ಲೇಖನಗಳು

ಪಕ್ಷ ಮತ್ತು ಪಕ್ಷದ ನಾಯಕರನ್ನು ವೈಭವೀಕರಿಸಿ ಬರೆಯುವ ಪತ್ರಿಕೆಗಳು ಘನತೆ ಕಾಪಾಡಿಕೊಳ್ಳೋ ಅಗತ್ಯವಿದೆ

ಪಕ್ಷ ಮತ್ತು ಪಕ್ಷದ ನಾಯಕರನ್ನು ವೈಭವೀಕರಿಸಿ ಬರೆಯುವ ಪತ್ರಿಕೆಗಳು ಘನತೆ ಕಾಪಾಡಿಕೊಳ್ಳೋ ಅಗತ್ಯವಿದೆ

ಪಕ್ಷಾತೀತ ಪತ್ರಿಕೆಗಳು ದರ​‍್ಣಕ್ಕೂ ಸಿಗದೆ ಮರೆಮಾಚಿ ದುಡಿಯುತ್ತಿವೆ. ಮರ್ಯಾದೆಗಂಜಿ ಬದುಕು ಸಾಗಿಸುತ್ತಿವೆ. ಹೇಳ ಹೆಸರಿಲ್ಲದಂತಾಗಿ ತಾನಿರುವ  ಶವಪೆಟ್ಟಿಗೆ ಕೊನೆ ಮೊಳೆ ಹೊಡೆಸಿಕೊಳ್ಳಲು ಕಾದು ಕೂತಿವೆ. ಇಂತಹ ಪರಿಸ್ಥಿತಿಯಲ್ಲಿ ಬದುಕುವ ಜನಗಳು ಸತ್ಯಾಸತ್ಯತೆಯನ್ನು ಅರಿಯಲು ಹೆಣಗಾಡುತ್ತಾ ಗೊಂದಲದ ವಾತಾವರಣದಲ್ಲಿ ಬದುಕುತ್ತಿದ್ದಾರೆ.  

ಸುದ್ದಿ ಮಾಧ್ಯಮಗಳೆಂದರೆ ಜನರಲ್ಲಿ ಎಲ್ಲಿಲ್ಲದ ನಂಬಿಕೆ. ಯಾವುದೇ ವ್ಯಕ್ತಿಯಾಗಲಿ ತಾನು ಕಣ್ಣಾರೆ ನಡೆದ ಘಟನೆಯನ್ನು ಎಷ್ಟೇ ಪ್ರಾಮಾಣಿಕವಾಗಿ. ಯಥಾವತ್ತಾಗಿ ಕಾಳಜಿಯಿಂದ ಇತರರಿಗೆ ವಿವರಿಸಿ ಮನವರಿಕೆ ಮಾಡಿದರೂ ಅ ಮಂದಿ ಖಂಡಿತಾ ಒಪ್ಪುವುದಿಲ್ಲ. ಅದೇ ವಿಷಯವು ಮಾರನೆ ದಿನ ಯಾವುದೇ ರೂಪದಲ್ಲಿ ಪತ್ರಿಕೆಯಲ್ಲಿ ಪ್ರಕಟವಾದರೆ ಸಾಕು ಅದನ್ನು ಯಾವುದೇ ಸಂಶಯವಿಲ್ಲದೆ ಒಪ್ಪುತ್ತಾರೆ. ಅದನ್ನು ತಮ್ಮದೇ ಜೀವನದಲ್ಲಾದ ಘಟನೆ ಏನೋ ಎಂಬಂತೆ ಭಾವುಕರಾಗುತ್ತಾರೆ.  

