ವಿಜಯಪುರ

ದೇವರಹಿಪ್ಪರಗಿ ಶಾಲೆಗಳಿಗೆ ಅಧಿಕಾರಿಗಳ ಮಿಂಚಿನ ಸಂಚಾರ

ದೇವರಹಿಪ್ಪರಗಿ ಶಾಲೆಗಳಿಗೆ ಅಧಿಕಾರಿಗಳ ಮಿಂಚಿನ ಸಂಚಾರ

ದೇವರಹಿಪ್ಪರಗಿ 17 : ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿದ ವಿಜಯಪುರ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರ ನೇತೃತ್ವದ ಜಿಲ್ಲಾ ತಂಡ ಶಾಲೆಗಳಲ್ಲಿನ ಮೂಲಸೌಕರ್ಯ ಹಾಗೂ ಮಕ್ಕಳ ದಾಖಲಾತಿ ಬಗ್ಗೆ ಪರೀಶೀಲನೆ ನಡೆಸಿದರು.ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಆರಂಭಿಕ ಹಂತದಿಂದಲೇ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತಮಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.  

ಈ ನಿಟ್ಟಿನಲ್ಲಿ ಮಿಂಚಿನ ಸಂಚಾರ ಹಮ್ಮಿಕೊಂಡು ಶಾಲೆಯ ಸ್ಥಿತಿಗಳ ಬಗ್ಗೆ ಪರೀಶೀಲಿಸಲಾಗುತ್ತಿದೆ ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಉತ್ತಮ ಯೋಜನೆಗಳು ನಮ್ಮ ಶಾಲೆಗಳಲ್ಲಿದ್ದು, ಈ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಪ್ರಾರಂಭವಾಗಿದೆ. ದಿನನಿತ್ಯ ಮಕ್ಕಳ ಚಟುವಟಿಕೆ ಯುಕ್ತ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಕರು ನಿರಂತರ ಕ್ರಿಯಾಶೀಲತೆಯಿಂದ ಉತ್ತಮ ಶಿಕ್ಷಣ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಲಾ ದಾಖಲಾತಿಗಳು, ಶಿಕ್ಷಕರು ಸಿದ್ಧಪಡಿಸಿದ ದಾಖಲೆ ಪರೀಶೀಲಿಸಿ ಮಾರ್ಗದರ್ಶನ ಮಾಡಿದರು.

ಸಂದರ್ಭದಲ್ಲಿ ಮಿಂಚಿನ ಸಂಚಾರ ಜಿಲ್ಲಾ ತಂಡಕ್ಕೆ ಶಾಲೆಯ ಮುಖ್ಯ ಗುರುಗಳಾದ ಪಿ.ಸಿ.ತಳಕೇರಿ ಸನ್ಮಾನಿಸಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಮಿಂಚಿನ ಸಂಚಾರ ಜಿಲ್ಲಾ ತಂಡದ ಶಿಕ್ಷಣ ಸಂಯೋಜಕ ಪ್ರಕಾಶ ನಾಲತವಾಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಂ.ಗುರಾಡಿ, ಸಮೂಹ ಸಂಪನ್ಮೂಲ ವ್ಯಕ್ತಿ ವಿಜಯಲಕ್ಷ್ಮಿ ನವಲಿ, ಮುಖ್ಯ ಗುರುಗಳಾದ ಪಿ.ಸಿ.ತಳಕೇರಿ, ಶಿಕ್ಷಕರುಗಳಾದ ಪಿ.ಬಿ. ಪೂಜಾರ, ಎಂ.ಎಸ್‌. ಶಿವಣಗಿ, ಎ.ಆರಿ​‍್ಶಕ್ಕೇರಿ, ಎಚ್‌.ಪಿ.ಮಳ್ಳಿ, ಎಸ್‌.ಎಸ್‌. ಕೆಂಗನಾಳ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 


ಸುದ್ದಿ ಓದಿ