ಮುದ್ದೆಬಿಹಾಲ್

ಪದಾಧಿಕಾರಿಗಳಿಗೆ ಕೆಪಿಸಿಸಿ ಕಚೇರಿಯಲ್ಲಿ ಸನ್ಮಾನ

ಪದಾಧಿಕಾರಿಗಳಿಗೆ ಕೆಪಿಸಿಸಿ ಕಚೇರಿಯಲ್ಲಿ ಸನ್ಮಾನ

ಮುದ್ದೇಬಿಹಾಳ 08:  ಪಟ್ಟಣದ ಪುರಸಭೆಗೆ ಹಾಗೂ ಆಶ್ರಯ ಸಮೀತಿಗೆ ಸರಕಾರದಿಂದ ನಾಮನಿರ್ದೇಶನಗೊಂಡ ರಾಜು ಹೊನ್ನುಟಗಿ, ವಿರೂಪಾಕ್ಷಿ ಈರಣ್ಣ ಪತ್ತಾರ, ನಬೀರಸೂಲ್ ಬಡೇಸಾಬ ಮುದ್ನಾಳ, ನೀಲಮ್ಮ ಲಕ್ಷಣ ಚಲವಾದಿ, ಅಕ್ರಮ್ ಸಕ್ರಮ್ ಸಮಿತಿ ನಾಮ ನಿರ್ದೇಶನ ಸದಸ್ಯರಾಗಿ,ಶಾಂತು ಮೇಲ್ಮನಿ, ಪದಾಧಿಕಾರಿಗಳನ್ನು ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಅವರು ಅಂಬೇಡ್ಕರ ವೃತ್ತದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. 

 ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಅವರು ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರವರ ನೇತೃತ್ವದ ಕಾಂಗ್ರೇಸ್ ಸರಕಾರ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಆದರೇ ಬಿಜೆಪಿವರಿಗೆ ಮತ್ತು ಜೆಡಿಎಸ್ ನವರಿಗೆ ಕಾಂಗ್ರೇಸ್ ಸರಕಾರದ ಸಾಧನೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ಹಿನ್ನೇಲೆಯಲ್ಲಿ ಹೇಗಾದರೂ ಮಾಡಿ ಕಾಂಗ್ರೇಸ್ ಸರಕಾರದ ಹೆಸರು ಹಾಳು ಮಾಡಬೇಕು ಎಂಬ ದುರಾಲೋಚನೆಯಿಂದ ಬಿಜೆಪಿವರು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಜನರಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ.  

ಕಾರಣ ನೂತನವಾಗಿ ನಾಮ ನಿರ್ಧೇಶನಗೊಂಡ ಎಲ್ಲ ಮುಖಂಡರು ಕಾಂಗ್ರೇಸ್ ಸರಕಾರದ ಸಾಧನೆ ಮತ್ತು ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟೆನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದಶಕ್ತಿ ಬಲಪಡಿಸಬೇಕು ಎಂದರು, ಜೊತೆಗೆ ಸಧ್ಯ ಪುರಸಭೆಯ ಎರಡನೆ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸರಕಾರ ಮೀಸಲಾತಿ ಪ್ರಕಟಿಸಿದೆ  ಕಾರಣ ಸಧ್ಯ ನಾಮನಿರ್ಧೇಶಿತ ಸದಸ್ಯರಿಗೂ ಮತ ಹಾಕು ಹಕ್ಕು ನೀಡಿದರೇ ಈ ಬಾರಿ ಎರಡನೆ ಅವಧಿಗೂ ಕಾಂಗ್ರೇಸ್ ಪಕ್ಷದವದರೇ ಅದ್ಯಕ್ಷರಾಗಿ ಆಯ್ಕೆಯಾಗುವ ಯಾವೂದೇ ಸಂದೇಹವಿಲ್ಲ ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ತಿರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದರು ಮುಖಂಡರಾದ ರುದ್ರಗೌಡ ಅಂಗಡಗೇರಿ, ತಾಲೂಕಾ ಯೂರ್ಥ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಫೀಕ ಶಿರೋಳ, ಸಿಕಂದರ್ ಜಾನ್ವೇಕರ, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಗೋಪಿ ಮಡಿವಾಳರ, ಬೀರ​‍್ಪ ಯರಝರಿ,ಸಂತೋಷ ನಾಯ್ಕೋಡಿ,ಹರೀಶ ಬೇವೂರ,ಲಕ್ಷಣ ಚವ್ಹಾಣ,ಮುತ್ತು ಬಿಳೆಭಾವಿ,ಶಬೀರ,ಮುಂತಾದ ಮುಖಂಡರು ಉಪಸ್ಥಿತಿ ಇದ್ದರು. 


ಸುದ್ದಿ ಓದಿ