ಇದರ ಅರ್ಥ.... ಜನರು ಪತ್ರಿಕೆಗಳ ಮೇಲೆ ಇಟ್ಟಿರುವ ಭರವಸೆ. ನಂಬಿಕೆ ಎಂದರೆ ತಪ್ಪಾಗಲಾರದು.  ಈ ಕಾರಣದಿಂದಲೆ ಹಿಂದಿನ ಕಾಲದಲ್ಲಿ ಪತ್ರಿಕೆ ಮತ್ತು ಪತ್ರಕರ್ತರಿಗೆ ಅತ್ಯಂತ ಗೌರವಾದಾರಗಳು ದೊರಕುತ್ತಿದ್ದವು. ಗಣ್ಯಾತಿಗಣ್ಯರನ್ನು ಗೌರವಿಸುವಂತೆ ಸಮಾಜ ಅವರನ್ನು ಕಾಣುತ್ತಿತ್ತು. ಸಮಾಜದಲ್ಲಿನ ಸಮಸ್ಯಗಳ ಪರಿಹಾರೋಪಾಯದಂಥ ಸಂದಿಗ್ದ ಸಮಯದಲ್ಲಿ ಅಧಿಕಾರದಲ್ಲಿರುವ ನಾಯಕರು ಪತ್ರಿಕೆಗಳ ಮತ್ತು ಪತ್ರಕರ್ತರ ಸಲಹೆ ಬಯಸುತ್ತಿದ್ದರು. ಅವರ ಮಾರ್ಗದರ್ಶನದಂತೆ ಸಮಾಜ ಸುಧಾರಣೆಗೆ ಮುಂದಾಗುತ್ತಿದ್ದರು. ಸತ್ಯನಿಷ್ಠ ವರದಿಗಳನ್ನಾಧರಿಸಿ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಹಾಗೂ ಸಭೆ ಸಮಾರಂಭಗಳಲ್ಲಿ ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲಿ ಪತ್ರಿಕೂಗಳನ್ನು ಅಭಿನಂದಿಸುತ್ತಿದ್ದರು.  ಈ ಕಾರಣಕ್ಕಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವು *ಕಾರ್ಯಾಂಗ*  *ಶಾಸಕಾಂಗ* *ನ್ಯಾಯಾಂಗ*  ದಂತೆ *ಪತ್ರಿಕಾರಂಗ*  ಅಥವಾ *ಸುದ್ದಿಮಾಧ್ಯಮ ರಂಗ*  ವನ್ನು ಆಡಳಿತದ ನಾಲ್ಕನೇ ಅಂಗವೆಂದು ಪರಿಗಣಿಸಿ ಹಕ್ಕನ್ನು ನೀಡಿದೆ. ಮೂಲಭೂತ ಹಕ್ಕುಗಳ ಅಡಿಯಲ್ಲಿ ವಿಶೇಷವಾದ ಸ್ಥಾನವನ್ನು ನೀಡಿ ಅವಕಾಶ ಒದಗಿಸಿದೆ.  

ಇಂತಹ ವಿಶೇಷ ಸ್ಥಾನ ಮತ್ತು ಗೌರವವನ್ನು ಪಡೆದ ಸುದ್ದಿ ಮಾಧ್ಯಮಗಳು ಇಂದು ತಮಗಿರುವ ಸಾಮರ್ಥ್ಯವನ್ನು. ಕಾರ್ಯದಕ್ಷತೆಯನ್ನು ವೃತ್ತಿ ಗೌರವವನ್ನು ಮರೆತು ಒಂದು ಪಕ್ಷದ. ಒಂದು ಸಮುದಾಯದ ಮತ್ತು ವರ್ಗದ ಕೈಗೊಂಬೆಗಳಾಗಿ ಜೀತದಾಳುಗಳಂತೆ ಬದಕುತ್ತಿವೆ. ವಾಸ್ತವವನ್ನು ಮರೆಮಾಚಿ ಸಮಾಜಕ್ಕೆ ಸುಳ್ಳುಗಳನ್ನೇ ಬಿತ್ತುತ್ತಿವೆ. ತಮ್ಮ ಆತ್ಮ ಗೌರವಕ್ಕೆ ತಾವೇ ದಕ್ಕೆ ತಂದುಕೊಂಡಿವೆ. ಸುಧಾರಿತ ಸಮಾಜದ ನಿರ್ಮಾಣಕ್ಕೆ ಜವಾಬ್ದಾರಿತದ ಹೊಣೆಯನ್ನು  ಹೊತ್ತು ನಿಭಾಯಿಸಬೇಕಾದ ಕ್ಷೇತ್ರ ಯಾರದೋ ಕೈ ಗಂಬೆಯಾಗಿ ಕುಣಿಯುತ್ತಿದೆ.  

