ಶಿಗ್ಗಾವ್

ವಸ್ತು ಪ್ರದರ್ಶನ ಮಕ್ಕಳ ಬುದ್ಧಿ ಶಕ್ತಿಯ ಜೊತೆಗೆ ಪ್ರಪಂಚ ಜ್ಞಾನ ಪಡೆಯಲು ಸಹಕಾರಿ: ಪಾಂಡೆ

ವಸ್ತು ಪ್ರದರ್ಶನ ಮಕ್ಕಳ ಬುದ್ಧಿ ಶಕ್ತಿಯ ಜೊತೆಗೆ ಪ್ರಪಂಚ ಜ್ಞಾನ ಪಡೆಯಲು ಸಹಕಾರಿ:  ಪಾಂಡೆ

ಶಿಗ್ಗಾವಿ 30: ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿದ್ದು, ಮಕ್ಕಳ ಬುದ್ದಿಶಕ್ತಿಯ ಜೊತೆಗೆ ಪ್ರಪಂಚ ಜ್ಞಾನ ಪಡೆಯಲು ಸಹಕಾರಿಗುತ್ತವೆ ಹೀಗಾಗಿ ಪಾಲಕರು ಹೆಚ್ಚೆಚ್ಚು ಮಕ್ಕಳನ್ನು ವಸ್ತು ಪ್ರದರ್ಶನಗಳ ಕಡೆಗೆ ಗಮನ ಹರಿಸುವಂತೆ ಮಾಡಬೇಕು ಎಂದು ಅಂಬುಜಾ ಗೋವಿನ ಜೋಳದ ಸಂಸ್ಕರಣಾ ಕಂಪನಿಯ ವ್ಯವಸ್ಥಾಪಕ ಉಮೇಶ ಪಾಂಡೆ ಹೇಳಿದರು. 

ಪಟ್ಟಣದ ಫಿನಿಕ್ಸ್‌ ಇಂಟರನ್ಯಾಷನಲ್ ಶಾಲೆಯಲ್ಲಿ "ಉತ್ಸವಗಳ ಸಮ್ಮಿಲನ" ಕಾರ್ಯಕ್ರಮದ ಅಂಗವಾಗಿ ನಡೆದ ಬೃಹತ್ ಮಕ್ಕಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಮಕ್ಕಳಿಗೆ ನಿಜವಾದ ಬದುಕನ್ನು ಪರಿಚಯಿಸುವ ಕಾಯದೀ ವಸ್ತು ಪ್ರದರ್ಶನಗಳು ಮಾಡುತ್ತವೆ, ಈ ಕುರಿತು ಪಾಲಕರು, ಶಿಕ್ಷಕರು ಅಂತಹ ವಾತಾವರಣ ಮೂಡಿಸಬೇಕು ಜೊತೆಗೆ ನಮ್ಮ ಪಾರಂಪರಿಕ ಸಾಂಸ್ಕೃತಿಯನ್ನು ಎಂದಿಗೂ ಮರೆಯಬಾರದು ಎಂದರು. 

ಮೃತ್ಯುಂಜಯ  ಗ್ರಾಮೀಣಾಭಿವೃದ್ಧಿ ಶಿಕ್ಷಣ  ಸಂಸ್ಥೆ ಅಧ್ಯಕ್ಷ ಡಾ. ಎಂ.ಎಂ.ತಿರ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಯಾವ ವಿಷಯದಲ್ಲಿಯೊ ಹಿಂದುಳಿಯಲು ಸಾಧ್ಯವಿಲ್ಲ. ಆದರೆ ಗೃಹಿಕೆಯಲ್ಲಿ ಒಂದು ಮಗುವಿನಿಂದ ಇನ್ನೊಂದು ಮಗುವಿನಲ್ಲಿ ವ್ಯತ್ಯಾಸ ಇರುತ್ತದೆ. ಅದಕ್ಕೆ ಮನೆ ಮತ್ತು ಶಾಲೆ  ಪರಿಸರ, ದೈಹಿಕ ಮತ್ತು ಮಾನಸ್ಸಿಕ ಕುಗ್ಗುವಕೆ ಕಾರಣವಾಗುತ್ತದೆ ಇತರ ಮಕ್ಕಳ ಜೊತೆಗೆ ಜ್ಞಾನವನ್ನ ಹಂಚಿಕೊಳ್ಳಲು ಈ ತಂತ್ರಜ್ಞಾನ ಜೊತೆಗೆ ಮೂಲ ಸಂಸ್ಕೃತಿಯ ವಸ್ತುಪ್ರದರ್ಶನ ಬಹಳಷ್ಟು ಸಹಕಾರಿಯಾಗುತ್ತದೆ ಎಂದರು.  

ಸಂಸ್ಥೆ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ, ಮಕ್ಕಳ ಜ್ಞಾನ ಶಕ್ತಿ ಹೆಚ್ಚಿಸಲು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ಮಕ್ಕಳಲ್ಲಿ ಹುದಗಿರುವ ಜ್ಞಾನ ವಿಕಾಸಗೊಳಿಸಲು ನಮ್ಮ ಸಂಸ್ಥೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಾಕಲಾಗುತ್ತಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಂಕನಬದ್ದರಾಗಿ ನಿಂತಿದ್ದೇವೆ ಎಂದರು. 

ಸಾಹಿತಿ ಶಿವಾನಂದ ಮ್ಯಾಗೇರಿ, ಕಲಘಟಗಿ ತಹಶೀಲ್ದಾರ್ ಯಲ್ಲಪ್ಪ ಕೋಣಿನವರ ಸೇರಿದಂತೆ ಮಕ್ಕಳ ಪಾಲಕರು ಮಕ್ಕಳ ವಸ್ತು ಪ್ರದರ್ಶನದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.   

ಸಂಸ್ಥೆ ಕಾರ್ಯದರ್ಶಿ ಡಾ. ರಾಣಿ ಎಂ ತಿರ್ಲಾಪುರ, ಪ್ರಾಚಾರ್ಯ ಮಂಜುನಾಥ ಕೆ ಎಚ್ ಉಪಪ್ರಾಚಾರ್ಯ ಗೀರೀಶ ಡಿ.ಬಿ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳ ಪಾಲಕರು, ಮಕ್ಕಳು ಹಾಗೂ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