಂಥವರನ್ನು ಕೊಲ್ಲಲಾಗುತ್ತದೆ. ಹೀಗೆಕೆ ಅಂತ ಅವರನ್ನು ಯಾರಾದರೂ ಪ್ರಶ್ನಿಸಿದರೆ ಇದು ನಮಗೆ ದೇವರು ಕೊಟ್ಟ ಕಾನೂನು,ಇದೇ ಶ್ರೇಷ್ಠ ಕಾನೂನು ಎಂದು ಅವರು ಹೆಳುತ್ತಾರೆ. ಮನುಷ್ಯರು ಸಂತೋಷವಾಗಿರುವುದೇ ಈ ಕ್ರೂರಿಗಳಿಗೆ ಇಷ್ಟವಿಲ್ಲ.ಅಫ್ಘಾನಿಸ್ತಾನದ ಬಹುತೇಕ ಭಾಗಗಳನ್ನು ವಶಪಡಿಸಿಕೊಂಡ ತಾಲಿಬಾನಿಗಳಿಗೆ ಇನ್ನೂ ಕೂಡಾ ಆ ಒಂದು ಪ್ರಾಂತ್ಯವನ್ನು ಮಾತ್ರ ವಶಪಡಿಕೊಳ್ಳೊದಕ್ಕೆ ಸಾಧ್ಯವಾಗಿರಲಿಲ್ಲ. ಇಡೀ ದೇಶವನ್ನೇ ವಶಪಡಿಸಿಕೊಂಡ ನಮಗೆ ಪಂಜ್ ಶೀರ್ ಪ್ರಾಂತ್ಯ ವಶಪಡಿಸಿಕೊಳ್ಳುವುದು ಅದ್ಯಾವ ಲೆಕ್ಕ ಅನ್ನೋ ದೌಲತ್ತಿನಲ್ಲಿ ಪಂಜ್ ಶೀರ್ ಕಣಿವೆ ಪ್ರಾಂತ್ಯದತ್ತ ಆಕ್ರಮಣಕ್ಕೆ ಬಂದ ತಾಲಿಬಾನ್ ಉಗ್ರರನ್ನು ಅಲ್ಲಿನ ಜನ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗೋಸ್ಕರ ಉಗ್ರರ ವಿರುದ್ದ ತೊಡೆತಟ್ಟಿ, ಅವರ ವಿರುದ್ದ ಸಮರ ಸಾರಿದ ಉತ್ತರ ಮೈತ್ರಿ ಸೇನೆಯ ಮುಖ್ಯಸ್ಥ ಅಹ್ಮದ್ ಮಸೂದ್ ತಮ್ಮ 'ಪಂಜ್ ಶೀರ್ ಪ್ರಾಂತ್ಯವನ್ನು ಮಾತ್ರ ಉಗ್ರರ ವಶವಾಗಲು ಬಿಡಲಿಲ್ಲ ಎನ್ನುತ್ತಾ, ಆಕ್ರಮಣಕ್ಕೆ ಮುಂದಾಗಿದ್ದ ನೂರಾರು ತಾಲಿಬಾನಿ ಉಗ್ರರನ್ನು ತನ್ನ ಸೇನೆಯ ಬಲದಿಂದ ಹೊಡೆದು ನೆಲಕ್ಕುರುಳಿಸಿದ್ದಾರೆ. ಆಗಲೆ ಉಗ್ರರ ವಶವಾಗಿದ್ದ ಪಶ್ಚಿಮ ಭಾಗದ 'ಖಾಂಜನ್ ಪ್ರಾಂತ್ಯವನ್ನು ಕೂಡಾ ಉಗ್ರರ ಕಪಿ ಮುಷ್ಟಿಯಿಂದ ಮರಳಿ ವಶಕ್ಕೆ ಪಡೆದುಕೊಳ್ಳುವ ಮೂಲಕ ಉಗ್ರರ ಉಪಟಳಕ್ಕೆ ಬ್ರೇಕ್ ಹಾಕಿದ್ದಾರೆ. ತಾಲಿಬಾನಿನ ಮೂಲ: ತಾಲಿಬಾನ್ ಅಂದರೆ ವಿದ್ಯಾಥರ್ಿ ಅಂತ ಅರ್ಥ, ಈ ತಾಲಿಬಾನ್ ಹುಟ್ಟಿಕೊಂಡಿದ್ದು ಉತ್ತರ ಪಾಕಿಸ್ತಾನದ ಮದರಸಾಗಳಿಂದ. ಅಲ್ಲಿ ಇಸ್ಲಾಂನ ಸುನ್ನಿ  ಪಂಥವನ್ನು ಬೊದಿಸಲಾಗುತ್ತಿತ್ತು. ಈ ಎಲ್ಲಾ ಕಾರ್ಯಗಳಿಗೆ ಪಾಕಿಸ್ತಾನದ ಬೆಂಬಲವಿತ್ತು, ಈ ಮೊದಲು ರಶಿಯಾ, ಅಫ್ಘಾನಿಸ್ತಾನದಲ್ಲಿ ಇಂತಹ ಯಾವುದೇ ಚಟುವಟಿಕೆಗಳನ್ನು ನಡೆಸೊದಕ್ಕೆ ಅಲ್ಲಿ ಬಿಟ್ಟಿರಲಿಲ್ಲ, ರಶಿಯಾ ಯಾವಾಗ ಯು.ಎಸ್.ಎಸ್ ಆರ್ ಆಗಿ ಒಡೆದು ಇಬ್ಬಾಗವಾಯಿತೋ, ಅದಾದ ನಂತರ ತಾಲಿಬಾನ್ ಸಂಘಟನೆ ಅಲ್ಲಿ ಉದಯವಾಗಿ, ಇಂದಿನ ಈ ಎಲ್ಲಾ ದುಶ್ ಕೃತ್ಯಗಳು ನಡೆಯಲು ಕಾರಣವಾಯಿತು.  

ಈ ಎಲ್ಲಾ ಸಂಗತಿಗಳನ್ನು ತಿಳಿದ ಮೇಲೆ, ನಿಮ್ಮ ಮನಸ್ಸಿನಲ್ಲೂ, ಇದೆಂತಹ ರಾಕ್ಷಸಿಯ ಕಾನೂನು ಅಂತ ಅನಿಸಿರಬೇಕಲ್ಲವೇ? ಅಲ್ಲಿ ಆಳುವವರು ರಾಕ್ಷಸರೆ ಇರುವಾಗ ಕಾನೂನುಗಳು ಕೂಡಾ ಹಾಗೆ ಅಲ್ಲವೇ? ಭೂತದ ಬಾಯಿಯಲ್ಲಿ ಭಗವದ್ಗೀತೆ ಬರಲು ಸಾಧ್ಯವೇ? ಆಯಾ ದೇಶಗಳು ಅವರವರ ಪ್ರಜೆಗಳನ್ನು ಏಲರ್ಿಪ್ಟ್ ಮಾಡ್ತಾ ಇದ್ದಾರೆ. ಆದರೆ ನರಕದಲ್ಲಿರುವ ಗಾಂಧಾರ ನಾಡಿನ ಪ್ರಜೆಗಳ ಗೋಳನ್ನು ಕೇಳುವವರು ಯಾರು? ನರರಾಕ್ಷಸರ ಕ್ರೌರ್ಯಕ್ಕೆ ನಲುಗಿಹೊದ ಅವರ ಮುಂದಿನ ಭವಿಷ್ಯವೆಲ್ಲ ಬರಿ ಕತ್ತಲೆ ಕತ್ತಲು!  ಇನ್ನು ಆ ದೇವರೇ ಅವರನ್ನು ಕಾಪಾಡಬೇಕಷ್ಟೆ.

ಸುದ್ದಿ ಓದಿ