ಬಳ್ಳಾರಿ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಚುನಾವಣೆಗೆ ಸೂಚನೆ
ಬಳ್ಳಾರಿ ಡಿ.10, ಬಳ್ಳಾರಿ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಆಡಳಿತಾಧಿಕಾರಿಗೆ ಸಂಘಕ್ಕೆ ಆಡಳಿತ ಮಂಡಳಿ ಚುನಾವಣೆ ನಡೆಸುವಂತೆ ಬಳ್ಳಾರಿ ಜಿಲ್ಲಾ ಸಹಕಾರ ಇಲಾಖೆಯ ಸಂಘಗಳ ನೋಂದಣಿ ಅಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಸೂಚಿಸಿದ್ದಾರೆ.
ಈ ಕುರಿತು ಸಹಕಾರ ಇಲಾಖೆಯಿಂದ ಬಳ್ಳಾರಿ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘಕ್ಕೆ ನೇಮಕಗೊಂಡ ಆಡಳಿತಾಧಿಕಾರಿಗೆ ಪತ್ರವನ್ನು ಕಳುಹಿಸಿರುವ ಉಪನಿಬಂಧಕರು, ಸದರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ಜರುಗಿಸಿ ಚುನಾಯಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಲು ದಿನಾಂಕ: 22.07.2022ರಂದು ಆದೇಶವಾಗಿರುತ್ತದೆ. ಅದರನ್ವಯ ದಿ.01.09.2022 ರಂದು ಸ್ವಯಂ ಪ್ರಭಾರ ವಹಿಸಿಕೊಂಡಿರುವುದು ಸರಿಯಷ್ಟೆ. ಸಂಘದ ಅಧಿಕೃತ ದಾಖಲೆಗಳನ್ನು ಸಂಘದ ಕಾರ್ಯದರ್ಶಿ ನಿಮ್ಮ ವಶಕ್ಕೆ ನೀಡಿರುವುದಿಲ್ಲವೆಂದು ವರದಿ ಮಾಡಿರುವುದು ಕಂಡು ಬಂದಿರುತ್ತದೆ. ಆಡಳಿತಾಧಿಕಾರಿಗೆ ಮೂರು ತಿಂಗಳುಗಳು ಕಳೆದರೂ ಕೂಡ ಚುನಾವಣೆ ಕ್ರಮವಿಡದೇ ಇರುವುದನ್ನು ಪ್ರಶ್ನಿಸಿ, ಹೀಗಾಗಿ ಸಂಘಕ್ಕೆ ಚುನಾವಣೆ ನಡೆಸಲು ಒತ್ತಾಯಿಸಿ ಡಿ. 12ರಂದು ಸಂಘದ ಆಜೀವ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುತ್ತಾರೆ. ಆದ್ದರಿಂದ ಈ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳು ಮತ್ತು ಸಂಘದ ಆಜೀವ ಸದಸ್ಯರುಗಳು ಒದಗಿಸಿದ ಆಜೀವ ಸದಸ್ಯರ ಪಟ್ಟಿಯಂತೆ ನಿಯಮಾನುಸಾರ ಸಂಘದ ಆಡಳಿತ ಮಂಡಳಿ ಚುನಾವಣೆ ಜರುಗಿಸಲು ಈ ಮೂಲಕ ತಿಳಿಯಪಡಿಸಿದೆ ಎಂದು ಆದೇಶಿಸಿದ್ದಾರೆ ಎಂದು ಸಂಘದ ಆಜೀವ ಸದಸ್ಯರಾದ ಜಿ.ರುದ್ರ್ಪ, ಗೋವಿಂದಪ್ಪ, ಟಿ.ನೀಲಪ್ಪ, ಟಿ.ತಿಮ್ಮಪ್ಪ, ಕೆ.ನಾರಾಯಣಪ್ಪ, ಬಿ.ರಾಮಲಿಂಗಪ್ಪ, ಮೆಡಿಕಲ್ ಮಲ್ಲಿಕಾರ್ಜುನ, ವಿಜಯಕುಮಾರ್, ಬಸವರಾಜ್, ರಂಗನಾಥ, ಹೆಚ್.ದುರುಗಣ್ಣ, ವೈ.ನಾರಾಯಣಸ್ವಾಮಿ, ಬಿ.ಚಿದಾನಂದಪ್ಪ, ಬಿ.ಶಾಂತಕುಮಾರ್, ಬಿ.ಶ್ರೀನಿವಾಸಲು, ಜಿ.ಮಲ್ಲಪ್ಪ, ಬಿ.ವೆಂಕಟೇಶಲು, ಟಿ.ರಂಗಯ್ಯ, ವಿ.ಎಸ್.ಶಿವಶಂಕರ್, ಕೆ.ಹನುಮಂತಪ್ಪ, ಟಿ.ಪಂಪಯ್ಯ, ಬಿ.ಮಲ್ಲಿಕಾರ್ಜುನ, ಗಡ್ಡಂ ತಿಮ್ಮಪ್ಪ ಮುಂತಾದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷರ ನೇಮಕ ಅಕ್ರಮ
ಇತ್ತೀಚಿಗೆ ಸಹಕಾರ ಇಲಾಖೆಯ ಜಿಲ್ಲಾ ಉಪನಿಬಂಧಕರು ಸಂಘಕ್ಕೆ ಚುನಾವಣೆಯನ್ನು ನಡೆಸಲು ಸೂಚಿಸಿದ್ದರಿಂದ ಪ್ರತಿಭಟನಾ ಧರಣಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೂ ಕೆಲವರು ಸಂಘದ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದು ಬಳ್ಳಾರಿ ಜಿಲ್ಲಾ ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರಾಗಿದ್ದ ವಿ.ಎನ್.ಗಿರಿಮಲ್ಲಪ್ಪನವರು ನಿಧನರಾದ ಹಿನ್ನೆಲೆಯಲ್ಲಿ ಮಾಜಿ ಉಪಾಧ್ಯಕ್ಷರಾಗಿದ್ದ ಎನ್.ಕೆ.ಸದಾಶಿವಪ್ಪ ಅವರು ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಹಂಗಾಮಿ ಅಧ್ಯಕ್ಷರ ಆಯ್ಕೆ ಕಾನೂನುಬಾಹಿರ ಮತ್ತು ಅಕ್ರಮವಾಗಿದೆ. ಕೆಲವು ಪಟ್ಟಭದ್ರಹಿತಾಸಕ್ತಿಗಳು ಸಮಾಜಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ವಾಲ್ಮೀಕಿ ಸಮಾಜದ ಬಾಂಧವರು ಅಂತಹ ಸುಳ್ಳು ಸುದ್ದಿಗಳಿಗೆ, ವದಂತಿಗಳಿಗೆ ಕಿವಿಗೊಡಬಾರದು. ಈ ಬಗ್ಗೆ ಸಹಕಾರ ಇಲಾಖೆಯ ಉಪನಿಬಂಧಕರು ಸೂಕ್ತ ಕ್ರಮಜರುಗಿಸಬೇಕೆಂದು ಸಂಘದ ಆಜೀವ ಸದಸ್ಯರಾದ ಜಿ.ರುದ್ರ್ಪ, ಗೋವಿಂದಪ್ಪ ಅವರು ತಿಳಿಸಿದ್ದಾರೆ.