ಶಾಸಕ ಎ.ಎಸ್. ಪಾಟೀಲರಿಂದ ಕಾಮಗಾರಿ ವೀಕ್ಷಣೆ
ತಾಳಿಕೋಟಿ: ಪಟ್ಟಣದಲ್ಲಿ ಸುಮಾರು ರೂ. 70 ಲಕ್ಷ ವೆಚ್ಚದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಸವೇಶ್ವರ ಅಶ್ವಾರೂಢ ಮೂರ್ತಿ ಪ್ರತಿಷ್ಠಾಪನೆಯ ಕಾಮಗಾರಿಕೆಯನ್ನು ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ವೀಕ್ಷಿಸಿ ಪರಿಶೀಲಿಸಿದರು.
ಪಟ್ಟಣದ ಜನರ ಬಹುದಿನಗಳ ಬೇಡಿಕೆಯಾದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯವನ್ನು ಅತ್ಯಂತ ಆಸಕ್ತಿ ವಹಿಸಿ ನಿರ್ವಹಿಸಬೇಕು. ಜೊತೆಗೆ ಸಾಧ್ಯವಾದಷ್ಟು ಬೇಗ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಪ್ರಯತ್ನಿಸಬೇಕು ಎಂದು ನಿರ್ಮಿತ ಇಲಾಖೆಯ ಅಭಿಯಂತರರಿಗೆ ಆದೇಶಿಸಿದ ಅವರು ಬಜೆಟ್ ಅಧಿವೇಶನದ ನಂತರ ಮುಖ್ಯಮಂತ್ರಿಗಳನ್ನು ಆಮಂತ್ರಿಸಿ ಅವರಿಂದಲೆ ಉದ್ಘಾಟಿಸುವ ಯೋಜನೆ ಇದೆ ಎಂದರು.
ಈ ಸಮಯದಲ್ಲಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ (ಕವಡಿಮಟ್ಟಿ), ಮಾಜಿ ಸದಸ್ಯ ಪ್ರಕಾಶ ಹಜೇರಿ, ಮುಖಂಡ ಶಿವಶಂಕರ ಹಿರೇಮಠ, ಮಹಾಂತೇಶ ಮುರಾಳ ಇದ್ದರು.