ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟವಾಗಿಲ್ಲ

ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟವಾಗಿಲ್ಲ

ತಿಪ್ಪೇಸ್ವಾಮಿ ವೆಂಕಟೇಶ್ 

 ಹಗರಿಬೊಮ್ಮನಹಳ್ಳಿ.ಫೆ.17 : ಜೆಡಿಎಸ್ ಪಕ್ಷದ ವರಿಷ್ಠರಿಂದ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇನ್ನು ಘೋಷಣೆ ಮಾಡಿಲ್ಲ ಇನ್ನು ಕೆಲವೇ ದಿನಗಳಲ್ಲಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡುತ್ತಾರೆ ಅಲ್ಲಿಯವರೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಗೊಂದಲಕ್ಕೀಡಾಗದಂತೆ ನಿಯೋಜಿತ ಅಭ್ಯರ್ಥಿ ತಿಪ್ಪೇಶ್ವಾಮಿ ವೆಂಕಟೇಶ್ ಹೇಳಿದರು. 

ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜೆಡಿಎಸ್ ಕಾರ್ಯಾಧ್ಯಾಕ್ಷರಾದ ಎನ.ಎಂ.ನಬಿ ಅವರು ಪಕ್ಷದ ಪ್ರಚಾರಕ್ಕೆ ಬಂದಿದ್ದು ಸಂತೋಷ ಉಂಟುಮಾಡಿದೆ. ಆದರೆ ಪರಮೇಶ್ವರ ಅವರನ್ನು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ್ದು ಬೇಸರ ತರಿಸಿದೆ. ಎಕೆಂದರೆ ಪಕ್ಷದಿಂದ ಪ್ರಕಟವಾದ ಮೊದಲ ಪಟ್ಟಿಯಲ್ಲಿ ನಮ್ಮ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟವಾಗಿಲ್ಲ ಆದರೆ ಜವಾಬ್ದಾರಿಯುತ ಪಕ್ಷದ ರಾಜ್ಯ ಪದಾಧಿಕಾರಿಯೊಬ್ಬರ ಘೋಷಣೆ ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿದೆ ಎಂದು ಬೇಸರ ವ್ಯೆಕ್ತಪಡಿಸಿದರು. 

ದೇಶಕ್ಕೆ ಹೇಗೆ ಸಂವಿಧಾನ ದಾರಿ ದೀಪವಾಗಿದೆಯೋ ಹಾಗೆ ಪಕ್ಷಕ್ಕೆ ತನ್ನದೆ ಆದ ಸಿದ್ಧಾಂತಗಳಿವೆ. ಅವುಗಳನ್ನು ನಾನು ಎಂದು ಮೀರುವುದಿಲ್ಲ, ಪಕ್ಷದ ವರಿಷ್ಠರು ಯಾರನ್ನು ಅಭ್ಯರ್ಥಿ ಎಂದು ಘೋಷಿಸುವರು ಅವರಿಗೆ ನಮ್ಮ ಸಂಪೂರ್ಣ ಸಹಮತವಿರುತ್ತದೆ. ಇಲ್ಲಿ ಯಾವುದೇ ಅಸಮಾಧಾನವಿಲ್ಲ, ಜೆಡಿಎಸ್ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಂಡು ಪಕ್ಷದ ಪ್ರಚಾರಕ್ಕೆ ಮುಂದಾಗಿದ್ದರೆ ಇನ್ನು ಹೆಚ್ಚಿ ಯಶಸ್ಸು ಲಭಿಸುತ್ತಿತ್ತು. ಕೆಲ ಸಕ್ರೀಯ ಕಾರ್ಯಕರ್ತರಿಗೆ ಇದು ಮುಜುಗರ ಉಂಟುಮಾಡಿದೆ. ಎನ್‌.ಎಂ.ನಬಿ ಅವರು ಘೋಷಿಸಿರುವ ಅಭ್ಯರ್ಥಿಯಿಂದ ಪಕ್ಷಕ್ಕೆ ಎನು ಕೊಡುಗೆ ಎಂಬುದು ಇಲ್ಲ ಕೇತ್ರದಲ್ಲಿ ಜೆಡಿಎಸ್ ತನ್ನದೆ ಆದ ವರ್ಚಸ್ಸನ್ನು ಉಳಿಸಿಕೊಂಡಿದೆ. ಈ ಬಾರಿ ಜನರು ಆಶೀರ್ವದಿಸಲಿದ್ದಾರೆ ಇದನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಯ ಆಯ್ಕೆಯಾಗಲಿ ನಾನು ಅಭ್ಯರ್ಥಿಯಾಗಲು ಪ್ರಬಲ ಆಕಾಂಕ್ಷಿಯಾಗಿದ್ದೆನೆ ಎಂದರು. 

ಗೋಪಿ, ರಾಮನಗೌಡ್ರು, ಶರಣಪ್ಪ, ರೋಷನ್, ಜಮದಗ್ನಿ, ರಾಜು ನವೀನ್ ಕುಮಾರ್, ಕೊಟ್ರೇಶ್ ಕೊಪ್ಪಳ, ಸತೀಶ್ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