ತಾಳಿಕೋಟಿ

ಅಭಿವೃದ್ಧಿಯಲ್ಲಿ ಭೇದ ಭಾವ ಮಾಡಿಲ್ಲ: ಶಾಸಕ ಸೋಮನಗೌಡ

ಅಭಿವೃದ್ಧಿಯಲ್ಲಿ ಭೇದ ಭಾವ ಮಾಡಿಲ್ಲ: ಶಾಸಕ ಸೋಮನಗೌಡ

ತಾಳಿಕೋಟಿ: ಮತಕ್ಷೇತ್ರದಲ್ಲಿರುವ ಎಲ್ಲ ಜಾತಿ-ಜನಾಂಗದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಅನುದಾನವನ್ನು ಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. ಅಭಿವೃದ್ಧಿಯ ವಿಷಯದಲ್ಲಿ ನಾನೆಂದೂ ಜಾತೀಯತೆ ಮಾಡಿಲ್ಲ ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಂಡಿದ್ದೇನೆ ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು. 

ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಫತ್ತೇಪೂರ ಗ್ರಾಮದಲ್ಲಿ ರೂ. 10 ಲಕ್ಷ ಮೊತ್ತದ ಅಂಬೇಡ್ಕರ ಭವನಕ್ಕೆ ಶಂಕುಸ್ಥಾಪನೆ ಮಾಡಿ ದಲಿತ ಸಮಾಜದ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. 

ನನ್ನ ಮತಕ್ಷೇತ್ರದ ಸುಮಾರು 120 ಗ್ರಾಮಗಳು ಹಾಗೂ 29 ತಾಂಡಾಗಳಿಗೂ ಅನುದಾನವನ್ನು ಕೊಟ್ಟಿದ್ದೇನೆ. ಪ್ರತಿ ಗ್ರಾಮದಲ್ಲೂ ಒಂದಿಲ್ಲಾ ಒಂದು ಕಾಮಗಾರಿಗಳು ಇಂದು ನಡೆಯುತ್ತಿವೆ. ಅಭಿವೃದ್ಧಿಯ ವಿಷಯದಲ್ಲಿ ನಾನು ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ನಾನು ಕ್ಷೇತ್ರದ ಎಲ್ಲ ವರ್ಗ ಜನಾಂಗದವರ ಶಾಸಕ ಅವರೆಲ್ಲರ ಹಿತ ನನಗೆ ಮುಖ್ಯವಾಗಿದೆ ಎಂದರು. 

ಈ ಸಮಯದಲ್ಲಿ ಸಮಾಜದ ಗಣ್ಯರಾದ ರಮೇಶ ದೊಡಮನಿ, ಯಮನಪ್ಪ ಹೊನ್ನಳ್ಳಿ, ನಿಂಗಪ್ಪ ಹೊನ್ನಳ್ಳಿ, ನಿಂಗಪ್ಪ ತಾಳಿಕೋಟಿ, ಗೌತಮ್ ಫತ್ತೇಪೂರ, ಗ್ರಾ.ಪಂ. ಅಧ್ಯಕ್ಷ ನಿಂಗನಗೌಡ ಚೌದ್ರಿ, ಗ್ರಾ.ಪಂ. ಸದಸ್ಯರ ಬಸು ಏವೂರ, ಪ್ರತಿನಿಧಿ ಅಯ್ಯಾಜ್ ಮಕಾನದಾರ, ಬಿಜೆಪಿ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ಸೋಮನಗೌಡ ಹಾದಿಮನಿ, ಸಾಹೇಬಣ್ಣ ಆಲ್ಯಾಳ, ಮುತ್ತುಗೌಡ ಮಾಳಿ ಇದ್ದರು. 


ಸುದ್ದಿ ಓದಿ