ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ
ಬೇಲ್ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ
ಮುಂಬೈ; ಅ 21: ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.
ಜಾಮೀನಿಗಾಗಿ ನಿರಂತರವಾಗಿ ಕೋರ್ಟ್ ಗೆ ಅಲೆದಾಡುತ್ತಿದ್ದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆ ವಿಶೇಷ ಕೋರ್ಟ್ ನಲ್ಲಿ ನಿನ್ನೆ ನಡೆದ ವಿಚಾರಣೆಯಲ್ಲಿ ಎಸ್ ಆರ್ ಕೆ ಪುತ್ರನಿಗೆ ಬೇಲ್ ದೊರೆಯಲಿಲ್ಲ. ಬಾಂಬೆ ಹೈಕೋರ್ಟ್ ನಲ್ಲಿ ಸ್ಪೇಷಲ್ ಕೋರ್ಟ್ ನ ತೀರ್ಪಿನ್ನು ಆರ್ಯನ್ ಖಾನ್ ಪರ ವಕೀಲರು ಪ್ರಶ್ನೆ ಮಾಡಿದ್ದರು. ಆದರೆ, ಇಂದು ನಡೆಯಬೇಕಿದ್ದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದ್ದು, ಮುಂದಿನ ವಾರ ಅಂದರೆ ಅಕ್ಟೋಬರ್ 26ರಂದು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಅಕ್ಟೋಬರ್ 3ರಂದು ಮುಂಬೈನ ಐಷಾರಾಮಿ ಕ್ರೂಸ್ ಶಿಪ್ ನಲ್ಲಿ ಆರ್ಯನ್ ಖಾನ್ ಎನ್ ಸಿ ಬಿ ಅಧಿಕಾರಿಗಳಿಂದ ಬಂಧಿಯಾಗಿದ್ದರು. ಮಾದಕ ವಸ್ತುಗಳ ಬಳಕೆ, ಮಾರಾಟ ಹಾಗೂ ಖರೀದಿ ಆರೋಪಗಳನ್ನು ಎಸ್ಆರ್ ಕೆ ಪುತ್ರನ ಮೇಲೆ ಹೊರಿಸಲಾಗಿದೆ.