ಇದರ ಪರಿಣಾಮವೇನಾಗಬಹುದು ಎಂಬುದನ್ನು ಅರಿಯದೆ ಕ್ಷಣಿಕ ಸುಖದ ಬೆನ್ನತ್ತಿ ಭವಿಷ್ಯವನ್ನು ಬಲಿ ಕೊಡುತ್ತಿವೆ. ತಮ್ಮ ವೃತ್ತಿ ಬದುಕಿನ ಘನತೆಗೆ ಬೆಲೆ ಕೊಡದ ಪಕ್ಷಗಳನ್ನು ಮತ್ತು ಪಕ್ಷದ ನಾಯಕರನ್ನು ವೈಭವೀಕರಿಸಿ ಬರೆದು ಸುದ್ದಿ ಮಾಡಿ ಬೆಳೆಸುತ್ತಿವೆ. ಅವರು ಮಾಡಿದ ತಪ್ಪುಗಳನ್ನು ಮುಚ್ಚಿಟ್ಟು ಸಣ್ಣ ಸೇವೆಯನ್ನು ದೊಡ್ಡದಾಗಿ ಬಿಂಬಿಸಿ ಅವರನ್ನು ಮಹಾನಾಯಕರನ್ನಾಗಿ ರೂಪಿಸುತ್ತಿವೆ. ಅಂದರೆ ಇದರ ಅರ್ಥವೇನು.? ಅವರಿಗೆ ಮಾರಾಟವಾಗಿದ್ದಾರೆ ಅಂತಲೋ?  ಅಥವಾ ತಾವು ಇಂತಹದ್ದನ್ನೇ ಬೆಂಬಲಿಸುತ್ತೇವೆ ಅಂತಲೋ? ಅಥವಾ ಪತ್ರಕಾ ಧರ್ಮವೇ ಇದು. ಎಂದು ಪ್ರತಿಪಾದಿಸುವ ಸಲುವಾಗಿಯೋ ಎಂಬುದನ್ನು ಇಂದಿನ ಸುದ್ದಿ ಮಾಧ್ಯಮ ಕ್ಷೇತ್ರವು ಸ್ಪಷ್ಟಪಡಿಸಬೇಕಿದೆ.  

ಮೊನ್ನೆ ನಾನೊಂದು ಪತ್ರಿಕಾ ಒಕ್ಕೂಟ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದೆ. ಆ ಸಮಾರಂಭದ ಆಯೋಜಕರು ತಾವೇ ಬೆಂಬಲಿಸಿ ಬೆಳಸಿದ ರಾಜಕೀಯ ನಾಯಕರನ್ನು ಪತ್ರಿಕಾ ದಿನಾಚರಣೆಯ ಸಮಾರಂಭದ ಉದ್ಘಾಟಕರನ್ನಾಗಿ. ಅಥಿತಿಗಳನ್ನಾಗಿ ಮತ್ತು ಅಧ್ಯಕ್ಷರನ್ನಾಗಿ ಆಹ್ವಾನಿಸಿದ್ದರು. ಅವರ ಜೊತೆಗೆ ಇನ್ನೂ ಅನೇಕ ಸ್ಥಳಿಯ ನಾಯಕರನ್ನು ಬಹಳ ಪ್ರೀತಿ ಗೌರವದಿಂದ ಆಹ್ವಾನಿಸಿದ್ದರು. ಆದರೆ ಯಾವ ಒಬ್ಬ ರಾಜಕಾರಣಿಯೂ (ಸ್ಥಳಿಯವರೂ) ಸಮಾರಂಭಕ್ಕೆ ಆಗಮಿಸಲಿಲ್ಲ. ಅರ್ಥವೇನು? ಇವರು ಓಟ್ ಬ್ಯಾಂಕ್ ಅಲ್ಲವೆಂತಲೋ?  ನಮ್ಮ ಕೈಯಲ್ಲಿರುವವರೆಂತಲೋ?  ಅಥವಾ ಇವರ ಕಾರ್ಯಕ್ರಮಕ್ಕೆ ಹೋದರೂ ನಡೆಯುತ್ತದೆ. ಹೋಗದಿದ್ದರೂ. ಅಂತಲೋ? ತಿಳಿಯದಾಗಿದೆ.  

