ಮನರಂಜನೆ

ರೀಲ್‌ ನಲ್ಲಿ ಮಾತ್ರ ವಲ್ಲ.. ರಿಯಲ್‌ ಲೈಫ್‌ ಲ್ಲೂ ಈ ನಟ ಸ್ಮಗ್ಲರ್‌ ...!

ರೀಲ್‌ ನಲ್ಲಿ ಮಾತ್ರ ವಲ್ಲ.. ರಿಯಲ್‌ ಲೈಫ್‌  ಲ್ಲೂ       ಈ  ನಟ ಸ್ಮಗ್ಲರ್‌  ...!

ಚೆನ್ನೈ, ಸೆ  30: ಚಿತ್ರೋದ್ಯಮ  ಡ್ರಗ್ಸ್ ಸಮಸ್ಯೆಯಿಂದ ತತ್ತರಿಸುತ್ತಿರುವ     ಸನ್ನಿವೇಶದಲ್ಲಿ   ತಮಿಳಿನ     'ಸಿಂಗಂ' ಚಿತ್ರದಲ್ಲಿ   ನಟಿಸಿದ್ದ    ಕಲಾವಿದ ನೊಬ್ಬ ಡ್ರಗ್ಸ್‌  ಸಮೇತ   ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.  

ಕಾಲಿವುಡ್  ಸ್ಟಾರ್ ಹೀರೋ  ಸೂರ್ಯ    ನಾಯಕನಾಗಿ  ನಟಿಸಿದ್ದ    ಬ್ಲಾಕ್ ಬಸ್ಟರ್ ಸಿನಿಮಾ 'ಸಿಂಗಂ'. ಈ ಚಿತ್ರದಲ್ಲಿ ಜೆಕ್ ವುಮ್ ಮಾಲ್ವಿನ್  ಎಂಬ ನೈಜೀರಿಯಾ  ನಟ  ಡ್ರಗ್ ಪೂರೈಕೆ ಗ್ಯಾಂಗ್‌  ವ್ಯಕ್ತಿಯಾಗಿ  ನಟಿಸಿದ್ದ.  ಈಗ  ಆತ ನಿಜವಾಗಿಯೂ  ಡ್ರಗ್ಸ್ ಕಳ್ಳಸಾಗಣೆ ಮಾಡಿ  ಪೊಲೀಸರಿಗೆ  ಸಿಕ್ಕಿಬಿದ್ದಿದ್ದಾನೆ. 

ಆರೋಪಿಯಿಂದ   ಪೊಲೀಸರು  ಭಾರಿ   ಪ್ರಮಾಣದ   ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  15 ಗ್ರಾಂ ಎಂಡಿಎಂಎ,  7 ಲಕ್ಷ ರೂ ಮೌಲ್ಯದ  250 ಎಂಎಲ್ ಹ್ಯಾಶ್ ಆಯಿಲ್,  ಮೊಬೈಲ್ ಫೋನ್ ಗಳು, 2,500 ನಗದು,  ಇನ್ನೂ 8 ಲಕ್ಷ ಮೌಲ್ಯದ   ಡ್ರಗ್ಸ್‌  ಅನ್ನು ಆತನ  ಬಳಿಯಿಂದ  ವಶಪಡಿಸಿಕೊಳ್ಳಲಾಗಿದೆ. ಆತನನ್ನು ಬಂಧಿಸಿರುವ  ಪೊಲೀಸರು  ಇನ್ನೂ  ಯಾವ  ರೀತಿಯ  ಮಾಹಿತಿ  ಬಿಚ್ಚಿಡಲಿದ್ದಾರೋ ಕಾದು ನೋಡಬೇಕಿದೆ.

ಸುದ್ದಿ ಓದಿ