ಪೋಷಣ ಮಾಸಾಚರಣೆ: ವಿವಿಧ ಸ್ಪರ್ಧೆ
ಮುಂಡಗೋಡ:ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ಪಟ್ಟಣದ ಆದಿಜಾಂಭವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ವಿವಿಧ ಸ್ಪರ್ಧೆಗಳನ್ನು ಏರ್ಪಾಡಿಸಲಾಗಿತ್ತು.
ವಿದ್ಯಾರ್ಥಿಗಳು ನಾನಾ ತರದ ಕಾಳುಗಳಿಂದ ಚಿತ್ರಗಳನ್ನು ಬಿಡಿಸಿದ್ದರು. ಸ್ಪರ್ಧೆಯಲ್ಲಿ ಮಮತಾ ಬಿಜಾಪುರ ಮತ್ತು ಕಲ್ಪನಾ ಪೂಜಾರಿ ಪ್ರಥಮ, ಯೂನಿಶ ಹಲಗಿ ದ್ವಿತೀಯ, ಮಹಮ್ಮದ್ ಜಮಖಂಡಿ ತೃತೀಯ ಮತ್ತು ವೀಣಾ ಚಲವಾದಿ, ಲಕ್ಷ್ಮೀ ಆಡೂರ ಮತ್ತು ಚೈತ್ರಾ ಕೊರವರ ಸಮಾಧಾನಕರ ಬಹುಮಾನ ಪಡೆದರು. ಎಸ್.ಎಸ್.ಭದ್ರಶೆಟ್ಟಿ, ಆರ್.ಎಸ್.ಅಕ್ಕಿವಳ್ಳಿ, ಎಂ.ಎಸ್.ಪಾಟೀಲ, ಎಸ್.ಸಿ.ಪಾಟೀಲ, ಆರ್.ಬಿ.ಚವಾಣ, ಪಿ.ಸಿ.ಐನಾಪುರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಸಂಸ್ಥೆ ಅಧ್ಯಕ್ಷ ಎಸ್.ಫಕ್ಕೀರ್ಪ, ಮುಖ್ಯ ಶಿಕ್ಷಕ ಎಸ್.ಡಿ.ಮುಡೆಣ್ಣವರ ಉಪಸ್ಥಿತರಿದ್ದರು.