ಸಮಾಜದಲ್ಲಿ ಮೇಲು-ಕೀಳು ಎಂಬುದಿಲ್ಲ: ಬಿದರಿ
ಶಿಗ್ಗಾವಿ 06: ದೇಶದಲ್ಲಿ ಯಾರೂ ದೊಡ್ಡವರು, ಮೇಲು-ಕೀಳಲ್ಲ. ಯಾರು ಸ್ವಾವಲಂಬಿಯಾಗಿ ಜೀವನ ನಡೆಸಿ ಸಮಾಜದಲ್ಲಿ ಮುಂದೆ ಬಂದು ತಂದೆ-ತಾಯಿ ಮತ್ತು ಕುಟುಂಬದವರನ್ನು ಗೌರವಿಸುತ್ತಾರೋ ಸತ್ಪ್ರಜೆಯಾಗುತ್ತಾರೆ ಎಂದು ನಿವೃತ್ತ ಪೋಲಿಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ಪಟ್ಟಣದ ರಪ್ತಾರ ಆಯಿ ವೆಹಿಕಲ್ ವಿದ್ಯುತ್ ಚಾಲಿತ ವಾಹನ ಮಳಿಗೆ ಉದ್ಘಾಟನೆ ಮಾಡಿ ಮಾತನಾಡಿದರು.
ರಪ್ತಾರ ಆಯಿ ಮಾಲಕ ಪ್ರಕಾಶ ವೇರ್ಣೇಕರ ಮಾತನಾಡಿದರು.
ಸಾನಿಧ್ಯವನ್ನು ವಿರಕ್ತಮಠದ ಸಂಗನಬಸವ ಶ್ರೀಗಳು ವಹಿಸಿದ್ದರು. ಉ.ಕ.ಮ. ಸಂಸ್ಥೆಗಳ ಅಧ್ಯಕ್ಷ ಶಿವಕುಮಾರ ಮೇಟಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿದರು.
ನಿವೃತ್ತ ಪೋಲಿಸ್ ಅಧಿಕಾರಿಗಳಾದ ಬಿ.ಬಿ.ಸಕ್ರಿ, ಎಫ್.ಬಿ.ಗುಳೇದ, ಪುರಸಭೆ ಸದಸ್ಯ ಪರುಶರಾಮ ಸೊನ್ನದ, ಶಂಕರಗೌಡ್ರ ಪೋಲಿಸಗೌಡ್ರ, ಪ್ರದೀಪ ವೇರ್ಣೇಕರ, ಪವನ ವೇರ್ಣೇಕರ, ಭರತೇಶ ಬಳಿಗಾರ, ಶಿಗ್ಗಾವಿ ಪೋಲಿಸ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಭಾ.ಜ.ಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ನಿರೂಪಿಸಿ ವಂದಿಸಿದರು.