ತಮ್ಮನ್ನು ಹೊಗಳಿ ಅಟ್ಟಕ್ಕೇರೀಸೀ ಬೆಳಸಿದ ಪತ್ರಿಕೆಗಳ ಬಗ್ಗೆ ಗೌರವವಿಲ್ಲದ ಇಂತಹ ನಾಯಕರು ಸಮಾಜವನ್ನು ಹೇಗೆ ಸುಧಾರಿಸುತ್ತಾರೆ. ಆದರ್ಶ ಸಮಾಜದ ನಿರ್ಮಾತೃ ಕ್ಷೇತ್ರವಾದ ಸುದ್ದಿ ಮಾಧ್ಯಮ ಕ್ಷೇತ್ರವನ್ನು ನಿರ್ಲಕ್ಷಿಸುವುದು ಹೇಯ ಕೃತ್ಯವೆಂತಲೇ ನನ್ನ ಭಾವನೆ. ಸಮಾಜದ ಆಗುಹೋಗುಗಳನ್ನು ಜನರ ಮುಂದಿರಿಸಿ ನ್ಯಾಯ ಕೊಡಿಸುವ ಪತ್ರಿಕಾರಂಗವನ್ನು ಕಡೆಗಣನೆ ಮಾಡುವುದು ಸಂವಿಧಾನವನ್ನು ಅವಮಾನಿಸಿದಂತೆ.  

ದುರಾದೃಷ್ಟವೆಂದರೆ ಈ ನಮ್ಮ ಸುದ್ದಿ ಮಾಧ್ಯಮಗಳು ಕೂಡ ಅಂತವರನ್ನೇ ಅಟ್ಟಕ್ಕೇರಿಸಿ ಕೂರಿಸುತ್ತವೆ. ಘನತರವಾದ ಸಮಾರಂಭಗಳಿಗೆ ಅಂತವರನ್ನೇ ಆಹ್ವಾನಿ ತಮ್ಮ ಗೌರವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿವೆ.  

ಇನ್ನಾದರೂ ಪತ್ರಿಕಾ ಮಾಧ್ಯಮ ಅಥವಾ ಸುದ್ದಿ ಮಾಧ್ಯಮಗಳು ಹಾಗೂ ಪತ್ರಕರ್ತರು ತಮ್ಮನ್ನು ಅವಮಾನಿಸಿದ. ತಮಗೆ ಅಗೌರವ ತೋರಿಸಿದ. ನಿಕೃಷ್ಟವಾಗಿ ಕಂಡ  ಪಕ್ಷ ಮತ್ತು ರಾಜಕೀಯ ಧುರೀಣರನ್ನು ಕಡೆಗಣಿಸಿ ಗೌಯುವಯುತ ಸಮಾರಂಭಗಳನ್ನು ಆಚರಿಸುವಂತಾಗಲಿ.  ತಮ್ಮ ವೃತ್ತಿ ಬದುಕಿನ ಘನತೆಯನ್ನು ಕಾಪಾಡಿಕೊಂಡು ನೈಜ ಘಟನೆಗಳನ್ನು ಯಥಾವತ್ತಾಗಿ ಬಿತ್ತರಿಸಿ ಸಮಾಜದ ಪ್ರಗತಿಗೆ. ಶಾಂತಿಗೆ ಹಾಗೂ  ವೃತ್ತಿ ಬದುಕಿನ ಭದ್ರತೆಗೆ ಕಂಕಣ ಬದ್ದರಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಲಿ.  

ಯಾವುದೇ ಪಕ್ಷದ ಪರವಾಗಿರದೆ. ನಿಷ್ಪಕ್ಷಪಾತದಿಂದ ಕಾರ್ಯ ಸಾಗುತ್ತಿರಲಿ ಎಂಬುದೆ ನನ್ನ ಅಭಿಮತವಾಗಿದೆ.  

- ವೆಂಕಟೇಶ ಈಡಿಗರ  

ರಾಣೇಬೆನ್ನೂರು  

9008698311  


ಸುದ್ದಿ ಓದಿ